ಹಿಂದೂಗಳಿಗೆ ಜಾತ್ಯತೀತತೆಯನ್ನು ಕಲಿಸುವ ಕಪಟಿ ಜಾತ್ಯತೀತವಾದಿಗಳು ಈ ಬಗ್ಗೆ ಬಾಯಿ ಬಿಡುವರೇ ? ಅಯೋಧ್ಯೆಯ ಶ್ರೀರಾಮಮಂದಿರಕ್ಕಾಗಿ ಇದುವರೆಗೆ ಎಷ್ಟು ಅಲ್ಪಸಂಖ್ಯಾತರು ದೇಣಿಗೆ ನೀಡಿದ್ದಾರೆ, ಎಂಬುದು ಸಹ ಬೆಳಕಿಗೆ ಬರಬೇಕು !
ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಶ್ರೀ ರಾಮಜನ್ಮಭೂಮಿ ಪ್ರಕರಣದ ತೀರ್ಪಿನಲ್ಲಿ, ಮಸೀದಿ ನಿರ್ಮಿಸಲು ಮುಸಲ್ಮಾನ ಪಕ್ಷಕ್ಕೆ ೫ ಎಕರೆ ಭೂಮಿಯನ್ನು ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು. ಅದಕ್ಕನುಸಾರ ನೀಡಲಾಗಿದ್ದ ಭೂಮಿಯಲ್ಲಿ ಮಸೀದಿಯನ್ನು ಕಟ್ಟಲು ಲಖನೌ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ರೋಹಿತ ಶ್ರೀವಾಸ್ತವ ಅವರು ೨೧ ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಜಮೀನಿನಲ್ಲಿ ಮಸೀದಿಯ ಜೊತೆಗೆ ಆಸ್ಪತ್ರೆ, ಸಾರ್ವಜನಿಕ ಪಾಕಶಾಲೆ, ಗ್ರಂಥಾಲಯ, ವಸ್ತು ಸಂಗ್ರಹಾಲಯ ಇತ್ಯಾದಿಗಳನ್ನು ನಿರ್ಮಿಸಲಾಗುವುದು.