|
|
ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದ ಹಾಥರಸದಲ್ಲಿ ೧೯ ವರ್ಷದ ಯುವತಿಯ ಮೇಲೆ ತಥಾಕಥಿತ ಅತ್ಯಾಚಾರ ಹಾಗೂ ಥಳಿಸಿದ ನಂತರ ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ ಪ್ರಕರಣದಿಂದ ರಾಜ್ಯದಲ್ಲಿ ಕೋಮು ಗಲಭೆಗಳನ್ನು ಭುಗಿಲೆಬ್ಬಿಸುವ ಸಂಚು ರೂಪಿಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ರಾತ್ರೋರಾತ್ರಿ ಒಂದು ನಕಲಿ ಜಾಲತಾಣಗಳನ್ನು ನಿರ್ಮಿಸಲಾಗಿತ್ತು. ಈ ಮೂಲಕ ಕೋಮು ಗಲಭೆಗೆ ಕಾರಣವಾಗುವಂತೆ ಪಿತೂರಿ ನಡೆಸಲಾಯಿತು. justiceforhathrasvictim.carrd.co ಈ ಹೆಸರಿನಲ್ಲಿ ಜಾಲತಾಣವನ್ನು ನಿರ್ಮಿಸಲಾಗಿದೆ. ಇದರಲ್ಲಿ ‘ಹಾಥರಸ ಪ್ರಕರಣದ ನಂತರ ಹಿಂಸಾಚಾರವನ್ನು ಪ್ರಚೋದಿಸಲು ಏನು ಮಾಡಬೇಕು ಮತ್ತು ಏನು ಮಾಡಬಾರದು’, ಎಂಬುದರ ಕುರಿತು ವಿಸ್ತಾರವಾಗಿ ಹೇಳಲಾಗಿದೆ ಎಂದು ಹೇಳಲಾಗುತ್ತಿದೆ. ಈ ಜಾಲತಾಣಕ್ಕಾಗಿ ಇಸ್ಲಾಮಿಕ್ ರಾಷ್ಟ್ರಗಳು ಹಣ ಪೂರೈಸಿದ್ದು, ಅದೇರೀತಿ ‘ಇದರಲ್ಲಿ ತಥಾಕಥಿತ ಮಾನವ ಹಕ್ಕುಗಳ ಗುಂಪು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಈ ಸಂಸ್ಥೆಯ ಕೈವಾಡವೂ ಇತ್ತೇ ? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಸರಕಾರಕ್ಕೆ ವರದಿ ಕಳುಹಿಸಲಾಗಿದೆ. ಇದರಲ್ಲಿ ರಾಜ್ಯದಲ್ಲಿ ಹಿಂಸಾಚಾರಕ್ಕೆ ೧ ಸಾವಿರ ಕೋಟಿ ರೂಪಾಯಿಗಳನ್ನು ಪೂರೈಸಲಾಗಿದೆ ಎಂದು ಹೇಳಲಾಗಿದೆ.
ಜಾಲತಾಣದಿಂದ ಹಿಂಸಾಚಾರ ಮಾಡುವಂತೆ ಸೂಚನೆ
ಈ ಜಾಲತಾಣದಲ್ಲಿ ‘ಪೊಲೀಸರ ಹಿಡಿತದಿಂದ ಹೊರಬರುವುದು ಹೇಗೆ’, ‘ಪೊಲೀಸರನ್ನು ಹೇಗೆ ವಿರೋಧಿಸಬೇಕು’, ಎಂಬುದರ ಕುರಿತು ಹೇಳಲಾಗಿತ್ತು. ಬಂಧನದಿಂದ, ಹಾಗೆಯೇ ‘ಪೊಲೀಸರು ಹಾರಿಸಿದ ಅಶ್ರುವಾಯುವಿನಿಂದ ಹೇಗೆ ತಪ್ಪಿಸಿಕೊಳ್ಳಬೇಕು’, ಎಂದು ಸಹ ಹೇಳಲಾಗಿದೆ. ಪ್ರತಿಭಟನೆ ನಡೆಸುವ ಪ್ರಕ್ರಿಯೆಗೆ ಹೆಚ್ಚಿನ ಜನರು ಪಾಲ್ಗೊಳ್ಳಬೇಕೆಂದು’, ಕರೆ ನೀಡಲಾಗಿದೆ. ದೆಹಲಿ, ಕೋಲಕಾತಾ, ಕರ್ಣಾವತಿ ಮತ್ತು ದೇಶದ ಇತರ ಭಾಗಗಳಲ್ಲಿ ಈ ಪ್ರಕರಣದಿಂದ ಪ್ರತಿಭಟನೆಗಳು ಮತ್ತು ಮೆರವಣಿಗೆಯನ್ನು ತೆಗೆಯುವಂತೆ ಕರೆ ನೀಡಿತು. ಕೆಲವೇ ಗಂಟೆಗಳಲ್ಲಿ ಈ ಜಾಲತಾಣದಲ್ಲಿ ಸಾವಿರಾರು ಜನರು ಸುಳ್ಳು ಪರಿಚಯ ನೀಡಿ ಸಂಪರ್ಕ ಇಟ್ಟುಕೊಂಡರು. ನಂತರ ಈ ಪ್ರಕರಣದಲ್ಲಿ ವದಂತಿಗಳು ಹರಡಲು ಪ್ರಾರಂಭಿಸಿದವು ಅದೇರೀತಿ ಸುಳ್ಳು ಸುದ್ದಿಗಳನ್ನು ಸಹ ಪೋಸ್ಟ್ ಮಾಡಲಾಯಿತು. ಈ ಜಾಲತಾಣದ ಬಗ್ಗೆ ಮಾಹಿತಿ ಪಡೆದ ನಂತರ ತನಿಖಾಧಿಕಾರಿಗಳು ತಕ್ಷಣವೇ ಜಾಲತಾಣವನ್ನು ಬಂದ್ ಮಾಡಿದರು.
Press Statement by @Uppolice on various #FIRs registered on various people regarding #HathrasCase pic.twitter.com/p1lXv6b4yD
— UttarPradesh.ORG News (@WeUttarPradesh) October 5, 2020
ಜಾಲತಾಣದಿಂದ ಗಲಭೆಗಳನ್ನು ಸೃಷ್ಟಿಸಲು ನೀಡಿದ ಸಲಹೆಗಳು !
೧. ಗಲಭೆ ಎಲ್ಲಿ ನಡೆಸಬೇಕು ಆ ಸ್ಥಳವನ್ನು ಆರಿಸಿ.
೨. ಅಗತ್ಯವಿದ್ದರೆ, ಎಲ್ಲಿ ಅಡಗಿಕೊಳ್ಳಬೇಕು, ಎಂಬುದು ನಿರ್ಧರಿಸಿ.
೩. ಪೊಲೀಸರನ್ನು ನೋಡಿದ ಕೂಡಲೇ ಗ್ಯಾಸ್ ಮಾಸ್ಕ್ ಧರಿಸಿ.
೪. ಪೊಲೀಸರ ಕಾರ್ಯಾಚರಣೆಯ ವಿಡಿಯೋ ಮಾಡಿ.
೫. ಏಕಾಂಗಿಯಾಗಿ ಎಲ್ಲಿಯೂ ಹೋಗಬೇಡಿ, ನಿಮ್ಮೊಂದಿಗೆ ಸಂಬಂಧಿ ಅಥವಾ ಪರಿಚಯದವರನ್ನು ಕರೆದುಕೊಂಡು ಹೋಗಿ.
೬. ಕ್ರೆಡಿಟ್ ಕಾರ್ಡ್, ಎಟಿಎಂ ಕಾರ್ಡ್ ಅನ್ನು ತೆಗೆದುಕೊಂಡು ಹೋಗಬೇಡಿ. ನಗದು ಇಟ್ಟುಕೊಳ್ಳಿ.
೭. ಆಭರಣಗಳು, ಟೈ ಇತ್ಯಾದಿಗಳನ್ನು ಧರಿಸಬಾರದು; ಏಕೆಂದರೆ ಇದರಿಂದ ಬೇಗನೆ ಸಿಕ್ಕಿಕೊಳ್ಳಬಹುದು.
೮. ಈಜುವಾಗ ಉಪಯೋಗಿಸಬಹುದಾದ ಕನ್ನಡಕಗಳನ್ನು ಧರಿಸಿ. ಇದರಿಂದ ಅಶ್ರುವಾಯುವಿನಿಂದ ಪಾರಾಗಬಹುದು.
೯. ಕೈಗಳಿಗೆ ಕೈಗವಸುಗಳನ್ನು ಬಳಸಿ. ಇದರಿಂದ ಅಶ್ರುವಾಯು ಡಬ್ಬಿಗಳನ್ನು ತೆಗೆದುಕೊಂಡು ಅದನ್ನು ಪುನಃ ಪೊಲೀಸರ ಮೇಲೆ ಎಸೆಯಬಹುದು.
ಪಿ.ಎಫ್.ಐ. ಮತ್ತು ಎಸ್.ಡಿ.ಪಿ.ಐ.ನ ಕೈವಾಡ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಹಾಗೂ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ನಂತಹ ಸಂಸ್ಥೆಗಳು ಜಾಲತಾಣ ನಿರ್ಮಿಸುವಲ್ಲಿ ಪಾತ್ರವಹಿಸಿವೆ ಎಂದು ಹೇಳಲಾಗುತ್ತದೆ.
ಸಂತ್ರಸ್ತೆಯ ಕುಟುಂಬವರನ್ನು ಸರಕಾರದ ವಿರುದ್ಧದ ಪ್ರಚೋದಿಸುವ ಬಗ್ಗೆ ಸಂಭಾಷಣೆಯುಳ್ಳ ಧ್ವನಿಮುದ್ರಣ ತನಿಖಾಧಿಕಾರಿಗಳಿಗೆ ಪತ್ತೆ
ಈ ಪ್ರಕರಣದಲ್ಲಿ ಕೆಲವು ಧ್ವನಿಮುದ್ರಣಗಳು ಪೊಲೀಸರಿಗೆ ಪತ್ತೆಯಾಗಿವೆ. ಇದರಲ್ಲಿ ಸಂತ್ರಸ್ತೆಯ ಕುಟುಂಬದವರನ್ನು ಸರಕಾರದ ವಿರುದ್ಧ ಪ್ರಚೋದಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಇದಕ್ಕಾಗಿ ೧ ಕೋಟಿ ರೂಪಾಯಿಗಳ ಆಮಿಷಯೊಡ್ಡಲಾಗಿದೆ ಎಂದು ಹೇಳಲಾಗಿದೆ. ತನಿಖಾಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದರಲ್ಲಿ ಕೆಲವು ಪತ್ರಕರ್ತರು ಮತ್ತು ರಾಜಕೀಯ ನಾಯಕರ ನಡುವಿನ ಸಂಭಾಷಣೆಗಳನ್ನು ಒಳಗೊಂಡಿದೆ. ಈ ಧ್ವನಿಮುದ್ರಣದ ತನಿಖೆಯ ವರದಿಯನ್ನು ಪಡೆದ ನಂತರ ಸಂಬಂಧಪಟ್ಟವರ ಪಾಲಿಗ್ರಾಫ್ ಮತ್ತು ನಾರ್ಕೊ ಪರೀಕ್ಷೆಯನ್ನು ಮಾಡಲಿದೆ.
ಅಭಿವೃದ್ಧಿಯನ್ನು ಇಷ್ಟಪಡದವರಿಗೆ ಹಿಂಸೆಯನ್ನು ಪ್ರಚೋದಿಸುವ ಉದ್ದೇಶವಿದೆ ! – ಯೋಗಿ ಆದಿತ್ಯನಾಥ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಈ ಪ್ರಕರಣದಲ್ಲಿ, “ಅಭಿವೃದ್ಧಿಯನ್ನು ಇಷ್ಟಪಡದವರು ಕೋಮು ಹಿಂಸಾಚಾರವನ್ನು ಪ್ರಚೋದಿಸಲು ಬಯಸುತ್ತಿದ್ದಾರೆ. ಗಲಭೆಯ ಹೆಸರಿನಲ್ಲಿ ರಾಜಕೀಯ ಮಾಡಲು ಅವರಿಗೆ ಅವಕಾಶ ಸಿಕ್ಕಿದೆ; ಆದ್ದರಿಂದ ಅವರು ಹೊಸ ಸಂಚನ್ನು ರೂಪಿಸುತ್ತಿದ್ದಾರೆ” ಎಂದು ಹೇಳಿದರು.
Our opponents are conspiring against us by trying to lay a
foundation for caste & communal riots through international funding. For last one week, opposition parties were keen to see riots. We need to move forward amidst all these conspiracies: Yogi Adityanath, CM, Uttar Pradesh pic.twitter.com/QqnfJnV5ac— ANI UP (@ANINewsUP) October 5, 2020