೫೫ ಸಾವಿರ ರೂಪಾಯಿ ಹಾಗೂ ೧ ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಕದ್ದಿದ್ದಾರೆ ಎಂಬ ಗ್ರಾಮಸ್ಥರ ಆರೋಪವನ್ನು ತಿರಸ್ಕರಿಸಿದ ಪೊಲೀಸರು !
|
ಸೀತಾಮಢಿ (ಬಿಹಾರ) – ಇಲ್ಲಿನ ಮೇಘಪುರ ಗ್ರಾಮದಲ್ಲಿ ಗ್ರಾಮಸ್ಥರೊಂದಿಗಿನ ಮಾತಿನ ಚಕಮಕಿಯ ನಂತರ ಪೊಲೀಸರು ದೇವಸ್ಥಾನದಲ್ಲಿನ ಶ್ರೀ ದುರ್ಗಾದೇವಿಯ ವಿಗ್ರಹವನ್ನು ನೀರಿನಲ್ಲಿ ಎಸೆದರು. ಅದೇರೀತಿ ಪೊಲೀಸರು ೫೫ ಸಾವಿರ ರೂಪಾಯಿ ಹಾಗೂ ೧ ಲಕ್ಷ ಮೌಲ್ಯದ ಆಭರಣಗಳನ್ನು ತೆಗೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ, ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ.
೧. ಕೆಲವರು ಇಲ್ಲಿ ಶ್ರೀ ದುರ್ಗಾದೇವಿಯ ಪೂಜೆಯನ್ನು ಆಯೋಜಿಸಿದ್ದರು. ಅದೇರೀತಿ ಅಲ್ಲಿ ವಿಗ್ರಹಗಳನ್ನು ಸಹ ನಿರ್ಮಿಸಲಾಗುತ್ತಿತ್ತು. ಪೊಲೀಸರಿಗೆ ಮಾಹಿತಿ ದೊರೆತಾಗ ಅವರು ಇಲ್ಲಿಗೆ ತಲುಪಿ ಪೂಜೆಯ ಆಯೋಜನೆಯನ್ನು ತಡೆಯಲು ಪ್ರಯತ್ನಿಸಿದರು. ಅದೇರೀತಿ ವಿಗ್ರಹಗಳ ನಿರ್ಮಾಣವನ್ನು ನಿಲ್ಲಿಸಲು ಪ್ರಯತ್ನಿಸಿದರು. ಈ ಸಮಯದಲ್ಲಿ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅವರು ಪೊಲೀಸರ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದರು.
೨. ಪೊಲೀಸರು ವಿಗ್ರಹವನ್ನು ಬಲವಂತವಾಗಿ ಕಸಿದು ವಿಸರ್ಜನೆ ಮಾಡಲು ಪ್ರಯತ್ನಿಸಿದರು. ನಾವೂ ಅವರನ್ನು ವಿರೋಧಿಸಿದೆವು. ಅದಕ್ಕೆ ಅವರು ಶ್ರೀ ದುರ್ಗಾದೇವಿ, ಶ್ರೀ ಗಣೇಶ, ಶ್ರೀ ಸರಸ್ವತಿ, ಶ್ರೀ ಲಕ್ಷ್ಮೀ ಮುಂತಾದ ದೇವರುಗಳ ಸಣ್ಣ ವಿಗ್ರಹಗಳನ್ನು ಸಂಗ್ರಹಿಸಿ ೧ ಕಿ.ಮೀ ದೂರದಲ್ಲಿ ತೆಗೆದುಕೊಂಡು ನೀರಿನಲ್ಲಿ ಎಸೆದರು. ಪೊಲೀಸರು ಇದನ್ನು ಮದ್ಯದ ಅಮಲಿನಲ್ಲಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
೩. ಪೊಲೀಸರ ಪ್ರಕಾರ, ಗ್ರಾಮಸ್ಥರು ಕಲ್ಲು ತೂರಾಟ ಮಾಡಿದ್ದರಿಂದ ಪೊಲೀಸರಿಗೆ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ಕಲ್ಲು ತೂರಾಟದಲ್ಲಿ ಕೆಲವು ಗ್ರಾಮಸ್ಥರು ಮತ್ತು ಪೊಲೀಸರು ಸೇರಿದಂತೆ ೧೨ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ರಾಘವೇಂದ್ರ ಚೌಧರಿ ಎಂಬ ಹುಡುಗನಿಗೆ ಗುಂಡು ತಗಲಿ ಆತ ಗಾಯಗೊಂಡಿದ್ದಾನೆ. ಗ್ರಾಮಸ್ಥರು ಮಾಡಿದ ಗುಂಡು ಹಾರಾಟದಲ್ಲಿ ಆತ ಗಾಯಗೊಂಡಿದ್ದಾನೆ ಎಂದು ಪೊಲೀಸರು ಹೇಳುತ್ತಾರೆ.
೪. ಈ ಘಟನೆಯ ನಂತರ ಗ್ರಾಮಸ್ಥರು ರಸ್ತೆ ತಡೆ ಆಂದೋಲನ ಮಾಡಿ ಅದಕ್ಕೆ ಹೊಣೆಯಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಘಟನೆ ಕುರಿತು ತನಿಖೆ ನಡೆಸಬೇಕೆಂದು ಭಾಜಪ ಜಿಲ್ಲಾಧ್ಯಕ್ಷ ಸುರೇಶ ಕುಮಾರ್ ಮಿಶ್ರಾ ಒತ್ತಾಯಿಸಿದ್ದಾರೆ.