ಶ್ರೀ ಕ್ಷೇತ್ರ ಬೆಲಗೂರಿನ ಸ್ವಾಮಿ ಬಿಂದೂ ಮಾಧವ ಶರ್ಮಾ ಇವರ ದೇಹತ್ಯಾಗ

ಸ್ವಾಮೀಜಿಯವರು ಹನುಮಂತನ ಭಕ್ತರಾಗಿದ್ದು ಅವರಿಗೆ ಅಷ್ಟಸಿದ್ಧಿಗಳು ಪ್ರಾಪ್ತವಾಗಿವೆ. ಸ್ವಾಮೀಜಿಯವರಿಗೆ ನಾಥ ಸಂಪ್ರದಾಯದ ಮೂರು ಸಾವಿರ ವರ್ಷಗಳ ಪರಂಪರೆಯಿದೆ. ಸ್ವಾಮೀಜಿಯವರಿಗೆ ಸೂಕ್ಷ್ಮದ ವಿಷಯದಲ್ಲಿ ಬಹಳ ಜ್ಞಾನವಿದೆ. ಸಾಧಕರ ಭೇಟಿಯ ಸಮಯದಲ್ಲಿ ಅವರು ಸೂಕ್ಷ್ಮ ಜ್ಞಾನದ ಮೂಲಕ ಪರಾತ್ಪರ ಗುರು ಡಾ. ಆಠವಲೆ, ಹಿಂದೂ ರಾಷ್ಟ್ರ ಮತ್ತು ಸನಾತನ ಸಂಸ್ಥೆ ಇವುಗಳ ಬಗ್ಗೆ ಮುಂದಿನ ಮಾರ್ಗದರ್ಶನವನ್ನು ಮಾಡಿದರು.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿಯ ನಿಮಿತ್ತ ಶ್ರದ್ಧಾಂಜಲಿ ಸಲ್ಲಿಸಲು ಹೋದ ಹಿಂದೂ ಮಕ್ಕಲ್ ಕಚ್ಚಿಯ ಅರ್ಜುನ ಸಂಪತ್ ಅವರನ್ನು ದ್ರಮುಕ ಹಾಗೂ ವಿ.ಸಿ.ಕೆ. ಕಾರ್ಯಕರ್ತರಿಂದ ಮುತ್ತಿಗೆ !

ಹಿಂದೂ ಮಕ್ಕಲ್ ಕಚ್ಛಿಯ ಅಧ್ಯಕ್ಷ ಅರ್ಜುನ ಸಂಪತ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಪುಣ್ಯತಿಥಿಯ ನಿಮಿತ್ತ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸ್ಥಳೀಯ ರಾಜ ಅಣ್ಣಾಮಲೈ ಪುರಂನಲ್ಲಿರುವ ಸ್ಮಾರಕಕ್ಕೆ ಹೋಗಿದ್ದರು. ಆ ಸಮಯದಲ್ಲಿ ದ್ರಮುಕ ಹಾಗೂ ವಿದುಥಲಾಯಿ ಚಿರುಥೈಗಲ ಕತ್ಛಿ (ವಿ.ಸಿ.ಕೆ.) ಈ ಪಕ್ಷದ ಕಾರ್ಯಕರ್ತರು ಅವರನ್ನು ಒಳ ಪ್ರವೇಶಿಸದಂತೆ ತಡೆದರು.

ದೆಹಲಿಯ ಒಂದು ಕಾಲುವೆಯಲ್ಲ್ಲಿ ದೊಡ್ಡ ಪ್ರಮಾಣದಲ್ಲಿ ಹಸುಗಳ ಕಳೇಬರ ಪತ್ತೆ

ಸ್ಥಳೀಯ ದ್ವಾರಕಾ ಸೆಕ್ಟರ್ – ೨೩ ರ ಪೋಚನಪುರ ಗ್ರಾಮದ ಒಂದು ಕಾಲುವೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಸುಗಳ ಕಳೇಬರಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿಸಿದ್ದಕ್ಕಾಗಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ನಟ ಸೈಫ್ ಅಲಿ ಖಾನ್‌ನ ವಿರುದ್ಧ ದೆಹಲಿಯಲ್ಲಿ ದೂರು ದಾಖಲು

ನಟ ಸೈಫ್ ಅಲಿ ಖಾನ್ ‘ಆದಿಪುರುಷ’ ಚಲನಚಿತ್ರದ ರಾವಣನ ಪಾತ್ರದ ಬಗ್ಗೆ ನೀಡಿದ ಅಕ್ಷೆಪಾರ್ಹ ಹೇಳಿಕೆಯ ವಿರುದ್ಧ ಇಲ್ಲಿ ದೂರು ದಾಖಲಿಸಲಾಗಿದೆ. ವಿಶ್ವ ಹಿಂದೂ ಮಹಾಸಂಘದ ದೆಹಲಿ ಪ್ರದೇಶಾಧ್ಯಕ್ಷರಾದ ರಾಜೇಶ ತೋಮರ ಇವರು ನೀಡಿದ ದೂರಿನ ಮೇರೆಗೆ ಅಪರಾದ ದಾಖಲಾಗಿದೆ.

ಭಾಗ್ಯನಗರದ ರಣಾಂಗಣ !

ಪ್ರಸ್ತುತ ಮೇಲುಮೇಲಿನಿಂದ ನೋಡಿದಾಗ ಭಾಗ್ಯನಗರವು ಇಸ್ಲಾಮ್‌ನ ಪ್ರಾಬಲ್ಯವಿರುವ ಪ್ರದೇಶವೆಂದು ತೋರುತ್ತಿದ್ದರೂ ಅಂಕಿಅಂಶಗಳು ಬಿಜೆಪಿಗೆ ಆಶಾದಾಯಕವಾಗಿದೆ. ಯೋಗಿ ಆದಿತ್ಯನಾಥರಂತಹ ಧರ್ಮನಿಷ್ಠ ನಾಯಕನನ್ನು ಭಾಗ್ಯನಗರಕ್ಕೆ ಕಳುಹಿಸಲು ಅದು ಕಾರಣವಾಗಿರಬಹುದು. ಗೃಹಸಚಿವ ಅಮಿತ ಶಾ ಅವರು ಗುಜರಾತ್‌ನಲ್ಲಿದ್ದಾಗಿನಿಂದ ಅವರ ಸಾಮಾಜಿಕ ಚಿತ್ರಣವು ಧೈರ್ಯ ತುಂಬುತ್ತಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಬುದ್ಧಿಜೀವಿಗಳು ‘ಅಧ್ಯಾತ್ಮಶಾಸ್ತ್ರವು ಹೇಗೆ ಸರಿಯಲ್ಲ’ ಎಂಬುದನ್ನು ಸಾಬೀತುಪಡಿಸಲು ಸಂಶೋಧನೆ ಮಾಡಲು ಸಾಧನಗಳನ್ನು ಎಂದಿಗೂ ಬಳಸಲಿಲ್ಲ; ಆದರೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ನೂರಾರು ಪ್ರಯೋಗಗಳ ಮೂಲಕ ‘ಅಧ್ಯಾತ್ಮಶಾಸ್ತ್ರವು ಚಿರಂತನ ಸತ್ಯವನ್ನು ಹೇಳುತ್ತದೆ’ ಎಂದು ಸಾಬೀತು ಪಡಿಸಿದೆ ಮತ್ತು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ಶೋಧಪ್ರಬಂಧಗಳನ್ನು ಮಂಡಿಸಿದೆ.’

ಹಿಂದೂಗಳು ಎಲ್ಲೆಡೆಗೆ ಹೋಗಿ ಹಿಂದೂ ಧರ್ಮದ ಬೋಧನೆ ಮತ್ತು ಅದರ ಮೌಲ್ಯದ ಪ್ರಚಾರ ಮಾಡುವುದು ಆವಶ್ಯಕವಾಗಿದೆ ! – ಮಾರಿಯಾ ವರ್ಥ್, ಜರ್ಮನ್ ಲೇಖಕಿ

ಮುಸಲ್ಮಾನರು ಮತ್ತು ಕ್ರೈಸ್ತರು ‘ತಮ್ಮ ಧರ್ಮವು ಸಂಪೂರ್ಣ ಜಗತ್ತಿನ ಮೇಲೆ ಪ್ರಭುತ್ವವನ್ನು ಸಾಧಿಸಬೇಕು ಮತ್ತು ಅದಕ್ಕಾಗಿ ಪ್ರಯತ್ನಿಸುವುದು ನಮ್ಮ ದೈವೀ ಕರ್ತವ್ಯವಾಗಿದೆ’, ಎಂದು ತಿಳಿಯುತ್ತಾರೆ. ಮುಸಲ್ಮಾನರು ಮತ್ತು ಕ್ರೈಸ್ತರು ಎಲ್ಲೆಡೆ ಹೋಗಿ ತಮ್ಮ ಧರ್ಮದ ಪ್ರಚಾರ-ಪ್ರಸಾರ ಮಾಡುತ್ತಾರೆ. ನಮ್ಮ ಧರ್ಮವೇ ಸತ್ಯವಾಗಿದೆ ಮತ್ತು ಇತರರ ಧರ್ಮಗಳು ಅಸತ್ಯವಾಗಿವೆ ಎಂದು ಹೇಳಲು ಅವರು ಸಂಕೋಚಪಡುವುದಿಲ್ಲ.

ರಾಷ್ಟ್ರದ ಭದ್ರತೆ ಮತ್ತು ಭಾರತದ ಮುಂದಿರುವ ವಿವಿಧ ಸವಾಲುಗಳು

ಕೆಲವು ದಿನಗಳ ಹಿಂದೆ ಎನ್.ಐ.ಎ. (ರಾಷ್ಟ್ರೀಯ ತನಿಖಾದಳ) ಐಸಿಸ್‌ನ ಕೆಲವು ಭಯೋತ್ಪಾದಕರನ್ನು ಬಂಧಿಸಿತು. ದೇಶದಲ್ಲಿ ಹಿಂಸಾತ್ಮಕ  ಕೃತ್ಯಗಳನ್ನು ಮಾಡುವ ಮೊದಲೇ ಅವರನ್ನು ಬಂಧಿಸುವಲ್ಲಿ ಯಶಸ್ಸು ಸಿಕ್ಕಿತು. ಹಿಂದೆ ಭಯೋತ್ಪಾದಕರು ದೇಶದಲ್ಲಿ ಎಲ್ಲಿ ಬೇಕಾದಲ್ಲಿ ಆಕ್ರಮಣ ಮಾಡುತ್ತಿದ್ದರು ಮತ್ತು ಅದರಲ್ಲಿ ನೂರಾರು ಜನರು ಸಾಯುತ್ತಿದ್ದರು.

ಸಂಸತ್ತಿನ ಹೊಸ ಕಟ್ಟಡ ನಿರ್ಮಾಣವನ್ನು ಸರ್ವೋಚ್ಚ ನ್ಯಾಯಾಲಯವು ಮುಂದೂಡಿದೆ

ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ ೧೦ ರಂದು ಉದ್ಘಾಟಿಸಲಿರುವ ಹೊಸ ಸಂಸತ್ ಭವನದ ನಿರ್ಮಾಣವನ್ನು ಸರ್ವೋಚ್ಚ ನ್ಯಾಯಾಲಯವು ಮುಂದೂಡಿದೆ; ಆದರೆ ಭೂಮಿ ಪೂಜೆ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಯೋಜನೆಯನ್ನು ‘ಸೆಂಟ್ರಲ್ ವಿಸ್ತಾ’ ಎಂದು ಕರೆಯಲಾಗುತ್ತದೆ.

ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಅಪರಿಚಿತ ಕಾಯಿಲೆಯಿಂದ ಒಬ್ಬರು ಸಾವನ್ನಪ್ಪಿ, ೨೯೨ ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ

ಇಡೀ ಜಗತ್ತು ಕೊರೋನಾ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಅಪರಿಚಿತ ಕಾಯಿಲೆಯಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ೨೯೨ ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ೧೪೦ ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಹೋಗಲು ಅವಕಾಶ ನೀಡಲಾಗಿದ್ದು, ಇತರರ ಸ್ಥಿತಿ ಸ್ಥಿರವಾಗಿದೆ.