ಸಂಸತ್ತಿನ ಹೊಸ ಕಟ್ಟಡ ನಿರ್ಮಾಣವನ್ನು ಸರ್ವೋಚ್ಚ ನ್ಯಾಯಾಲಯವು ಮುಂದೂಡಿದೆ

ಭೂಮಿಪೂಜೆಗಾಗಿ ಅನುಮತಿ

ನವ ದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ ೧೦ ರಂದು ಉದ್ಘಾಟಿಸಲಿರುವ ಹೊಸ ಸಂಸತ್ ಭವನದ ನಿರ್ಮಾಣವನ್ನು ಸರ್ವೋಚ್ಚ ನ್ಯಾಯಾಲಯವು ಮುಂದೂಡಿದೆ; ಆದರೆ ಭೂಮಿ ಪೂಜೆ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಯೋಜನೆಯನ್ನು ‘ಸೆಂಟ್ರಲ್ ವಿಸ್ತಾ’ ಎಂದು ಕರೆಯಲಾಗುತ್ತದೆ. ಸಂಸತ್ತಿನ ಪುನರ್ನಿರ್ಮಾಣದ ವಿಷಯವು ಬಾಕಿ ಇರುವಾಗ ಈ ಯೋಜನೆಗಾಗಿ ಭೂಮಿಪೂಜೆಯ ಸಮಾರಂಭವನ್ನು ನಡೆಸುವ ಕೇಂದ್ರದ ತರಾತುರಿಯ ನಿರ್ಧಾರಕ್ಕೆ ಸರ್ವೋಚ್ಚ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತು.