ಭಾರತದಲ್ಲಿ ವಿವಿಧ ವಾರ್ತಾವಾಹಿನಿಗಳ ನಿವೇದಕರು ಬಹಳ ಜಾಣರು ಮತ್ತು ಸಮರ್ಥರಾಗಿದ್ದಾರೆ; ಆದರೆ ಯಾವಾಗ ಹಿಂದೂ ಧರ್ಮದ ವಿಷಯ ಬರುತ್ತದೆಯೋ, ಆಗ ಅವರ ಬುದ್ಧಿ ಅಥವಾ ಧೈರ್ಯವು ಕಡಿಮೆ ಬೀಳುತ್ತದೆ. ಕೆಲವು ದಿನಗಳ ಹಿಂದೆ ‘ನ್ಯೂಸ್ ಎಕ್ಸ್’ನ ಸಂಪಾದಕ ಋಷಭ ಗುಲಾಟಿ ಯವರು ನಿಷ್ಠಾವಂತ ವಹಾಬಿ ಇಸ್ಲಾಮ್‌ನಲ್ಲಿ ‘ಬ್ರೆನ್‌ವಾಶ್ (ಬುದ್ಧಿಭೇದ) ಮಾಡಿದ ಭಾರತೀಯ ಮುಸಲ್ಮಾನರನ್ನು ಕೋಮಲ ಸೂಫಿ ಪಂಥದಲ್ಲಿ ಪುನಃ ಹೇಗೆ ಕರೆತರಬಹುದು, ಎಂಬುದನ್ನು ತಿಳಿದುಕೊಳ್ಳುವುದಿದೆ’ ಎಂದು ಹೇಳಿದರು. ಋಷಭ ಗುಲಾಟಿ ರವರಿಗೆ, ಇಸ್ಲಾಮ್‌ನಲ್ಲಿನ ಎಲ್ಲ ಗುಂಪುಗಳು ಕುರಾನನ್ನೇ ಆಧರಿಸಿವೆ, ಎಂಬುದನ್ನು ಖಂಡಿತವಾಗಿಯೂ ತಿಳಿದುಕೊಳ್ಳಬೇಕಾಗುವುದು. ಅವರಿಗೆ, ‘ಇಸ್ಲಾಮ್‌ನ ಮೇಲೆ ವಿಶ್ವಾಸ ಇಡುವವರು ಬಹಳ ಒಳ್ಳೆಯವರು ಮತ್ತು ವಿಶ್ವಾಸವನ್ನು ಇಡದವರು ಕೆಟ್ಟವರು’, ಎಂಬ ಸಂಪೂರ್ಣ ವಿವರವನ್ನು ಅವರ ಗ್ರಂಥದಲ್ಲಿಯೇ ಹೇಳಲಾಗಿದೆ’, ಎಂಬುದೂ ಗೊತ್ತಿರಬಹುದು. ಇಸ್ಲಾಮ್ ಮತ್ತು ಕ್ರೈಸ್ತ ಪಂಥಕ್ಕಿಂತ
ಹಿಂದೂ ಧರ್ಮವು ಹೇಗೆ ಲಾಭದಾಯಕವಾಗಿದೆ, ಎಂಬುದನ್ನು ಮನವರಿಕೆ ಮಾಡಿಕೊಡಬೇಕು !
ಋಷಭ ಗುಲಾಟಿಯವರು ಭಾರತೀಯ ಮುಸಲ್ಮಾನರನ್ನು ಅವರ ಹಿಂದಿನ ಕಾಲದಲ್ಲಿನ ಹಿಂದೂ ಧರ್ಮಕ್ಕೆ ಪುನಃ ವಾಪಾಸು ತರಲು ಏಕೆ ಪ್ರಯತ್ನಿಸಬಾರದು ? ಕಳೆದ ೧ ಸಾವಿರ ವರ್ಷಗಳಲ್ಲಿ ಸ್ವತಃದ ಹಿಂದೂ ಧರ್ಮದ ಪಕ್ಷದಲ್ಲಿ (ಬದಿಯಲ್ಲಿ) ಧೃಢವಾಗಿ ನಿಲ್ಲುವುದು ಅತ್ಯಂತ ಅಪಾಯಕಾರಿ ಎಂದು ಸಾಬೀತಾಗಿದೆ. ಈ ಕಾರಣದಿಂದ ಹೆಚ್ಚಿನ ಹಿಂದೂಗಳು ತಮ್ಮ ಧರ್ಮದ ಕುರಿತು ಮುತ್ಸದ್ದಿಗಳಂತೆ (ರಾಜಕಾರಣಿಗಳಂತೆ) ನಡೆದುಕೊಳ್ಳುವುದು ಅಥವಾ ಎಲ್ಲಿಯಾದರೂ ಹೊಂದಾಣಿಕೆ ಮಾಡಿಕೊಳ್ಳುವುದು, ಧರ್ಮದ ಉಲ್ಲೇಖ ಅಥವಾ ಅದರ ಸ್ತುತಿಯನ್ನು ಮಾಡದಿರುವುದು ಇತ್ಯಾದಿ ವಿಷಯಗಳನ್ನು ಮಾಡುವುದು ಕಾಣಿಸುತ್ತದೆ. ಸದ್ಯ ಈ ವೃತ್ತಿಯನ್ನು ಅವರ ಮನಸ್ಸಿನ ಮೇಲೆ ಆಳವಾಗಿ ಕೊರೆಯಲಾಗಿದೆ. ಈ ವೃತ್ತಿಯು ಇಂದಿನ ಪೀಳಿಗೆಯಲ್ಲಿ ಸಂಪೂರ್ಣ ಬೇರೂರಿದೆ. ಆಂಗ್ಲ ಶಿಕ್ಷಣಪದ್ಧತಿಯಿಂದ ಈ ವೃತ್ತಿಯು ಇನ್ನಷ್ಟು ದೃಢವಾಗಿರುವುದರಿಂದ ಸ್ಥಿತಿಯು ಇನ್ನೂ ಹದಗೆಟ್ಟಿದೆ.
‘ಪ್ರಾಚೀನ ಭಾರತೀಯ ಪರಂಪರೆಯು ವಸ್ತುಸ್ಥಿತಿಯನ್ನು ಆಧರಿಸಿಲ್ಲ, ಆದುದರಿಂದ ಅದು ಕನಿಷ್ಠವಾಗಿದೆ’, ಎಂಬ ಸುಳ್ಳು ಚಿತ್ರಣವನ್ನು ಮೂಡಿಸಲಾಗಿದೆ. ‘ಮತಾಂತರಗೊಂಡವರೊಂದಿಗೆ ವ್ಯವಹರಿಸುವಾಗ ಯಾವುದೇ ವಾದದಲ್ಲಿ ಸಿಲುಕುವುದು ಬೇಡ’, ಎಂಬ ಪರಾಜಿತ ಮಾನಸಿಕತೆಯನ್ನು ಹಿಂದೂಗಳು ತಮ್ಮಲ್ಲಿ ಮೂಡಿಸಿಕೊಂಡಿದ್ದಾರೆ. ಈ ವೃತ್ತಿಯು ಸದ್ಯದ ಕಾಲಕ್ಕೆ ಉಪಯುಕ್ತವಾಗಿಲ್ಲ, ಬದಲಾಗಿ ಅದು ಹೆಚ್ಚು ಅಪಾಯಕಾರಿಯಾಗಿದೆ. ಸತ್ಯವನ್ನು ಸ್ಪಷ್ಟವಾಗಿ ಮಂಡಿಸಲು, ಇದುವೇ ಸರಿಯಾದ ಸಮಯವಾಗಿದೆ. ಇಸ್ಲಾಮ್ ಮತ್ತು ಕ್ರೈಸ್ತ ಪಂಥಕ್ಕಿಂತ ಹಿಂದೂ ಧರ್ಮವು ಹೇಗೆ ಲಾಭದಾಯಕವಾಗಿದೆ, ಎಂಬುದನ್ನು ಮನವರಿಕೆ ಮಾಡಿಕೊಡುವ ಸಮಯವು ಈಗ ಬಂದಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳದಿದ್ದರೆ, ಇಂತಹ ಅವಕಾಶವು ಪುನಃ ದೊರಕುವುದು ಸಾಧ್ಯವಿಲ್ಲ.
ಇಸ್ಲಾಮ್ ಮತ್ತು ಕ್ರೈಸ್ತರು ಹಿಂದೂ ಧರ್ಮಕ್ಕೆ ಬಹುದೊಡ್ಡ ಹಾನಿಯನ್ನು ಮಾಡುವುದು
ಮುಸಲ್ಮಾನರು ಮತ್ತು ಕ್ರೈಸ್ತರು ‘ತಮ್ಮ ಧರ್ಮವು ಸಂಪೂರ್ಣ ಜಗತ್ತಿನ ಮೇಲೆ ಪ್ರಭುತ್ವವನ್ನು ಸಾಧಿಸಬೇಕು ಮತ್ತು ಅದಕ್ಕಾಗಿ ಪ್ರಯತ್ನಿಸುವುದು ನಮ್ಮ ದೈವೀ ಕರ್ತವ್ಯವಾಗಿದೆ’, ಎಂದು ತಿಳಿಯುತ್ತಾರೆ. ಮುಸಲ್ಮಾನರು ಮತ್ತು ಕ್ರೈಸ್ತರು ಎಲ್ಲೆಡೆ ಹೋಗಿ ತಮ್ಮ ಧರ್ಮದ ಪ್ರಚಾರ-ಪ್ರಸಾರ ಮಾಡುತ್ತಾರೆ. ನಮ್ಮ ಧರ್ಮವೇ ಸತ್ಯವಾಗಿದೆ ಮತ್ತು ಇತರರ ಧರ್ಮಗಳು ಅಸತ್ಯವಾಗಿವೆ ಎಂದು ಹೇಳಲು ಅವರು ಸಂಕೋಚಪಡುವುದಿಲ್ಲ. ತಮ್ಮ ಧರ್ಮದ ಹೊರತು ಇತರ ಎಲ್ಲ ಪಂಥಗಳನ್ನು ಅಥವಾ ಧರ್ಮಗಳನ್ನು ನಾಮಾಶೇಷಗೊಳಿಸುವುದು ಅವರ ಪ್ರಯತ್ನವಾಗಿರುತ್ತದೆ ಮತ್ತು ಅದರಲ್ಲಿ ಅವರು ಸ್ವಲ್ಪ ಪ್ರಮಾಣದಲ್ಲಿ ಯಶಸ್ವಿಯೂ ಆಗಿದ್ದಾರೆ. ಕೇವಲ ಭಾರತದಲ್ಲಿ ಇಸ್ಲಾಮ್ ಮತ್ತು ಕ್ರೈಸ್ತ ಈ ಎರಡೂ ಪಂಥಗಳಿಗೆ ದೊಡ್ಡ ವಿರೋಧವನ್ನು ಎದುರಿಸಬೇಕಾಯಿತು. ಭಾರತದಲ್ಲಿ ಹಿಂದೂ ಧರ್ಮವು ಇಂದಿಗೂ ಅಬಾಧಿತವಾಗಿದೆ; ಆದರೆ ಅವರು ಹಿಂದೂ ಧರ್ಮಕ್ಕೆ ಅಪಾರ ಹಾನಿಯನ್ನು ಮಾಡಿದ್ದಾರೆ. ಇವೆರಡೂ ಪಂಥಗಳು ಇಂದಿಗೂ ಸೋಲೊಪ್ಪಿಕೊಂಡಿಲ್ಲ. ಅವು ಎಂದಿಗೂ ಮಾಡದಷ್ಟು ಪ್ರಯತ್ನವನ್ನು ಈಗ ಮಾಡುತ್ತಿವೆ.
ಹೀಗಿದ್ದರೂ, ಹಿಂದೂಗಳ ಪಕ್ಷದಲ್ಲಿ ಒಂದು ದೊಡ್ಡ ಶಕ್ತಿಯಿದೆ, ಅದೆಂದರೆ ಸತ್‌ನ ಮೇಲಾಧರಿಸಿದ ಹಿಂದೂ ಧರ್ಮ. ಹಿಂದೂ ಧರ್ಮವೇ ಮನುಕುಲಕ್ಕಾಗಿ ಉತ್ತಮ ಪರ್ಯಾಯವಾಗಿದೆ. ಅದಕ್ಕಾಗಿ ಹಿಂದೂಗಳು ಎಲ್ಲೆಡೆ ಹೋಗಿ ಹಿಂದೂ ಧರ್ಮದ ಬೋಧನೆ ಮತ್ತು ಲಾಭದ (ಮಹತ್ವದ) ಪ್ರಸಾರ-ಪ್ರಚಾರ ಮಾಡುವುದು, ಕಾಲದ ಆವಶ್ಯಕತೆಯೇ ಆಗಿದೆ.
– ಮಾರಿಯಾ ವರ್ಥ್, ಜರ್ಮನ್ ಲೇಖಕಿ