ಡಿಸೆಂಬರ್ ೧ ರಂದು ಹೈದರಾಬಾದ್ (ಭಾಗ್ಯನಗರ) ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ನಡೆಯಿತು. ಪುರಸಭೆಯ ಚುನಾವಣೆಯಾಗಿದ್ದರೂ, ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಆ ಪುರಸಭೆಯಲ್ಲಿ ಬಿಜೆಪಿಗೆ ಪ್ರಸ್ತುತ ಕೇವಲ ೪ ಸ್ಥಾನಗಳಿವೆ. ಇದರ ಹೊರತಾಗಿಯೂ, ಬಿಜೆಪಿ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ ಶಾ, ಉತ್ತರಪ್ರದೇಶದ ಮುಖ್ಯಮಂತ್ರಿ ಮತ್ತು ಪ್ರಖರ ಹಿಂದುತ್ವನಿಷ್ಠ ಎಂದು ಕರೆಯಲ್ಪಡುವ ಯೋಗಿ ಆದಿತ್ಯನಾಥ ಅವರನ್ನು ಭಾಗ್ಯನಗರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಕಣಕ್ಕಿಳಿಸಲಾಗಿತ್ತು. ಆದ್ದರಿಂದ, ಓವೈಸಿ ಬಿಜೆಪಿಯನ್ನು ಟೀಕಿಸುತ್ತಾ, ‘ಇದು ಪ್ರಧಾನಿ ಹುದ್ದೆಗೆ ಚುನಾವಣೆಯಲ್ಲ ಎಂದು ಹೇಳಿದ್ದಾರೆ. ಟೀಕಿಸುವವರು ಟೀಕಿಸುತ್ತಲೇ ಇರುತ್ತಾರೆ. ಅದರತ್ತ ನಿರ್ಲಕ್ಷಿಸುತ್ತಿರುವ ಬಿಜೆಪಿಯ ನಿಲುವನ್ನು ನೋಡಿದರೆ, ಭಾಗ್ಯನಗರದಲ್ಲಿ ಹಿಂದೂಗಳ ಅಸ್ಮಿತೆಯನ್ನು ಜಾಗೃತಗೊಳಿಸುವ ಕೆಲಸವನ್ನು ಬಿಜೆಪಿ ಪ್ರಾರಂಭಿಸಿದೆ ಎಂದು ತೋರುತ್ತದೆ.
ಕಳೆದ ಪುರಸಭೆ ಚುನಾವಣೆಯಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯು ೯೯ ಸ್ಥಾನಗಳನ್ನು, ಎಂಐಎಂ ೪೪ ಮತ್ತು ಬಿಜೆಪಿಗೆ ಕೇವಲ ೪ ಸ್ಥಾನಗಳನ್ನು ಹೊಂದಿತ್ತು. ತೆಲಂಗಾಣ ರಾಷ್ಟ್ರ ಸಮಿತಿಯ ರಾಜಕಾರಣ ಮತ್ತು ಆಡಳಿತವು ಓಲೈಕೆಯನ್ನು ಆಧರಿಸಿದೆ. ಎಂಐಎಂ ತನ್ನ ಹಿಂದೂದ್ವೇಷಿ ರಾಜಕಾರಣ, ಕಟ್ಟರ್ ಇಸ್ಲಾಮಿಕ್ ಮನಸ್ಥಿತಿ ಮತ್ತು ಹಿಂದೂಗಳ ದಬ್ಬಾಳಿಕೆಗೆ ಹೆಸರುವಾಸಿಯಾಗಿದೆ. ಪ್ರಸ್ತುತ ಮೇಲುಮೇಲಿನಿಂದ ನೋಡಿದಾಗ ಭಾಗ್ಯನಗರವು ಇಸ್ಲಾಮ್‌ನ ಪ್ರಾಬಲ್ಯವಿರುವ ಪ್ರದೇಶವೆಂದು ತೋರುತ್ತಿದ್ದರೂ ಅಂಕಿಅಂಶಗಳು ಬಿಜೆಪಿಗೆ ಆಶಾದಾಯಕವಾಗಿದೆ. ಯೋಗಿ ಆದಿತ್ಯನಾಥರಂತಹ ಧರ್ಮನಿಷ್ಠ ನಾಯಕನನ್ನು ಭಾಗ್ಯನಗರಕ್ಕೆ ಕಳುಹಿಸಲು ಅದು ಕಾರಣವಾಗಿರಬಹುದು. ಗೃಹಸಚಿವ ಅಮಿತ ಶಾ ಅವರು ಗುಜರಾತ್‌ನಲ್ಲಿದ್ದಾಗಿನಿಂದ ಅವರ ಸಾಮಾಜಿಕ ಚಿತ್ರಣವು ಧೈರ್ಯ ತುಂಬುತ್ತಿದೆ. ಭಾಗ್ಯನಗರ ದಲ್ಲಿ ಸ್ವತಂತ್ರ ಸ್ಥಾನ ಸ್ಥಾಪಿಸಲು ಇಂತಹ ನಾಯಕರು ಖಂಡಿತವಾಗಿಯೂ ಬಿಜೆಪಿಗೆ ಸಹಾಯ ಮಾಡುತ್ತಾರೆ. ನಿಜವಾದ ಭಾಗ್ಯನಗರವನ್ನು ಎಂಐಎಂ ಸಂಸದ ಅಸದುದ್ದೀನ್ ಓವೈಸಿ ಅವರ ಭದ್ರಕೋಟೆ ಎಂದು ಕರೆಯಲಾಗುತ್ತದೆ. ಹಾಗಿದ್ದರೂ ಭಾಗ್ಯನಗರದಲ್ಲಿ ಹಿಂದೂಗಳ ಜನಸಂಖ್ಯೆ ಶೇ. ೫೧ ರಷ್ಟಿದೆ. ಹಿಂಸಾತ್ಮಕ ಮನಸ್ಥಿತಿಗೆ ಹೆಸರುವಾಸಿಯಾದ ಭಾಗ್ಯನಗರದಲ್ಲಿ ಮತಾಂಧರ ಜನಸಂಖ್ಯೆ ಶೇ. ೪೩ ರಷ್ಟಿದ್ದರೂ ಅಲ್ಲಿ ಇಸ್ಲಾಂ ಧರ್ಮವು ಪ್ರಬಲವಾಗಿದ್ದರೂ ಹಿಂದೂಗಳದ್ದೂ ಸಂಘಟನೆಗಳಿವೆ. ಶ್ರೀರಾಮನವಮಿಯ ದಿನದಂದು ಭಾಗ್ಯನಗರದಲ್ಲಿ ಲಕ್ಷಾಂತರ ಹಿಂದೂಗಳ ಸಮ್ಮುಖದಲ್ಲಿ ನಡೆದ ಮೆರವಣಿಗೆಯು ಹಿಂದೂಗಳಲ್ಲಿ ಜಾಗೃತಗೊಂಡ ಧರ್ಮನಿಷ್ಠೆಯ ಸಂಕೇತವಾಗಿದೆ. ಆದ್ದರಿಂದ ಒಟ್ಟಾರೆ ಪರಿಸ್ಥಿತಿಯನ್ನು ಗಮನಿಸಿದರೆ, ಬಿಜೆಪಿ ಅಲ್ಲಿನ ಎಲ್ಲ ಪ್ರಖ್ಯಾತ ಮತ್ತು ರಾಷ್ಟ್ರೀಯ ನಾಯಕರನ್ನು ಕಣಕ್ಕಿಳಿಸಿದರೆ, ಅದರಲ್ಲಿ ಯಾವುದೇ ತಪ್ಪಿಲ್ಲ.
ವಿಷಕಾರಿ ಮೂಲಭೂತವಾದಕ್ಕೆ ಪರ್ಯಾಯ
ಸಭ್ಯ ಸಮಾಜವು ಮತಾಂಧರ ಕಿರುಕುಳ, ನಿರಂತರ ಸಾಮಾಜಿಕ ಉದ್ವಿಗ್ನತೆ, ಗಲಭೆಗಳು, ಕೊಳಕು ಜೀವನಶೈಲಿಯಿಂದ ಬಳಲುತ್ತಿದೆ. ಸಂಸದ ಅಸದುದ್ದೀನ್ ಅವರ ತಮ್ಮನಾದ ಶಾಸಕ ಅಕ್ಬರುದ್ದೀನ್ ಓವೈಸಿ ಅವರು ಪೊಲೀಸರನ್ನು ೧೫ ನಿಮಿಷ ಬದಿಗೆ ಸರಿಸುವ ಮತ್ತು ಹಿಂದೂಗಳನ್ನು ನಾಶ ಮಾಡುವ ಬಗ್ಗೆ ಈ ಹಿಂದೆ ಹೇಳಿದ್ದನ್ನು ಮರೆಯುವಂತಿಲ್ಲ. ಈದ್ ಸಮಯದಲ್ಲಿ ಗೋವುಗಳ ಹತ್ಯೆ, ಸಣ್ಣ-ಪುಟ್ಟ ಕಾರಣಗಳಿಂದಾಗುವ ಕೋಮು ಗಲಭೆಗಳು, ಹಿಂದೂ ಹಬ್ಬಗಳಲ್ಲಿ ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗುವ ಉದ್ವಿಗ್ನ ವಾತಾವರಣದ ಬಗ್ಗೆ ಯಾರು ಕಾಳಜಿ ವಹಿಸುತ್ತಾರೆ ? ಕಳೆದ ಹಲವಾರು ವರ್ಷಗಳಿಂದ ನಗರವು ಅಂತಹ ಸಾಮಾನ್ಯ ಪರಿಸ್ಥಿತಿಯನ್ನು ಹೊಂದಿಲ್ಲ. ಬಹುಶಃ ಅದಕ್ಕಾಗಿಯೇ ತೆಲಂಗಾಣ ರಾಷ್ಟ್ರ ಸಮಿತಿಯು ಓವೈಸಿಯ ಭದ್ರಕೋಟೆಯಲ್ಲಿ ತನ್ನ ಪಕ್ಷದಿಂದ ಸ್ಪರ್ಧಿಸಿದ ಸ್ಥಾನಗಳಿಗಿಂತ ಎರಡು ಪಟ್ಟು ಹೆಚ್ಚು ಸ್ಥಾನಗಳನ್ನು ಹೊಂದಿದೆ. ಆದರೆ, ತೆಲಂಗಾಣ ರಾಷ್ಟ್ರ ಸಮಿತಿಯ ಆಡಳಿತವು ಜನಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸುತ್ತಿಲ್ಲ. ಶೇ. ೫೧ ರಷ್ಟಿರುವ ಭಾಗ್ಯನಗರದ ಹಿಂದೂ ಸಮುದಾಯವು ಮತ ಚಲಾಯಿಸಿದೆ ಮತ್ತು ಹಿಂದೂಗಳನ್ನು ಬಿಜೆಪಿ ಹತ್ತಿರ ಮಾಡಿಕೊಂಡು ಮತ ಚಲಾಯಿಸಿದರೂ ಚಿತ್ರಣ ಬದಲಾಗುತ್ತದೆ. ಸಹಜವಾಗಿ, ಈ ಪರಿಸ್ಥಿತಿಗೆ ಮುಖ್ಯ ಅಡಚಣೆಯೆಂದರೆ ದಕ್ಷಿಣ ರಾಜ್ಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವ ಭಾಷೆ ಮತ್ತು ಪ್ರಾಂತೀಯ ಅಸ್ಮಿತೆ ! ಅದಕ್ಕಾಗಿಯೇ ಜನರು ಸ್ಥಳೀಯ ಪಕ್ಷಗಳಿಗೆ ಆದ್ಯತೆ ನೀಡುತ್ತಾರೆ. ಆದರೆ, ಬಿಜೆಪಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಅವರಿಗೆ ನಾಲ್ಕು ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಬಿಜೆಪಿ ಅಲ್ಲಿ ಪರ್ಯಾಯವಾಗಿ ನಿಲ್ಲಬೇಕು, ಅಂದರೆ ಇಸ್ಲಾಮಿಕ್ ಮೂಲಭೂತವಾದಕ್ಕೆ ಪರ್ಯಾಯವಾಗಬೇಕು. ಸದ್ಯಕ್ಕೆ, ಬಿಜೆಪಿ ಪರ್ಯಾಯವಾಗಬಹುದು. ಬಿಜೆಪಿಯ ಮುಂದಿನ ಪ್ರಯಾಣವನ್ನು ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ
ಮಾಡುವ ಸೂತ್ರದಲ್ಲಿ ಕಾಣಬಹುದು, ಇದನ್ನು ಪ್ರಚಾರಸಭೆಗಳಲ್ಲಿ ಮಂಡಿಸಲಾಯಿತು. ಕಳೆದ ಕೆಲವು ವರ್ಷಗಳಿಂದ ಬಿಜೆಪಿಯ ಹಾದಿಯನ್ನು ನೋಡಿದ ಸ್ಥಳೀಯ ಪಕ್ಷಗಳು ಬಿಜೆಪಿಯಿಂದ ದೂರವಿರಲು ಮತ್ತು ತಮ್ಮದೇ ಆದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಭಾಗ್ಯನಗರದ ಹಿಂದೂಗಳು ನಿಜವಾಗಿಯೂ ಮುಸ್ಲಿಂ ಆಡಳಿತದ ನೊಗದಿಂದ ಮುಕ್ತರಾಗಲು ಬಯಸಿದರೆ, ಈ ವಿಷಯದಲ್ಲಿ ಬಿಜೆಪಿ ವಿಶೇಷ ಕಾಳಜಿ ವಹಿಸಬೇಕು.
ರಾಜಕೀಯದ ಬಲಿಪಶುಗಳು !
ಇಲ್ಲಿಯವರೆಗೆ ಭಾಗ್ಯನಗರದಲ್ಲಿ ಹಿಂದೂಗಳು ಮಾತ್ರ ದಬ್ಬಾಳಿಕೆಗೆ ಒಳಗಾಗಿದ್ದರು. ಮತಾಂಧರ ರಾಜ್ಯದಲ್ಲಿ ಮುಸ್ಲಿಮ ರಾದರೂ ಏಳಿಗೆ ಹೊಂದಿದ್ದಾರೆಯೇ ? ಭಾಗ್ಯನಗರದಲ್ಲಿ ಶೇ. ೬೩ ಮುಸ್ಲಿಮರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಅಂಕಿ ಅಂಶಗಳು ತೋರಿಸುತ್ತವೆ. ಭಾಗ್ಯನಗರ ಸಣ್ಣ ಹಳ್ಳಿಯಲ್ಲ. ಭಾಗ್ಯನಗರವು ಬೆಂಗಳೂರಿನಂತೆ ಐಟಿ-ತಂತ್ರಜ್ಞಾನದ ಕಂಪನಿಗಳಿಂದ ರಾರಾಜಿಸುತ್ತಿದೆ. ಶಿಕ್ಷಣ ಮತ್ತು ಉದ್ಯೋಗಕ್ಕೆ ಉತ್ತಮ ಅವಕಾಶಗಳನ್ನು ಪಡೆಯಲು ವಿವಿಧ ರಾಜ್ಯಗಳ ಯುವಕ-ಯುವತಿಯರು ಅಲ್ಲಿಗೆ ಬರುತ್ತಾರೆ. ಇದರ ಹೊರತಾಗಿಯೂ, ಭಾಗ್ಯನಗರದ ಸ್ಥಳೀಯ ಮುಸಲ್ಮಾನರು ಅಭಿವೃದ್ಧಿ ಹೊಂದಿಲ್ಲ. ಇಲ್ಲಿಯವರೆಗೆ, ಮತಾಂಧತೆಯ ರಾಜಕೀಯ ಲಾಭವನ್ನು ಪಡೆದದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ೭೦ ವರ್ಷಗಳಿಂದ ಮುಸ್ಲಿಮರನ್ನು ಅಕ್ಷರಶಃ ಬಳಸಿದೆ ಮತ್ತು ಈಗ ಕಾಂಗ್ರೆಸ್ ತಮ್ಮ ಭಾವನೆಗಳೊಂದಿಗೆ ಆಟವಾಡಿದೆ ಎಂದು ಮುಸಲ್ಮಾನರು ಅರಿತುಕೊಂಡಿದ್ದಾರೆ. ಅದೇ ರೀತಿಯಲ್ಲಿ, ಎಂಐಎಂ, ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಇತರ ಪಕ್ಷಗಳು ತಮ್ಮದೇ ಆದ ರಾಜಕೀಯ ಜೇಬುಗಳನ್ನು ಮಾತ್ರ ತುಂಬುತ್ತಿವೆ. ಹೇಗಾದರೂ, ಈ ಬಾರಿಯ ಚುನಾವಣೆ ಎಂಐಎಂ ಮತ್ತು ತೆಲಂಗಾಣ ರಾಷ್ಟ್ರ ಸಮಿತಿಗೆ ಕಠಿಣವಾಗಿರಲಿದೆ, ಎಂಬುದಂತೂ ಖಚಿತ ! ಹಿಂದೂಸ್ಥಾನ ಪದದ ಅಲರ್ಜಿ ಹೊಂದಿರುವ ‘ವಂದೇ ಮಾತರಮ್ ಎಂದು ಹೇಳುವುದನ್ನು ವಿರೋಧಿಸುವ ಎಲ್ಲರಿಗೂ ಭಾಗ್ಯನಗರದಲ್ಲಿ ನೆಲೆಸಲು ಅವಕಾಶವಿದೆ. ಶ್ರೀ ಭಾಗ್ಯಲಕ್ಷ್ಮಿದೇವಿ ಆಧುನಿಕ ಮೊಘಲರ ಕೈಯಲ್ಲಿರುವ ಭಕ್ತರನ್ನು ರಕ್ಷಿಸುತ್ತಿದ್ದಾಳೆ. ಅವಳ ಅನುಗ್ರಹದಿಂದ ಮಾತ್ರ ಇಸ್ಲಾಮಿಕ್ ಮೂಲಭೂತವಾದವನ್ನು ನಿರ್ಮೂಲನೆ ಮಾಡಬಹುದು, ಇದರಲ್ಲಿ ಎರಡು ಮಾತಿಲ್ಲ !