ದೆಹಲಿಯ ಒಂದು ಕಾಲುವೆಯಲ್ಲ್ಲಿ ದೊಡ್ಡ ಪ್ರಮಾಣದಲ್ಲಿ ಹಸುಗಳ ಕಳೇಬರ ಪತ್ತೆ

ಹಲವು ತಿಂಗಳುಗಳಿಂದ ಗೋಹತ್ಯೆ ಮಾಡಿ ಕಳೇಬರಗಳನ್ನು ಕಾಲುವೆಯಲ್ಲಿ ಎಸೆಯಲಾಗುತ್ತಿದೆ ಎಂಬ ಅನುಮಾನ

ದೇಶದ ಅನೇಕ ರಾಜ್ಯಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಿರುವಾಗ ಇಂತಹ ಘಟನೆಗಳು ನಡೆಯುತ್ತವೆ, ಇದು ಪೊಲೀಸರಿಗೆ ಮತ್ತು ಸರಕಾರಕ್ಕೆ ನಾಚಿಕೆಗೇಡು ! ಗೋಹತ್ಯೆ ಮಾಡುವವರಿಗೆ ತಕ್ಷಣ ಕಾನೂನು ಕ್ರಮ ಜರುಗಿಸಿ ಶಿಕ್ಷೆ ವಿಧಿಸಲು ದೇಶದಲ್ಲಿ ಸ್ವತಂತ್ರ ನ್ಯಾಯಾಲಯವನ್ನು ಸ್ಥಾಪಿಸುವುದು ಆವಶ್ಯಕವಿದೆ !

ದೆಹಲಿ – ಸ್ಥಳೀಯ ದ್ವಾರಕಾ ಸೆಕ್ಟರ್ – ೨೩ ರ ಪೋಚನಪುರ ಗ್ರಾಮದ ಒಂದು ಕಾಲುವೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಸುಗಳ ಕಳೇಬರಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿಸಿದ್ದಕ್ಕಾಗಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಘಟನೆ ತಿಳಿದ ನಂತರ ಸ್ಥಳೀಯ ಬಿಜೆಪಿ ಸಂಸದ ಪರವೇಶ ಸಾಹಿಬ ಸಿಂಗ್ ಸ್ಥಳಕ್ಕೆ ಬಂದು ವಿಚಾರಿಸಿ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.

(ಈ ಚಿತ್ರ ಪ್ರಕಟಿಸಿರುವ ಉದ್ದೇಶ ಯಾರ ಭಾವನೆಗಳಿಗೆ ನೋವುಂಟು ಮಾಡುವುದಾಗಿರದೆ ನೈಜಸ್ಥಿತಿ ಜನರಿಗೆ ತಿಳಿಯಬೇಕು ಎಂಬ ಉದ್ದೇಶವಿದೆ)

ಅವರ ಪ್ರಕಾರ, ಗೋಹತ್ಯೆ ಮಾಡಿದ ನಂತರ ಕಳೇಬರಗಳನ್ನು ಇಲ್ಲಿ ಎಸೆಯಲಾಗುತ್ತಿತ್ತು ಮತ್ತು ಇದು ಹಲವು ತಿಂಗಳುಗಳವರೆಗೆ ನಡೆಯುತ್ತಿರುವ ಸಾಧ್ಯತೆಯನ್ನೂ ಅವರು ಮುಂದಿಟ್ಟದ್ದಾರೆ. ಇಂತಹ ಘಟನೆಗಳು ಇನ್ನು ಮುಂದೆ ಆಗಬಾರದು; ಆದ್ದರಿಂದ ಇಲ್ಲಿ ಸಿಸಿಟಿವಿ ಅಳವಡಿಸುವ ಬೇಡಿಕೆ ಮಾಡಿದ್ದಾರೆ.