ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿಯ ನಿಮಿತ್ತ ಶ್ರದ್ಧಾಂಜಲಿ ಸಲ್ಲಿಸಲು ಹೋದ ಹಿಂದೂ ಮಕ್ಕಲ್ ಕಚ್ಚಿಯ ಅರ್ಜುನ ಸಂಪತ್ ಅವರನ್ನು ದ್ರಮುಕ ಹಾಗೂ ವಿ.ಸಿ.ಕೆ. ಕಾರ್ಯಕರ್ತರಿಂದ ಮುತ್ತಿಗೆ !

ಸಮಾನತೆಗಾಗಿ ಹೋರಾಡಿದ ಬಾಬಾಸಾಹೇಬರ ಹೆಸರಿನಲ್ಲಿ ಇಂತಹ ಕೃತ್ಯಗಳನ್ನು ಮಾಡುವ ರಾಜಕೀಯ ಪಕ್ಷಗಳು ಎಂದಾದರೂ ಸಮಾಜದ ಬಗ್ಗೆ ವ್ಯಾಪಕವಾಗಿ ಯೋಚಿಸುತ್ತವೆಯೇ ?

ಚೆನ್ನೈ – ಹಿಂದೂ ಮಕ್ಕಲ್ ಕಚ್ಛಿಯ ಅಧ್ಯಕ್ಷ ಅರ್ಜುನ ಸಂಪತ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಪುಣ್ಯತಿಥಿಯ ನಿಮಿತ್ತ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸ್ಥಳೀಯ ರಾಜ ಅಣ್ಣಾಮಲೈ ಪುರಂನಲ್ಲಿರುವ ಸ್ಮಾರಕಕ್ಕೆ ಹೋಗಿದ್ದರು. ಆ ಸಮಯದಲ್ಲಿ ದ್ರಮುಕ ಹಾಗೂ ವಿದುಥಲಾಯಿ ಚಿರುಥೈಗಲ ಕತ್ಛಿ (ವಿ.ಸಿ.ಕೆ.) ಈ ಪಕ್ಷದ ಕಾರ್ಯಕರ್ತರು ಅವರನ್ನು ಒಳ ಪ್ರವೇಶಿಸದಂತೆ ತಡೆದರು. ಜೊತೆಗೆ ಅವರು ಸಂಪತ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಮಯದಲ್ಲಿ, ‘ನಾವು ಸನಾತನ ಧರ್ಮವನ್ನು ಕಿತ್ತುಹಾಕುತ್ತೇವೆ ಮತ್ತು ಕೇಸರಿಯನ್ನು ನಾಶಪಡಿಸುತ್ತೇವೆ’ ಎಂದು ನಿಂದಿಸಿದರು. ವಿ.ಸಿ.ಕೆ. ಧ್ವಜಗಳನ್ನು ಹೊತ್ತ ಇಬ್ಬರು ಮತಾಂಧರು ಸಂಪತ್‌ರವರ ಕುತ್ತಿಗೆಯಿಂದ ಕೇಸರಿ ಉಪರ್ಣವನ್ನು ಎಳೆಯಲು ಪ್ರಯತ್ನಿಸಿದರು. ಕೆಲವು ಕಾರ್ಯಕರ್ತರು ಸಂಪತ್ ಮೇಲೆ ಹಲ್ಲೆಗೆ ಯತ್ನಿಸಿದರು. ಸ್ಮಾರಕದಲ್ಲಿ ‘ಭಾರತ್ ಮಾತಾ ಕಿ ಜೈ’ ಘೋಷಣೆ ಹಾಕುವುದನ್ನೂ ಅವರು ವಿರೋಧಿಸಿದರು. ಈ ಸಮಯದಲ್ಲಿ ಪೊಲೀಸರ ಸಹಾಯದಿಂದ ಡಾ. ಅಂಬೇಡ್ಕರ್ ಅವರಿಗೆ ಸಂಪತ್ ಅವರು ಗೌರವ ಸಲ್ಲಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ಸಂಪತ್ ಅವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು ಡಾ. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ತಡೆಯುತ್ತಾರೆ. ಇದು ಒಂದು ರೀತಿಯ ಅಸ್ಪೃಶ್ಯತೆಯೇ. ಬಾಬಾಸಾಹೇಬ ಹೆಸರನ್ನು ತೆಗೆದುಕೊಳ್ಳುವವರು ಈ ಬಗ್ಗೆ ನಾಚಿಕೆಪಡಬೇಕು. ಬಾಬಾಸಾಹೇಬ್ ಈ ಸಂಘಟನೆಯ ನಾಯಕರಲ್ಲ, ಅವರು ಭಾರತೀಯರ ನಾಯಕರಾಗಿದ್ದಾರೆ. ಈ ಕಾರ್ಯಕರ್ತರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದೂ ಸಂಪತ್ ಒತ್ತಾಯಿಸಿದರು.