ಹೊಸದುರ್ಗ (ಚಿತ್ರದುರ್ಗ ಜಿಲ್ಲೆ) – ಶ್ರೀ ಕ್ಷೇತ್ರ ಬೆಲಗೂರಿನ ಶ್ರೀ ವೀರಪ್ರತಾಪ ಆಂಜನೇಯ ದೇವಸ್ಥಾನದ ಸ್ವಾಮಿ ಬಿಂದೂ ಮಾಧವ ಶರ್ಮಾ (೭೭ ವರ್ಷ) ಇವರು ೨೭ ನವೆಂಬರ್ ೨೦೨೦ ರಂದು ಬೆಳಗ್ಗೆ ಅಸ್ತಂಗತರಾದರು. ಅನಾರೋಗ್ಯದಿಂದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು; ಆದರೆ ಬೆಳಗ್ಗೆ ಹೃದಯಾಘಾತದಿಂದ ಅವರ ದೇಹತ್ಯಾಗವಾಗಿ ಆಂಜನೇಯನ ಚರಣಗಳಲ್ಲಿ ಅವರು ಲೀನರಾದರು. ನವೆಂಬರ್ ೨೮ ರಂದು ಬೆಲಗೂರಿನಲ್ಲಿ ಅವರ ಅಂತಿಮಸಂಸ್ಕಾರವನ್ನು ಮಾಡಲಾಯಿತು.
ಬಿಂದೂ ಮಾಧವ ಶರ್ಮಾ ಸ್ವಾಮೀಜಿಯವರು ಕವಿ ಮತ್ತು ನಾಟಕಕಾರರೂ ಆಗಿದ್ದರು, ಹಾಗೆಯೇ ಅವರು ಅನೇಕ ಗ್ರಂಥ ಮತ್ತು ಕವಿತೆಗಳನ್ನು ಬರೆದಿದ್ದಾರೆ. ಅವರು ವಿಜಯನಗರದ ಶಾಸನಕಾಲದಲ್ಲಿ ಕಟ್ಟಲಾದ ಶ್ರೀ ಮಾರುತಿ ದೇವಸ್ಥಾನದ ಜೀರ್ಣೋದ್ಧಾರ ಮಾಡಿದ್ದರು. ಅವರು ಕೋಟಿ ರುದ್ರಯಾಗಗಳನ್ನೂ ಮಾಡಿದ್ದರು.
ಸ್ವಾಮೀಜಿಯವರು ಪರಾತ್ಪರ ಗುರು ಡಾ. ಆಠವಲೆ, ಹಿಂದೂ ರಾಷ್ಟ್ರ ಮತ್ತು ಸನಾತನದ ಬಗ್ಗೆ ಹೇಳಿದ ಅಂಶಗಳು
‘೩.೧೦.೨೦೧೯ ರಂದು ಗೋವಾದ ರಾಮನಾಥಿಯಲ್ಲಿ ಸನಾತನದ ಸಾಧಕರಾದ ಶ್ರೀ. ರಾಮ ಹೊನಪ, ಶಿವಮೊಗ್ಗದ ಶ್ರೀ. ಪ್ರಭಾಕರ ಪಡಿಯಾರ ಮತ್ತು ಇತರ ಸಾಧಕರು ಶ್ರೀ ಕ್ಷೇತ್ರ ಬೆಲಗೂರು ಮಠಕ್ಕೆ ಹೋಗಿ ಬಿಂದೂ ಮಾಧವ ಶರ್ಮಾ ಸ್ವಾಮೀಜಿಗಳ ದರ್ಶನ ಮತ್ತು ಆಶೀರ್ವಾದವನ್ನು ಪಡೆದಿದ್ದರು. ಸ್ವಾಮೀಜಿಯವರು ಹನುಮಂತನ ಭಕ್ತರಾಗಿದ್ದು ಅವರಿಗೆ ಅಷ್ಟಸಿದ್ಧಿಗಳು ಪ್ರಾಪ್ತವಾಗಿವೆ. ಸ್ವಾಮೀಜಿಯವರಿಗೆ ನಾಥ ಸಂಪ್ರದಾಯದ ಮೂರು ಸಾವಿರ ವರ್ಷಗಳ ಪರಂಪರೆಯಿದೆ. ಸ್ವಾಮೀಜಿಯವರಿಗೆ ಸೂಕ್ಷ್ಮದ ವಿಷಯದಲ್ಲಿ ಬಹಳ ಜ್ಞಾನವಿದೆ. ಸಾಧಕರ ಭೇಟಿಯ ಸಮಯದಲ್ಲಿ ಅವರು ಸೂಕ್ಷ್ಮ ಜ್ಞಾನದ ಮೂಲಕ ಪರಾತ್ಪರ ಗುರು ಡಾ. ಆಠವಲೆ, ಹಿಂದೂ ರಾಷ್ಟ್ರ ಮತ್ತು ಸನಾತನ ಸಂಸ್ಥೆ ಇವುಗಳ ಬಗ್ಗೆ ಮುಂದಿನ ಮಾರ್ಗದರ್ಶನವನ್ನು ಮಾಡಿದರು.
೧. ಪರಾತ್ಪರ ಗುರು ಡಾ. ಆಠವಲೆ
ಪರಾತ್ಪರ ಗುರು ಡಾಕ್ಟರರ ಮಹಾಮೃತ್ಯುಯೋಗದ ಬಗ್ಗೆ ಹೇಳಿದಾಗ ಸ್ವಾಮೀಜಿಯವರು, “ಪರಾತ್ಪರ ಗುರು ಡಾಕ್ಟರರಿಗೆ ಏನೂ ಆಗುವುದಿಲ್ಲ. ಅವರಿಂದ ಇನ್ನಷ್ಟು ಆಧ್ಯಾತ್ಮಿಕ ಕಾರ್ಯಗಳು ಆಗಲಿಕ್ಕಿವೆ. ಅವರು ಹಿಂದೂ ಧರ್ಮದ ಉದ್ಧಾರದ ಕಾರ್ಯವನ್ನು ಮಾಡುತ್ತಿದ್ದಾರೆ. ಅವರು ಮಹಾನ ಚಕ್ರವರ್ತಿಗಳಾಗಿದ್ದಾರೆ ಮತ್ತು ಅವರ ಮುಖದಲ್ಲಿ ರುದ್ರನಿದ್ದಾನೆ”, ಎಂದು ಹೇಳಿದ್ದರು.
೨. ಹಿಂದೂ ರಾಷ್ಟ್ರದ ಸ್ಥಾಪನೆ
ಅ. ಕೆಲವು ವರ್ಷಗಳ ನಂತರ ಜಗತ್ತಿನಾದ್ಯಂತ ಕೇವಲ ಹಿಂದೂ ಧರ್ಮ ಮಾತ್ರ ಇರುವುದು.
ಆ. ಭಾರತದಲ್ಲಿ ೨೦೨೩ ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು.
ಇ. ಹಿಂದೂ ಧರ್ಮ ಎಲ್ಲೆಡೆ ಸ್ಥಾಪನೆಯಾಗಲು ಸಂತರು ತಪಸ್ಸು ಮಾಡುತ್ತಿದ್ದಾರೆ. ಹಿಂದೂ ಧರ್ಮವು ಪುನಃ ಸ್ಥಾಪನೆಯಾಗಲಿದೆ. ಇದೆಲ್ಲವೂ ಭಗವಂತನದ್ದೇ ಆಯೋಜನೆಯಾಗಿದೆ.
೩. ಸನಾತನ ಸಂಸ್ಥೆ
ಅ. ಕನ್ನಡ ಭಾಷೆಯ ಸಾಪ್ತಾಹಿಕ ‘ಸನಾತನ ಪ್ರಭಾತ’ವನ್ನು ಓದಿದ ಸ್ವಾಮೀಜಿಯವರ, “ಸನಾತನ ಸಂಸ್ಥೆಯ ಕಾರ್ಯವು ಜಗತ್ತಿನಾದ್ಯಂತ ಹರಡುವುದು”, ಎಂಬ ಆಶೀರ್ವಾದವನ್ನು ನೀಡಿದ್ದರು.
ಆ. ಸನಾತನದ ಸಹಾಯಕ್ಕೆ ನಾನು ಮಾರುತಿಯನ್ನು ಕಳುಹಿಸುವೆನು.
ಇ. ಸನಾತನ ಸಂಸ್ಥೆಯ ಮೇಲೆ ಹನುಮಂತನು ಪ್ರಸನ್ನನಾಗಿದ್ದಾನೆ.
ಈ. ನಾನು ಸನಾತನ ಸಂಸ್ಥೆಗೆ ಎಲ್ಲ ಆಶೀರ್ವಾದಗಳನ್ನು ನೀಡಿದ್ದೇನೆ.’
– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೬.೪.೨೦೨೦)