ಇಂದು ದೇಶದ ಮುಂದೆ ಭದ್ರತೆಗೆ ಸಂಬಂಧಿಸಿದ ಅನೇಕ ಸವಾಲುಗಳಿವೆ. ಇದರಲ್ಲಿ ಬಾಹ್ಯ ಮತ್ತು ಆಂತರಿಕ ಹೀಗೆ ಭದ್ರತೆಯ ಎರಡು ವಿಧಗಳಿವೆ. ಬಾಹ್ಯ ಭದ್ರತೆಯ ವಿಚಾರ ಮಾಡಿದರೆ, ಲಡಾಖ್‌ನಲ್ಲಿ ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ನಡೆದಿದೆ. ಈ ಸಂಘರ್ಷ ಮೇ ೫ ರಂದು ಪ್ರಾರಂಭವಾಯಿತು ಮತ್ತು ಯಾವಾಗ ಮುಗಿಯುತ್ತದೆ ಎಂದು ಗೊತ್ತಿಲ್ಲ. ಪಾಕಿಸ್ತಾನ ಗಡಿಯಲ್ಲಿ ಪ್ರತಿದಿನ ಕದನವಿರಾಮ ಉಲ್ಲಂಘನೆಯಾಗುತ್ತಿದ್ದು ಅಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಹಾಗೆಯೇ ಬಾಂಗ್ಲಾದೇಶದಿಂದ ಭಾರತದಲ್ಲಿ ಅಕ್ರಮವಾಗಿ ನುಸುಳುವಿಕೆ ನಡೆಯುತ್ತಿದೆ. ಭಯೋತ್ಪಾದಕರು ನೆರೆಯ ರಾಷ್ಟ್ರದಿಂದ ದೇಶದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಶ್ರೀಲಂಕಾದ ಸಮುದ್ರಮಾರ್ಗದಿಂದ ಕೆಲವು ಭಯೋತ್ಪಾದಕರು ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿಶೇಷವಾಗಿ ತಮಿಳುನಾಡು, ತೆಲಂಗಾಣ ಮತ್ತು ಕೇರಳದೊಳಗೆ ಪ್ರವೇಶಿಸಿದ್ದಾರೆ ಎಂದು ಸುದ್ದಿ ಬಂದಿತ್ತು.
೧. ಜಾಗೃತ ಗುಪ್ತಚರ ದಳಗಳಿಂದಾಗಿ ಭಯೋತ್ಪಾದಕರ ಸಂಚು ಬೇಗನೆ ಬಯಲಾಗುವುದು
ಕೆಲವು ದಿನಗಳ ಹಿಂದೆ ಎನ್.ಐ.ಎ. (ರಾಷ್ಟ್ರೀಯ ತನಿಖಾದಳ) ಐಸಿಸ್‌ನ ಕೆಲವು ಭಯೋತ್ಪಾದಕರನ್ನು ಬಂಧಿಸಿತು. ದೇಶದಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ಮಾಡುವ ಮೊದಲೇ ಅವರನ್ನು ಬಂಧಿಸುವಲ್ಲಿ ಯಶಸ್ಸು ಸಿಕ್ಕಿತು. ಹಿಂದೆ ಭಯೋತ್ಪಾದಕರು ದೇಶದಲ್ಲಿ ಎಲ್ಲಿ ಬೇಕಾದಲ್ಲಿ ಆಕ್ರಮಣ ಮಾಡುತ್ತಿದ್ದರು ಮತ್ತು ಅದರಲ್ಲಿ ನೂರಾರು ಜನರು ಸಾಯುತ್ತಿದ್ದರು. ಘಟನೆ ನಡೆದ ಬಳಿಕ ತನಿಖೆ ನಡೆಯುತ್ತಿತ್ತು ಮತ್ತು ಅದರಲ್ಲಿ ಶೇ. ೫೦ ರಷ್ಟು ಭಯೋತ್ಪಾದಕರ ಬಂಧನವೂ ಆಗುತ್ತಿರಲಿಲ್ಲ. ಯಾರನ್ನು ಬಂಧಿಸಲಾಗುತ್ತಿತ್ತೋ, ಅವರ ಮೇಲೆ ನ್ಯಾಯಾಲಯದಲ್ಲಿ ವರ್ಷಗಟ್ಟಲೆ ನ್ಯಾಯ ಪ್ರಕ್ರಿಯೆ ನಡೆಯುತ್ತಿತ್ತು. ವರ್ಷ ೧೯೯೩ ರ ಮುಂಬಯಿ ಮೇಲಿನ ಭಯೋತ್ಪಾದಕರ ದಾಳಿಯ ಆಲಿಕೆ ಇನ್ನೂ ನಡೆಯುತ್ತಿದೆ. ಬಂಧಿತ ಭಯೋತ್ಪಾದಕರಲ್ಲಿ ಶೇ. ೫೦ ರಷ್ಟು ಆರೋಪಿಗಳು ಮುಪ್ಪಿನಿಂದ ಮರಣ ಹೊಂದಿದ್ದಾರೆ. ನಮಗೆ ಅವರನ್ನು ಗಲ್ಲಿಗೇರಿಸಲು ಸಾಧ್ಯವಾಗಲಿಲ್ಲ. ಈಗ ನಮ್ಮ ವಿವಿಧ ಗುಪ್ತಚರ ಸಂಸ್ಥೆಗಳು ಒಳ್ಳೆಯ ರೀತಿಯಲ್ಲಿ ಕೆಲಸವನ್ನು ಮಾಡುತ್ತಿವೆ ಆದುದರಿಂದ ಭಯೋತ್ಪಾದಕರನ್ನು ಬಂಧಿಸಲಾಗುತ್ತಿದ್ದು, ಅವರ ಸಂಚುಗಳು ಬಯಲಾಗುತ್ತಿವೆ.
೨. ಯುದ್ಧದಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದು ಅರಿವಾಗಿ ಭಾರತದಲ್ಲಿ ‘ಹೈಬ್ರಿಡ್ ವಾರ್ ಆರಂಭಿಸಿರುವ ಪಾಕಿಸ್ತಾನ
ವರ್ಷ ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋತಿತು. ತದನಂತರ ಪಾಕಿಸ್ತಾನವು ಭಾರತದ ವಿವಿಧ ರಾಜ್ಯಗಳಲ್ಲಿ ಭಯೋತ್ಪಾದಕರನ್ನು ಮತ್ತು ಅವರ ಬೆಂಬಲಿಗರನ್ನು ನುಸುಳಿಸಲು ಪ್ರಾರಂಭಿಸಿತು. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಪ್ರಾರಂಭಿಸಿತು. ದೇಶದ ಮುಂಬಯಿ ಮತ್ತು ಪುಣೆಯಂತಹ ಮಹಾನಗರಗಳಲ್ಲಿ ಬಾಂಬ್‌ಸ್ಫೋಟಗಳನ್ನು ನಡೆಸಿತು. ಹಾಗೆಯೇ ಮಧ್ಯ ಭಾರತದಲ್ಲಿ ನಕ್ಸಲವಾದಿ ಅಥವಾ ಮಾವೋವಾದಿಗಳ ಚಟುವಟಿಕೆಗಳನ್ನು ಪ್ರಾರಂಭಿಸಿತು. ಇದರ ಹಿಂದೆ ಭಾರತದ ಅರ್ಥವ್ಯವಸ್ಥೆಯನ್ನು ನಾಶಗೊಳಿಸುವುದು ಅದರ ಮೂಲ ಉದ್ದೇಶವಾಗಿತ್ತು. ವರ್ಷ ೨೦೧೪ ರಲ್ಲಿ ಭಾರತದಲ್ಲಿ ಅಧಿಕಾರ ಬದಲಾಯಿತು. ತದನಂತರ ಕೇಂದ್ರ ಸರಕಾರವು ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಅತ್ಯಂತ ಆಕ್ರಮಣಕಾರಿ ನಿಲುವು ತಾಳಿತು. ಪಾಕಿಸ್ತಾನದ ವಿರುದ್ಧದ ‘ಸರ್ಜಿಕಲ್ ಸ್ಟ್ರೈಕ್ ಆಗಿರಲಿ ಅಥವಾ ‘ಬಾಲಾಕೋಟ ಆಕ್ರಮಣ ಆಗಿರಲಿ ಅಥವಾ ಲಡಾಖ್‌ನಲ್ಲಿ ಚೀನಿ ಸೈನ್ಯದ ಮೇಲಿನ ಆಕ್ರಮಕ ವೃತ್ತಿ ಇರಲಿ, ಈಗ ಭಾರತದ ನಿಲುವು ಆಕ್ರಮಕವಾಗಿದೆ. ಇದರಿಂದ ಚೀನಾ ಮತ್ತು ಪಾಕಿಸ್ತಾನಗಳಿಗೆ ಭಾರತದಲ್ಲಿ ಕೇವಲ ಭಯೋತ್ಪಾದನೆಯನ್ನು ಹರಡಿದರೆ ಸಾಕಾಗುವುದಿಲ್ಲ. ಬೇರೆ ಇನ್ನೇನಾದರೂ ಮಾಡಬೇಕೆನಿಸಿತು. ತದನಂತರ ಅವರು ಭಾರತದಲ್ಲಿ ‘ಹೈಬ್ರಿಡ್ ವಾರ್ ಪ್ರಾರಂಭಿಸಿದರು. ‘ಹೈಬ್ರಿಡ್ ವಾರ್ ಅಂದರೆ ಚೀನಾ ಒಂದು ಕಡೆ ಭಾರತದೊಂದಿಗೆ ‘ಡಿಪ್ಲೊಮ್ಯಾಟಿಕ್ ಸ್ತರದಲ್ಲಿ ಚರ್ಚೆಯನ್ನು ಮಾಡುತ್ತಿದೆ, ಇನ್ನೊಂದೆಡೆ ಭಾರತದ ವಿರುದ್ಧ ಅಪಪ್ರಚಾರದ ಯುದ್ಧ, ಮಾನಸಿಕ ಯುದ್ಧ, ಮಾಹಿತಿ ಯುದ್ಧ, ಮಾಧ್ಯಮಗಳಲ್ಲಿ ನುಸುಳಿ ಜನರಲ್ಲಿ ಭ್ರಮೆಯನ್ನು ಹುಟ್ಟಿಸುವುದು, ಪತ್ರಕರ್ತರು ಅಥವಾ ಸುರಕ್ಷಾ ತಜ್ಞರನ್ನು ಚೀನಾ ಪ್ರೇಮಿಗಳನ್ನಾಗಿ ಮಾಡುವುದು. ಲೀಗಲ್ ವಾರ್, ಭಯೋತ್ಪಾದಕ ಯುದ್ಧ, ನಕ್ಸಲವಾದ ಅಥವಾ ಮಾವೋವಾದ ಹರಡುವುದು, ಅನಧಿಕೃತ ಬಾಂಗ್ಲಾದೇಶಿಗಳ ನುಸುಳುವಿಕೆ, ವಲಸಿಗರು ಮತ್ತು ಈಗ ಜೈವಿಕ ಯುದ್ಧ (ಚೀನಿ ವಿಷಾಣು) ಇತ್ಯಾದಿ.
೩. ದೇಶದ ರಕ್ಷಣೆಗಾಗಿ ಭಾರತದ ಅರ್ಧ ಸೈನ್ಯ ರಾತ್ರಿಯಿಡೀ ಎಚ್ಚರವಿರುತ್ತದೆ
ದೇಶದಲ್ಲಿ ಎಷ್ಟು ಭಯೋತ್ಪಾದಕರಿದ್ದಾರೆಯೋ, ಅವರೆಲ್ಲರೂ ಪಾಕಿಸ್ತಾನ ಅಥವಾ ಚೀನಾದಿಂದ ತರಬೇತಿಯನ್ನು ಪಡೆದುಕೊಂಡು ಬಂದಿದ್ದಾರೆ. ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ ೬ ತಿಂಗಳ ತರಬೇತಿ ನಡೆಯುತ್ತದೆ. ತದನಂತರ ಅವರನ್ನು ಜಮ್ಮೂ-ಕಾಶ್ಮೀರದಲ್ಲಿ ನುಸುಳಿಸಲಾಗುತ್ತದೆ. ಈ ಭಯೋತ್ಪಾದಕರು ಕಾಶ್ಮೀರ ಕಣಿವೆಯಿಂದ ಅಥವಾ ಸಮುದ್ರಮಾರ್ಗದಿಂದ ಪ್ರವೇಶಿಸುತ್ತಾರೆ. ಅವರು ಭಾರತದ ಗಡಿಯೊಳಗೆ ಬರಬಾರದೆಂದು ಭಾರತೀಯ ಸೈನಿಕರು ರಾತ್ರಿಯಿಡೀ ಗಡಿ ನಿಯಂತ್ರಣ ರೇಖೆಯಲ್ಲಿ ಪಹರೆ ಕಾಯುತ್ತಾರೆ ಮತ್ತು ಭಯೋತ್ಪಾದಕರು ಒಳಗೆ ನುಸುಳುವುದನ್ನು ತಡೆಯುತ್ತಾರೆ. ಚೀನಾ ಗಡಿಯಲ್ಲಿಯೂ ಇದೇ ಸ್ಥಿತಿಯಿದೆ. ಸುಮಾರು ೧೨ ಲಕ್ಷದಷ್ಟು ಭಾರತೀಯ ಸೈನಿಕರಿದ್ದಾರೆ; ಅವರಲ್ಲಿ ಅರ್ಧದಷ್ಟು ಸೈನಿಕರು ದೇಶರಕ್ಷಣೆಗಾಗಿ ರಾತ್ರಿ ಮಲಗುವುದಿಲ್ಲ ಭಾರತೀಯ ಸೇನೆಯು ಯಾವಾಗಲೂ ಜಾಗರೂಕವಾಗಿರುತ್ತದೆ. ಭಾರತವು ಪ್ರತಿವರ್ಷ ಅಗಾಧ ಸಂಖ್ಯೆಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರನ್ನು ಸಾಯಿಸುತ್ತದೆ. ಆದರೆ ಇದರ ಮೌಲ್ಯವನ್ನು ಭಾರತೀಯ ಸೇನೆಯು ತನ್ನ ಪ್ರಾಣವನ್ನು ಕೊಟ್ಟು ತೀರಿಸಬೇಕಾಗುತ್ತದೆ. ಪ್ರತಿವರ್ಷ ನಮ್ಮ ಸೈನ್ಯದ ೩ ಸಾವಿರಕ್ಕಿಂತಲೂ ಹೆಚ್ಚು ಸೈನಿಕರು ಮತ್ತು ಅಧಿಕಾರಿಗಳು ದೇಶಕ್ಕಾಗಿ ಹುತಾತ್ಮರಾಗುತ್ತಾರೆ ಮತ್ತು ಅನೇಕ ಜನರು ಗಾಯಗೊಳ್ಳುತ್ತಾರೆ.
೪. ಚೀನಾ ಪೋಷಿತ ನಕ್ಸಲವಾದದ ವಿರುದ್ಧ ಮಿಲಿಟರಿ ಕ್ರಮ ಜರುಗಿಸುವ ಆವಶ್ಯಕತೆ !
ನಕ್ಸಲವಾದ ಅಥವಾ ಮಾವೋವಾದವು ದೇಶದ ಮಧ್ಯಭಾಗದಲ್ಲಿದೆ. ಅದು ಬಿಹಾರ, ಝಾರಖಂಡ, ಆಂಧ್ರ ಪ್ರದೇಶ, ಛತ್ತೀಸಗಡ ಮತ್ತು ಮಧ್ಯಪ್ರದೇಶ ಈ ರಾಜ್ಯಗಳಲ್ಲಿ ಅತ್ಯಧಿಕವಾಗಿದೆ. ಅದರ ನಿಜವಾದ ಹೆಸರು ‘ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾವೋಯಿಸ್ಟ್). ಅದರ ಮಾಧ್ಯಮದಿಂದ ಚೀನಾದ ಕೆಲವು ಸೈನಿಕರು ಭಾರತದಲ್ಲಿ ಕೃತ್ಯಗಳನ್ನು ಮಾಡುತ್ತಿರುತ್ತಾರೆ. ಅವರಿಗೆ ಚೀನಾ ಸಹಾಯ ಮಾಡುತ್ತಿದೆ ಎಂಬ ವಿಷಯದಲ್ಲಿ ಸಂಶಯವೇ ಬೇಡ.
೫. ಬಂಗಾಲವು ಬಾಂಗ್ಲಾದೇಶಿ ನುಸುಳುಕೋರರ ಕೋಟೆಯಾಗಿದೆ
ಬಾಂಗ್ಲಾದೇಶದಲ್ಲಿ ನುಸುಳುಕೋರರ ಸಮಸ್ಯೆ ಬಹಳ ದೊಡ್ಡದಾಗಿದೆ. ಭಾರತದ ಉತ್ತರ-ಪೂರ್ವ ಭಾಗದಿಂದ ದೇಶದಲ್ಲಿ ನುಸುಳುವಿಕೆಯಾಗುತ್ತದೆ. ಬಂಗಾಲ ರಾಜ್ಯವು ಬಾಂಗ್ಲಾದೇಶದ ನುಸುಳುಕೋರರ ರಾಜ್ಯವೇ ಆಗಿದೆ.
೬. ಕಲಮ್ ೩೭೦ ನ್ನು ರದ್ದುಗೊಳಿಸಿದ್ದರಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ನಿಯಂತ್ರಣದಲ್ಲಿದೆ
೫ ಆಗಸ್ಟ್ ೨೦೧೯ ರಂದು ಕಾಶ್ಮೀರದ ಕಲಮ್ ೩೭೦ ಅನ್ನು ರದ್ದುಗೊಳಿಸಿದಾಗ ಅನೇಕ ಉದಾರಮತವಾದಿಗಳು, ಈಗ ಚೀನಾ ಮತ್ತು ಪಾಕಿಸ್ತಾನಗಳು ಸಿಟ್ಟಿಗೇಳುವುವು ಮತ್ತು ಭಯೋತ್ಪಾದನೆ ಇನ್ನಷ್ಟು ಹೆಚ್ಚಾಗುವುದು ಎಂಬ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದರು. ವಾಸ್ತವಿಕತೆ ಜಗತ್ತಿನೆದುರಿಗಿದೆ. ಲಡಾಖ್‌ನಲ್ಲಿ ಶಾಂತಿಯಿದೆ. ಕಾಶ್ಮೀರದಲ್ಲಿ ಇಂದಿಗೂ ಕೆಲವು ಭಯೋತ್ಪಾದಕರು ಇದ್ದಾರೆ; ಆದರೆ ಅಲ್ಲಿ ಸೈನಿಕರ ಮೇಲಾಗುತ್ತಿದ್ದ ಕಲ್ಲೆಸೆತ ಸಂಪೂರ್ಣ ನಿಂತಿದೆ. ಅಲ್ಲಿ ಶಾಂತಿ ಇದ್ದು ಕಾಶ್ಮೀರಿ ಜನರು ಸಾಮಾನ್ಯ ಜೀವನವನ್ನು ಜೀವಿಸುತ್ತಿದ್ದಾರೆ. ಈ ಹಿಂದೆ ಕಾಶ್ಮೀರದಲ್ಲಿ ೪ ರಿಂದ ೫ ಸಾವಿರ ಭಯೋತ್ಪಾದಕರು ಇರುತ್ತಿದ್ದರು; ಆದರೆ ಈಗ ಈ ಸಂಖ್ಯೆ ೨೦೦ ಕ್ಕಿಂತ ಕಡಿಮೆಯಾಗಿದೆ. ಹಾಗೆಯೇ ಪ್ರತಿ ಎರಡು ದಿನಗಳಿಗೊಮ್ಮೆ ಭಯೋತ್ಪಾದಕರ ಹತ್ಯೆಯಾಗಿರುವ ವಾರ್ತೆಗಳು ಬರುತ್ತಿರುತ್ತದೆ. ಇದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ.
– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ.