ಸಾಧಕರಿಗೆ ಸೂಚನೆ

ಪ್ರವಾಹ, ಭೂಕಂಪ, ೩ನೇ ಮಹಾಯುದ್ಧ, ಕೊರೋನಾ ಮಹಾಮಾರಿಯಂತಹ ವಿಪತ್ತು ಇವುಗಳಂತಹ ಆಪತ್ಕಾಲಗಳು ಭವಿಷ್ಯದಲ್ಲಿ ಬರಲಿರುವುದರಿಂದ ಹಾಗೂ ಇಂತಹ ಕಾಲದಲ್ಲಿ ಬದುಕುಳಿಯಲು ಏನು ಮಾಡಬೇಕು ಎಂಬುದನ್ನು ಸವಿಸ್ತಾರವಾಗಿ ತಿಳಿಸುವ ಲೇಖನಗಳನ್ನು ಜೂನ್‌ದಿಂದ ಸಪ್ಟೆಂಬರ್ ಅವಧಿಯ ‘ಸಾಪ್ತ್ತಾಹಿಕ ಸನಾತನ ಪ್ರಭಾತದಲ್ಲಿ ನೀಡಲಾಗಿದೆ.

ಬಿಹಾರದ ಅನೇಕ ಸ್ಥಳಗಳಲ್ಲಿ ‘ಬಾಬರಿಯನ್ನು ಮರೆಯಬೇಡಿ’ ಎಂದು ಪಿ.ಎಫ್.ಐ. ಭಿತ್ತಿಪತ್ರಗಳನ್ನು ಹಾಕಿದೆ !

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಬಿಹಾರದ ಕಟಹರಿ, ಪೂರ್ಣಿಯಾ ಮತ್ತು ದರಭಾಂಗಾದ ಕೆಲವು ಕಡೆಗಳಲ್ಲಿ ಬಾಬ್ರಿ ನೆಲಸಮಗೊಳಿಸಿದ ದಿನನಿಮಿತ್ತ ಅಕ್ಷೇಪಾರ್ಹ ಭಿತ್ತಿಪತ್ರಗಳನ್ನು ಹಾಕಿತ್ತು. ಅದರಲ್ಲಿ ‘ಡಿಸೆಂಬರ್ ೬ ಅನ್ನು ಮರೆಯಬೇಡಿ.’ ಇದರಲ್ಲಿ ಬಾಬ್ರಿಯ ಮೂರು ಗುಮ್ಮಟಗಳನ್ನು ತೋರಿಸಲಾಗಿತ್ತು. ಇದರ ನಂತರ ಬಿಹಾರ ಪೊಲೀಸರು ರಾಜ್ಯದಲ್ಲಿ ಎಚ್ಚರಿಕೆ ನೀಡಿದ್ದರು.

‘ಕಲ್ಪವೃಕ್ಷ’ ಸಂಸ್ಥೆಯು ಎಂ.ಎಫ್. ಹುಸೇನ್ ಚಿತ್ರಗಳ ಮಾರಾಟ ನಿಲ್ಲಿಸಿದೆ !

ಸ್ಥಳೀಯ ‘ಕಲ್ಪವೃಕ್ಷ’ ಸಂಸ್ಥೆಯು ತನ್ನ ಜಾಲತಾಣದಲ್ಲಿ ಹಿಂದೂದ್ವೇಷಿ ಚಿತ್ರಕಾರ ಎಂ.ಎಫ್. ಹುಸೇನ್ ಚಿತ್ರಗಳನ್ನು ಮಾರಾಟಕ್ಕೆ ಇಟ್ಟಿತ್ತು. ಧರ್ಮಪ್ರೇಮಿಗಳು ಇದರ ವಿರುದ್ಧ ಪ್ರತಿಭಟಿಸಿದ ನಂತರ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಪ್ರಬೋಧನೆ ಮಾಡುವ ಪತ್ರವನ್ನು ಕಳುಹಿಸಿದ ನಂತರವೂ ಈ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ

ಮೊಘಲರು, ಬ್ರಿಟೀಶರು, ಸೋನಿಯಾ ಕಾಂಗ್ರೆಸ್ ಇವರು ತಮ್ಮ ಸಾಮರ್ಥ್ಯದಿಂದ ಅಲ್ಲ, ಬದಲಾಗಿ ಹಿಂದೂಗಳು ಸಂಘಟಿತರಾಗದೇ ಇದ್ದರಿಂದ ಯಶಸ್ವಿಯಾದರು ! – ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ

ಅಲೆಕ್ಸಾಂಡರ್, ಮೊಘಲರು, ಬ್ರಿಟೀಶರು, ಸೋನಿಯಾ ಕಾಂಗ್ರೆಸ್ ಇವರು ತಮ್ಮ ಸಾಮರ್ಥ್ಯದಿಂದ ಅಲ್ಲ, ಬದಲಾಗಿ ನಮ್ಮಲ್ಲಿ ಒಗ್ಗಟ್ಟು ಇಲ್ಲದ್ದರಿಂದ ಯಶಸ್ವಿಯಾದರು. ಆಕ್ರಮಣಕಾರಿ ಶಕ್ತಿಯಿಂದ ನಮ್ಮ ಧರ್ಮದ ರಕ್ಷಣೆ ಮಾಡಲು ನಾವು ಒಟ್ಟಾಗುವ ಸಮಯ ಬಂದಿದೆ, ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಬೆಂಗಳೂರು ಗಲಭೆ ಪ್ರಕರಣದಲ್ಲಿ ಪರಾರಿಯಾಗಿದ್ದ ಕಾಂಗ್ರೆಸ್‌ನ ಮತಾಂಧ ನಾಯಕನ ಬಂಧನ

ಈ ವರ್ಷ ಆಗಸ್ಟ್ ೧೧ ರಂದು ಮತಾಂಧರು ನಡೆಸಿದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಕಾಂಗ್ರೆಸ್ ಮುಖಂಡ ರಕೀಬ್ ಜಾಕಿರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಕಾಂಗ್ರೆಸ್‌ನ ಎರಡನೇ ಮಾಜಿ ಕಾರ್ಪೊರೇಟರ್.

ಪ್ರತಿದಿನ ಬಾಲಸಾಧಕರ ವ್ಯಷ್ಟಿ ಸಾಧನೆಯ ‘ಆನ್‌ಲೈನ್ ವರದಿಯನ್ನು ತೆಗೆದುಕೊಳ್ಳುವ ಆಯೋಜನೆ ಮಾಡಿ !

ಬಾಲ ಮತ್ತು ಯುವ ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವ ಸಾಧಕರೇ, ಹಿಂದೂ ರಾಷ್ಟ್ರದ ಭಾವೀ ಪೀಳಿಗೆಯಾಗಿರುವ ಬಾಲ ಸಾಧಕರ ಮತ್ತು ಯುವಾ ಸಾಧಕರ ನಿಯಮಿತ ವರದಿಯನ್ನು ತೆಗೆದುಕೊಂಡು ಅವರ ಸಾಧನೆಗೆ ಯೋಗ್ಯ ದಿಶೆಯನ್ನು ನೀಡಿ. ಸಂತರು ಹೇಳಿದಂತೆ ಭವಿಷ್ಯದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ

ಭಾಗ್ಯನಗರ ಮಹಾನಗರ ಪಾಲಿಕೆ ತ್ರಿಶಂಕು ಸ್ಥಿತಿ !

ಭಾಗ್ಯನಗರ ಮಹಾನಗರ ಪಾಲಿಕೆ ಚುನಾವಣೆಯ ನಂತರ ತ್ರಿಶಂಕು ಸ್ಥಿತಿ ಉಂಟಾಗಿದೆ. ತೆಲಂಗಾಣ ರಾಷ್ಟ್ರ ಸಮಿತಿಯು ಅತಿ ಹೆಚ್ಚು ೫೫ ಸ್ಥಾನಗಳನ್ನು ಗಳಿಸಿದೆ, ನಂತರದ ಸ್ಥಾನದಲ್ಲಿ ಬಿಜೆಪಿ ೪೮ ಸ್ಥಾನಗಳನ್ನು ಮತ್ತು ಮೂರನೇ ಸ್ಥಾನದಲ್ಲಿರುವ ಎಂ.ಐ.ಎಂ. ೪೪ ಸ್ಥಾನಗಳನ್ನು ಪಡೆದಿವೆ.

ಹಿಂದೂ ರಾಷ್ಟ್ರದ ನಂತರವೇ ಇಂತಹ ಘಟನೆಗಳನ್ನು ತಡೆಯಬಹುದು !

ದೀಪಾವಳಿಯಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಂಡಿದ್ದ ‘ಲುಡೋ’ ಚಲನಚಿತ್ರ ಹಿಂದೂ ದೇವತೆಗಳನ್ನು ಬಹುರೂಪಿ  ವೇಶದಲ್ಲಿ ಚಿತ್ರಿಸುವ ಮೂಲಕ ಅವಮಾನಿಸಲಾಗಿದೆ. ಬ್ರಹ್ಮ, ವಿಷ್ಣು, ಶಂಕರ, ಮಹಾಕಾಳಿ ಮುಂತಾದ ದೇವತೆಗಳನ್ನು ಅವಮಾನಿಸಲಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಧರ್ಮವು ತ್ಯಾಗವನ್ನು ಕಲಿಸಿದರೆ, ರಾಜಕಾರಣವು ಸ್ವಾರ್ಥವನ್ನು ಕಲಿಸುತ್ತದೆ; ಆದ್ದರಿಂದ ಮೀಸಲಾತಿ ಇತ್ಯಾದಿಗಳು ಹೆಚ್ಚುತ್ತಿವೆ. ಇದಕ್ಕೆ ಏಕೈಕ ಪರಿಹಾರವೆಂದರೆ ಎಲ್ಲರಿಗೂ ಸರ್ವಸ್ವದ ತ್ಯಾಗ ಮಾಡಲು ಕಲಿಸುವ ಸಾಧನೆಯನ್ನು ಕಲಿಸುವುದು !

‘ಕಲ್ಪವೃಕ್ಷ’ ಸಂಸ್ಥೆಯ ಜಾಲತಾಣದಲ್ಲಿ ಹಿಂದೂದ್ವೇಷಿ ಚಿತ್ರಕಾರ ಎಂ.ಎಫ್.ಹುಸೇನ್ ಚಿತ್ರಗಳ ಮಾರಾಟ

ಸ್ಥಳೀಯ ‘ಕಲ್ಪವೃಕ್ಷ’ ಸಂಸ್ಥೆಯ ಜಾಲತಾಣದದಲ್ಲಿ ಚಿತ್ರಗಳ ಮಾರಾಟವಾಗುತ್ತಿದ್ದು, ಇದರಲ್ಲಿ ಹಿಂದೂ ದ್ವೇಷಿ ಚಿತ್ರಕಾರ ಎಂ.ಎಫ್.ಹುಸೇನ್ ಚಿತ್ರಗಳೂ ಇವೆ. ಆದ್ದರಿಂದ ಹಿಂದೂ ಧರ್ಮಾಭಿಮಾನಿಗಳು ಇದನ್ನು ವಿರೋಧಿಸುತ್ತಾ ಹುಸೇನ್ ಚಿತ್ರಗಳ ಮಾರಾಟವನ್ನು ನಿಲ್ಲಿಸಲು ಆಗ್ರಹಿಸುತ್ತಿದ್ದಾರೆ.