ನಟ ಸೈಫ್ ಅಲಿ ಖಾನ್‌ನ ವಿರುದ್ಧ ದೆಹಲಿಯಲ್ಲಿ ದೂರು ದಾಖಲು

‘ಆದಿಪುರುಷ’ ಚಲನಚಿತ್ರದ ರಾವಣನ ಪಾತ್ರದ ಬಗ್ಗೆ ನೀಡಿದ ಆಕ್ಷೆಪಾರ್ಹ ಹೇಳಿಕೆ

ನವ ದೆಹಲಿ – ನಟ ಸೈಫ್ ಅಲಿ ಖಾನ್ ‘ಆದಿಪುರುಷ’ ಚಲನಚಿತ್ರದ ರಾವಣನ ಪಾತ್ರದ ಬಗ್ಗೆ ನೀಡಿದ ಅಕ್ಷೆಪಾರ್ಹ ಹೇಳಿಕೆಯ ವಿರುದ್ಧ ಇಲ್ಲಿ ದೂರು ದಾಖಲಿಸಲಾಗಿದೆ. ವಿಶ್ವ ಹಿಂದೂ ಮಹಾಸಂಘದ ದೆಹಲಿ ಪ್ರದೇಶಾಧ್ಯಕ್ಷರಾದ ರಾಜೇಶ ತೋಮರ ಇವರು ನೀಡಿದ ದೂರಿನ ಮೇರೆಗೆ ಅಪರಾದ ದಾಖಲಾಗಿದೆ. ಈ ಬಗ್ಗೆ ಸೈಫ್ ಅಲಿ ಖಾನ್ ಕ್ಷಮೆಯಾಚಿಸಿದ್ದಾರೆ.

(ಸೌಜನ್ಯ : Zee Hindustan)

ರಾಜೇಶ ತೋಮರ ಇವರು ತಮ್ಮ ದೂರಿನಲ್ಲಿ, ಸೈಫ್ ಅಲಿ ಖಾನ್ ಉದ್ದೇಶಪೂರ್ವಕವಾಗಿ ಕೋಟಿಗಟ್ಟಲೆ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಲು ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆಯಿಂದ ಸಮಾಜದಲ್ಲಿ ಶಾಂತಿಯು ಭಂಗವಾಗುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಹೇಳಿದ್ದಾರೆ.