ಹಿಂದುತ್ವವು ಅವಸಾನವಾಗುತ್ತಿರುವಾಗ ನಿದ್ದೆಯಲ್ಲಿರುವ ಕೇರಳದ ಹಿಂದೂಗಳು !

೧೯೨೧ ನೇ ಇಸವಿಯಲ್ಲಾದ ಮೋಪಲಾ ಗಲಭೆಯ ಬಗ್ಗೆ ಪ್ರತಿಯೊಬ್ಬರೂ ಮಾತನಾಡುತ್ತಾರೆ. ಈ ಗಲಭೆಯಲ್ಲಿ ಜಿಹಾದಿಗಳು ಸಾವಿರಾರು ಹಿಂದೂಗಳ ಹತ್ಯೆ ಮಾಡಿದ್ದರು, ನೂರಾರು ಹಿಂದೂ ಮಹಿಳೆಯರ ಬಲಾತ್ಕಾರ ಮಾಡಿದ್ದರು, ನೂರಾರು ಹಿಂದೂ ಮಹಿಳೆಯರನ್ನು ಮತಾಂತರಿಸಿದ್ದರು, ಆದರೆ ಅದೆಲ್ಲ ಭೂತಕಾಲದ ವಿಷಯವಾಗಿದೆ ಎಂದು ಹಿಂದೂಗಳು ಹೇಳುತ್ತಾರೆ.

ಮಂಗಳೂರಿನ ಯೂತ್ ಆಫ್ ಜಿ.ಎಸ್.ಬಿ.ಯುಟ್ಯೂಬ್ ಚಾನೆಲ್‌ನಲ್ಲಿ ಧರ್ಮೋ ರಕ್ಷತಿ ರಕ್ಷಿತಃ ಎಂಬ ಕೊಂಕಣಿ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಹಭಾಗ

ಇಂದಿನ ಸಮಾಜದಲ್ಲಿ ಹಿಂದೂಗಳು ಧರ್ಮಶಿಕ್ಷಣದ ಅಭಾವದಿಂದ ಧರ್ಮಾಚರಣೆಯಿಂದ ದೂರ ಹೋಗಿರುವುದು ಗಮನಕ್ಕೆ ಬರುತ್ತದೆ, ಜಾತ್ಯತೀತ ಆಡಳಿತ ಪದ್ಧತಿಯಿಂದ ನಮ್ಮ ವಿದ್ಯಾಭ್ಯಾಸ ಪದ್ಧತಿಯಿಂದ ಧರ್ಮವನ್ನು ತೆಗೆದುಹಾಕಲಾಗಿದೆ. ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ಕೊಡುವ ವ್ಯವಸ್ಥೆ ಇಲ್ಲದಿರುವುದರಿಂದ ಇಡೀ ಹಿಂದೂ ಸಮಾಜ ಇದರ ದುಷ್ಪರಿಣಾಮಗಳನ್ನು ಎದುರಿಸುತ್ತಿದೆ, ಎಂದು ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈಯವರು ಪ್ರತಿಪಾದಿಸಿದ್ದಾರೆ.

ಗೌರಿಗದ್ದೆಯ ಅವಧೂತ ವಿನಯಗುರುಜಿಯವರ ರಾಮನಾಥಿ (ಗೋವಾ)ಯ ಸನಾತನದ ಆಶ್ರಮಕ್ಕೆ ಭೇಟಿ !

ಗೌರಿಗದ್ದೆಯ ಅವಧೂತ ವಿನಯಗುರುಜಿಯವರು ಇತ್ತೀಚೆಗೆ ಇಲ್ಲಿನ ಸನಾತನ ಆಶ್ರಮಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಅವರು ಸನಾತನ ಸಂಸ್ಥೆ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಈ ಸಂಸ್ಥೆಗಳ ಕಾರ್ಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡರು. ಸನಾತನದ ಸಂತರಾದ ಪೂ. ಪದ್ಮಾಕರ ಹೊನಪ ಇವರು ಅವಧೂತ ವಿನಯಗುರುಜಿಯವರಿಗೆ ಪುಷ್ಪಹಾರ, ಶಾಲು, ಶ್ರೀಫಲ ಮತ್ತು ಉಡುಗೊರೆಯನ್ನು ನೀಡಿ ಸನ್ಮಾನ ಮಾಡಿದರು.

ಕಳಂಕಿತ ಜನಪ್ರತಿನಿಧಿಗಳು !

ಭಾರತೀಯ ರಾಜಕಾರಣವು ಎಷ್ಟು ಕೆಳಮಟ್ಟಕ್ಕೆ ಕುಸಿದಿದೆ ಎಂಬುದನ್ನು ಅಳೆಯಲು ಯಾವುದೇ ಮಾನದಂಡವಿಲ್ಲ. ನೈತಿಕತೆ, ಹಣಕಾಸಿನ ದುರುಪಯೋಗ, ವಿರೋಧಿಗಳನ್ನು ಟೀಕಿಸುವುದು, ತಮ್ಮ ಪ್ರಭುತ್ವವನ್ನು ಉಳಿಸಿಕೊಳ್ಳಲು ಮಾಡುವ ಪಿತೂರಿಗಳು ಇವುಗಳ ಬಗ್ಗೆ ಯಾವುದೇ ಲಿಖಿತ ದಾಖಲೆಗಳಿಲ್ಲ, ಇಂತಹ ಘಟನೆಗಳು ಸಾರ್ವಜನಿಕರಿಗೆ ತಿಳಿದಿರುತ್ತದೆ.

‘ಲವ್ ಜಿಹಾದ್ ಒಂದು ಧರ್ಮಸಂಕಟ

‘ಮತಾಂತರಕ್ಕಾಗಿ ಮದುವೆ (ಲವ್ ಜಿಹಾದ್) ಕುರಿತಾದ ಚರ್ಚೆ ಈಗ ಪುನಃ ಆರಂಭವಾಗಿದೆ. ‘ಮತಾಂತರ ಉದ್ದೇಶದ ಮದುವೆಗಳನ್ನು ನಿರ್ಬಂಧಿಸಲು ಕಾನೂನು ರೂಪಿಸುವುದಾಗಿ, ಕರ್ನಾಟಕ ಸೇರಿದಂತೆ ಭಾಜಪ ಆಡಳಿತದ ಕೆಲವು ರಾಜ್ಯಗಳು ಹೇಳಿಕೊಂಡಿವೆ. ‘ಲವ್ ಜಿಹಾದ್ ಪದ ಉಗ್ರ ಬಹುಸಂಖ್ಯಾತವಾದದ ಸೃಷ್ಟಿಯಾಗಿದ್ದು, ಹಿಂದೂ ಧಾರ್ಮಿಕ ಅತಿರೇಕಗಳಿಂದ ಪ್ರೇರಿತವಾಗಿದೆ ಎಂಬ ವಾದ ಕೂಡ ಅಷ್ಟೇ ಬಲವಾಗಿ ಕೇಳಿಬರುತ್ತಿದೆ.

ಅಪರಾಧಿ ಹಿನ್ನೆಲೆಯಿರುವ ರಾಜಕಾರಣಿಗಳು ಮತ್ತು ಅಸಹಾಯಕ ಕಾನೂನು !

ಮಹಾರಾಷ್ಟ್ರದಲ್ಲಿ ಮುಂಬಯಿಯ ಒಂದು ಪ್ರತಿಷ್ಠಿತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಔಷಧಗಳ ವ್ಯವಹಾರದಲ್ಲಿ ಹಗರಣವಾಯಿತು. ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ಮತ್ತು ಸರಕಾರ, ನ್ಯಾಯಾಧೀಶ ಲೆಂಟಿನ್ ಆಯೋಗವನ್ನು ನೇಮಕ ಮಾಡಿತು. ಈ ಆಯೋಗದ ಮುಂದೆ ಖಟ್ಲೆಯ ಆಲಿಕೆ ನಡೆಯುತ್ತಿರುವಾಗಲೇ ಅಂದಿನ ಆರೋಗ್ಯಮಂತ್ರಿಗಳು ಹೃದಯಾಘಾತದಿಂದ ನಿಧನರಾದರು. ಅಪರಾಧ ಮತ್ತು ಭ್ರಷ್ಟಾಚಾರದಂತಹ ಉದಾಹರಣೆಗಳು ಆ ಸಮಯದಲ್ಲಿ ಬೆರಳೆಣಿಕೆಯಷ್ಟೇ ಇದ್ದವು.

‘ವಿದೇಶಿ ದೇಣಿಗೆ (ನಿಯಂತ್ರಣ) ಮಸೂದೆ ಹಾಗೂ ಸ್ವಯಂಸೇವಿ ಸಂಸ್ಥೆಗಳು !

ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ‘ವಿದೇಶಿ ದೇಣಿಗೆ (ನಿಯಂತ್ರಣ) ಮಸೂದೆ ೨೦೨೦ ಈ ಮಸೂದೆಯನ್ನು ಸಮ್ಮತಿಸಲಾಯಿತು. ಸಾಮಾಜಿಕ ಕಾರ್ಯದ ಹೆಸರಿನಲ್ಲಿ ವಿದೇಶಗಳಿಂದ ಭಾರತಕ್ಕೆ ಸಾವಿರಾರು ಕೋಟಿ ರೂಪಾಯಿಗಳು ಬರುತ್ತಿದ್ದವು. ಈ ಹಣದ ಬಲದಿಂದ ದೇಶದಲ್ಲಿ ಉಗ್ರವಾದವನ್ನು ಹೆಚ್ಚಿಸಲು ಮತ್ತು ಹಿಂಸಾಚಾರವನ್ನು ನಡೆಸುವ ಪ್ರಯತ್ನಗಳು ನಡೆಯುತ್ತಿದ್ದವು ಮತ್ತು ಉತ್ತರ ಪೂರ್ವ ಹಾಗೂ ಆದಿವಾಸಿ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರದ ಕಾರ್ಯ ನಡೆಯುತ್ತಿತ್ತು.

ಮಾಧ್ಯಮಗಳ ಮೇಲೆ ಜನರ ವಿಶ್ವಾಸವೇ ಇಲ್ಲವಾಗಿದೆ !

ಕಳೆದ ೨೦ ವಷಗಳಲ್ಲಿ ದೇಶದಲ್ಲಿ ಏಳೂ ದಿನಗಳು ಮತ್ತು ೨೪ ಗಂಟೆಗಳು ನಡೆಯುವ ೩೭೫ ‘ನ್ಯೂಸ್ ಚ್ಯಾನೆಲ್ಸ್ ಪ್ರಾರಂಭ ವಾಗಿವೆ. ಇದು ಯಾವಾಗಲೂ ಹಸಿದಿರುವ ಒಂದು ಪ್ರಾಣಿಯಾಗಿದೆ. ಅದಕ್ಕೆ ತಿನ್ನಲು ಏನು ಕೊಡಬೇಕು ? ಎಂಬುದೇ ಒಂದು ಪ್ರಶ್ನೆಯಾಗಿದೆ. ಹಾಗೆ ನೋಡಿದರೆ, ಇವುಗಳ ಸಂಖ್ಯೆಯು ಹೆಚ್ಚಾಗಿದೆ; ಆದರೆ ದುರ್ದೈವದಿಂದ ಗುಣಮಟ್ಟವು ಮಾತ್ರ ಕಡಿಮೆಯಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಸಿಬಿಐ ವಶದಲ್ಲಿದ್ದ ೪೫ ಕೋಟಿ ರೂಪಾಯಿಗಳ ೧೦೩ ಕೆಜಿ ಚಿನ್ನ ಕಾಣೆ

ಇಲ್ಲಿಯ ಒಂದು ದಾಳಿಯಲ್ಲಿ ಸಿಬಿಐ ವಶಪಡಿಸಿಕೊಂಡ ೧೦೩ ಕೆಜಿ ಚಿನ್ನ ನಾಪತ್ತೆಯಾಗಿದೆ. ಸಿಬಿಐ ವಶದಲ್ಲಿದ್ದಾಗ ೪೫ ಕೋಟಿ ರೂಪಾಯಿಗಳ ಚಿನ್ನ ಕಣ್ಮರೆಯಾದ ಬಗ್ಗೆ ತನಿಖೆ ನಡೆಸುವಂತೆ ಮದ್ರಾಸ್ ಉಚ್ಚನ್ಯಾಯಾಲಯವು ತಮಿಳುನಾಡು ಸಿಬಿ-ಸಿಐಡಿಗೆ ಆದೇಶ ನೀಡಿದೆ.