ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ‘ವಿದೇಶಿ ದೇಣಿಗೆ (ನಿಯಂತ್ರಣ) ಮಸೂದೆ ೨೦೨೦ ಈ ಮಸೂದೆಯನ್ನು ಸಮ್ಮತಿಸಲಾಯಿತು. ಸಾಮಾಜಿಕ ಕಾರ್ಯದ ಹೆಸರಿನಲ್ಲಿ ವಿದೇಶಗಳಿಂದ ಭಾರತಕ್ಕೆ ಸಾವಿರಾರು ಕೋಟಿ ರೂಪಾಯಿಗಳು ಬರುತ್ತಿದ್ದವು. ಈ ಹಣದ ಬಲದಿಂದ ದೇಶದಲ್ಲಿ ಉಗ್ರವಾದವನ್ನು ಹೆಚ್ಚಿಸಲು ಮತ್ತು ಹಿಂಸಾಚಾರವನ್ನು ನಡೆಸುವ ಪ್ರಯತ್ನಗಳು ನಡೆಯುತ್ತಿದ್ದವು ಮತ್ತು ಉತ್ತರ ಪೂರ್ವ ಹಾಗೂ ಆದಿವಾಸಿ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರದ ಕಾರ್ಯ ನಡೆಯುತ್ತಿತ್ತು. ಕೆಲವು ಸ್ವಯಂಸೇವೀ ಸಂಸ್ಥೆಗಳು (ಎನ್‌ಜಿಓ) ಏನಾದರೊಂದು ಕಾರಣವನ್ನು ಮುಂದಿಟ್ಟು ದೇಶದ ಅಭಿವೃದ್ಧಿಯ ಕಾರ್ಯದಲ್ಲಿ ಅಡಚಣೆಗಳನ್ನು ತರುತ್ತಿದ್ದವು. ‘ವಿದೇಶಿ ದೇಣಿಗೆ (ನಿಯಂತ್ರಣ) ಮಸೂದೆ ೨೦೨೦ ಈ ಮಸೂದೆಯು (ಬಿಲ್) ಸಮ್ಮತ ವಾಗಿರುವುದರಿಂದ ಈ ಸಂಘಟನೆಗಳಿಗೆ ವಿದೇಶಗಳಿಂದ ದೊರೆಯುವ ಹಣದ ಮೇಲೆ ಈಗ ಸರಕಾರ ನಿಗಾ ಇಡುವುದು.
ಕೇಂದ್ರ ಸರಕಾರವು ಕಳೆದ ೩ ವರ್ಷಗಳಲ್ಲಿ ವಿದೇಶಗಳಿಂದ ಬರುವ ಹಣವನ್ನು ದುರುಪಯೋಗಿಸುವ ಇಂತಹ ಸುಮಾರು ೧೯ ಸಾವಿರ ಸ್ವಯಂಸೇವಿ ಸಂಸ್ಥೆಗಳ ಮನ್ನಣೆಯನ್ನು ರದ್ದು ಪಡಿಸಿದೆ. ವಿದೇಶಗಳಿಂದ ಬರುವ ಹಣವನ್ನು ದುರುಪ ಯೋಗಿಸುವ ಈ ಸಂಘಟನೆಗಳ ವಿಭಜನೆಯನ್ನು ಮುಂದಿನಂತೆ ಮಾಡಬಹುದು.
೧. ಜಿಹಾದಿ ಸ್ವಯಂಸೇವಿ ಸಂಘಟನೆಗಳು
ಈ ಸಂಘಟನೆಗಳು ದೇಶದಲ್ಲಿ ಉಗ್ರವಾದವನ್ನು ಹರಡುವುದು, ಭಾರತ-ಬಾಂಗ್ಲಾದೇಶ ಮತ್ತು ಭಾರತ-ನೇಪಾಳದ ಗಡಿಯಲ್ಲಿ ಮದರಸಾಗಳನ್ನು ನಿರ್ಮಾಣ ಮಾಡುವುದು, ಇಂತಹ ಸಂಘಟನೆಗಳು ಇಂತಹ ಮದರಸಾಗಳಲ್ಲಿ ಮಕ್ಕಳನ್ನು ಉಗ್ರವಾದಿಗಳನ್ನಾಗಿಸುವ ಕಾರ್ಯವನ್ನು ಮಾಡುತ್ತಿದ್ದವು. ಅದಕ್ಕಾಗಿ ಅವರಿಗೆ ಸೌದಿ ಅರೇಬಿಯಾ ಮತ್ತು ಇರಾನ್ ಇತ್ಯಾದಿ ಕೊಲ್ಲಿ ರಾಷ್ಟ್ರಗಳಿಂದ ಅಪಾರ ಪ್ರಮಾಣದಲ್ಲಿ ಹಣವು ಹರಿದು ಬರುತ್ತಿತ್ತು. ಇದರಿಂದ ಅನೇಕ ಭಾರತೀಯ ಯುವಕರು ಐಸಿಸ್ ಅಥವಾ ಜಾಗತಿಕ ಉಗ್ರವಾದದಲ್ಲಿ ತೊಡಗುತ್ತಿದ್ದರು. ಇರಾನ್ ಕಾಶ್ಮೀರದಲ್ಲಿ ‘ಅಲ್ ಹದಿದ ಹೆಸರಿನ ಸಂಘಟನೆಯನ್ನು ಸ್ಥಾಪಿಸಿ ಅಲ್ಲಿನ ಶಿಕ್ಷಣ ಪದ್ಧತಿಯನ್ನು ಸಂಪೂರ್ಣ ನಾಶಗೊಳಿಸಿತು ಹಾಗೂ ಅಲ್ಲಿಯ ಯುವಕರನ್ನು ಉಗ್ರವಾದಿಗಳನ್ನಾಗಿ ಮಾಡಲು ಆರಂಭಿಸಿತು. ಇರಾನ್‌ನಿಂದಾಗಿ ಅಲ್ಲಿ ಉಗ್ರವಾದ ಹೆಚ್ಚಾಯಿತು. ಸದ್ಯ ಇರಾನಿನ ಅರ್ಥವ್ಯವಸ್ಥೆ ಕುಸಿದಿದೆ. ಅದರೊಂದಿಗೆ ‘ಅಲ್ ಹದಿದ ಸಂಘಟನೆಯೂ ದುರ್ಬಲವಾಗಿದೆ. ಅನಂತರ ಸೌದಿ ಅರೇಬಿಯಾ, ಸಿರಿಯಾ ಮತ್ತು ಲಿಬಿಯಾ ಈ ದೇಶಗಳು ಭಾರತಕ್ಕೆ ಹಣ ಕಳುಹಿಸಲು ಆರಂಭಿಸಿದವು. ಅದರಿಂದ ನಮ್ಮಲ್ಲಿ ‘ರೆಡಿಕಲೈಸೇಶನ್ಗೆ (ಜನರಲ್ಲಿ ಉಗ್ರ ವಿಚಾರಗಳ ನ್ನು ಹಾಕುವುದು) ಪ್ರೋತ್ಸಾಹವನ್ನು ನೀಡಲಾಯಿತು. ಈಗ ಲಿಬಿಯಾ ಮತ್ತು ಸಿರಿಯಾ ದೇಶಗಳ ಸ್ಥಿತಿ ಅತ್ಯಂತ ಹೀನಾಯವಾಗಿದ್ದು ಸೌದಿ ಅರೇಬಿಯಾ ಸಹ ಆರ್ಥಿಕ ಅಡಚಣೆಯಲ್ಲಿದೆ. ಆದ್ದರಿಂದ ತುರ್ಕಸ್ತಾನ ಮತ್ತು ಮಲೇಶಿಯಾದಿಂದ ಹಣ ಬರುವ ಸಾಧ್ಯತೆಯಿದೆ. ಹೊಸ ಕಾನೂನಿನಿಂದಾಗಿ ವಿದೇಶಗಳಿಂದ ಬರುವ ಹಣ ಯಾವ ಕಾರಣಕ್ಕಾಗಿ ಬರುತ್ತಿದೆ ? ಎಂಬುದನ್ನು ಸ್ಪಷ್ಟಪಡಿಸ ಬೇಕಾಗುವುದು.
೨. ಮತಾಂತರಕ್ಕಾಗಿ ಹಣವನ್ನು ದುರುಪಯೋಗ ಪಡಿಸಿಕೊಳ್ಳುವ ಸಂಘಟನೆಗಳು
ಎರಡನೇಯ ರೀತಿಯ ಸಂಘಟನೆಗಳು ಈ ಹಣವನ್ನು ಮತಾಂತರಕ್ಕಾಗಿ ಉಪಯೋಗಿಸುತ್ತಿದ್ದವು, ಉದಾ. ಈಶಾನ್ಯ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರವನ್ನು ಮಾಡಲಾಯಿತು. ಈ ಹಣದ ಮೇಲೆ ನಿಯಂತ್ರಣ ಬಂದಿರುವುದರಿಂದ ಮತಾಂತರಕ್ಕಾಗಿ ಬರುವ ಹಣ ಕಡಿಮೆಯಾಗುವುದು ಮತ್ತು ಅದರಿಂದ ಮತಾಂತರ ಕಡಿಮೆಯಾಗುವುದು.
೩. ಮಾವೋವಾದಿ ಮತ್ತು ಜಿಹಾದಿಗಳಿಗೆ ಸಹಾಯ
ಮೂರನೇ ರೀತಿಯ ಸಂಘಟನೆಗಳು ಮಾವೋವಾದಿ ಹಾಗೂ ಜಿಹಾದಿಗಳಿಗೆ ಸಹಾಯ ಮಾಡುತ್ತಿದ್ದವು.
೪. ನೇರವಾಗಿ ಉಗ್ರರಿಗೆ ಸಹಾಯ ಮಾಡುವುದು
ನಾಲ್ಕನೇ ರೀತಿಯ ಸಂಘಟನೆಗಳು ಮುಂದಿನ ಕೆಲಸವನ್ನು ಮಾಡುವ ಸಂಘಟನೆಗಳಾಗಿದ್ದವು. ಅವುಗಳು ವಿದೇಶದಿಂದ ಬರುವ ಹಣವನ್ನು ನೇರವಾಗಿ ಉಗ್ರವಾದಿ ಕಾರ್ಯಾಚರಣೆಗಾಗಿ ಉಪಯೋಗಿಸುತ್ತಿದ್ದವು. ವಿಶ್ವಸಂಸ್ಥೆಯ ಒಂದು ವರದಿಗನುಸಾರ ದಕ್ಷಿಣ ಭಾರತದ ಕೇರಳ, ತೆಲಂಗಾಣ, ತಮಿಳುನಾಡು ಮತ್ತು ಬಂಗಾಲ ಈ ರಾಜ್ಯಗಳಲ್ಲಿ ‘ರೆಡಿಕಲೈಸೇಶನ್ ನಡೆಯುತ್ತಿದೆ. ಅದಕ್ಕೆ ಸಂಬಂಧಿಸಿದ ಅನೇಕ ಯುವಕರು ಕಾಣೆಯಾಗಿದ್ದು ಅವರು ಕುಕೃತ್ಯಗಳನ್ನು ಮಾಡಲು ಹೊರಗೆ ಹೋಗಿದ್ದಾರೆ ಎಂದು ಅನಿಸುತ್ತದೆ. ಸದ್ಯ ನಗರಗಳಲ್ಲಿನ ನಕ್ಸಲವಾದಿಗಳ ವಿರುದ್ಧ ಖಟ್ಲೆಗಳು ನಡೆದಿವೆ. ನಗರಗಳಲ್ಲಿ ನಕ್ಸಲರ ವಿರುದ್ಧ ೧ ಸಾವಿರ ಪುಟಗಳ ಆರೋಪಪತ್ರವನ್ನು ದಾಖಲಿಸಲಾಗಿದೆ. ಇಂತಹ ಹಿನ್ನೆಲೆಯಲ್ಲಿ ‘ವಿದೇಶಿ ದೇಣಿಗೆ (ನಿಯಂತ್ರಣ) ಮಸೂದೆ ಬಹಳ ಒಳ್ಳೆಯದಾಗಿದೆ. ಇದರಿಂದ ನಮ್ಮ ದೇಶಕ್ಕೆ ಲಾಭವಾಗುವುದು.
೫. ಅಟಲ ಸುರಂಗ ಮಾರ್ಗದಿಂದ ಭಾರತದ ಯುದ್ಧ ಸಾಮರ್ಥ್ಯ ಹೆಚ್ಚಾಗಿದೆ !
ಹಿಮಾಚಲ ಪ್ರದೇಶದಲ್ಲಿ ಮನಾಲಿ-ಲೇಹ ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಅಟಲ ಟನೇಲ್ (ಸುರಂಗ) ನಿರ್ಮಿಸಲಾಗಿದೆ. ಈ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಉದ್ಘಾಟನೆ ಮಾಡಿದ್ದಾರೆ. ಸದ್ಯ ಲಡಾಖ್‌ನಲ್ಲಿ ಮೊದಲಿಗಿಂತ ಮೂರು ಪಟ್ಟು ಸಂಖ್ಯೆಯಲ್ಲಿ ಸೈನ್ಯವನ್ನು ನೇಮಕ ಮಾಡಲಾಗಿದೆ. ಈ ರಸ್ತೆಯಿಂದಾಗಿ ಭಾರತೀಯ ಸೈನ್ಯಕ್ಕೆ ಸಾಧನ-ಸಾಮಗ್ರಿಗಳನ್ನು ತಲುಪಿಸಲು ಸುಲಭವಾಗಿದೆ. ರಸ್ತೆಯಿಂದ ೧ ಟನ್ ಸಾಹಿತ್ಯವನ್ನು ಸಾಗಿಸಲು ೧ ಲಕ್ಷ ರೂಪಾಯಿಗಳು ಖರ್ಚಾಗುತ್ತಿದ್ದರೆ, ಅದೇ ಸಾಹಿತ್ಯವನ್ನು ಹೆಲಕಾಪ್ಟರ್‌ನಿಂದ ಸಾಗಿಸಲು ೧೫ ಲಕ್ಷ ರೂಪಾಯಿಗಳು ಖರ್ಚಾಗುತ್ತವೆ, ಆದರೆ ಈಗ ಈ ಮಾರ್ಗದಿಂದಾಗಿ ಆ ಖರ್ಚು ಉಳಿಯಲಿದೆ. ಈ ಸುರಂಗದ ಉದ್ದ ಸುಮಾರು ೯ ಕಿಲೋಮೀಟರ್‌ನಷ್ಟಿದ್ದು ಇದರ ನಿರ್ಮಾಣ ಮಾಡಿದ್ದರಿಂದ ಮನಾಲಿ-ಲೇಹ ಈ ಮಾರ್ಗವನ್ನು ಚಳಿಗಾಲದಲ್ಲಿಯೂ ಉಪಯೋಗಿಸಬಹುದು. ಈ ಮೂಲಕ ಸುರಂಗ ಮಾರ್ಗದಿಂದಾಗಿ ಭಾರತದ ಹೋರಾಡುವ ಕ್ಷಮತೆ ಹೆಚ್ಚಾಗಿದೆ ಎನ್ನಬಹುದು.
– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ