ಗೌರಿಗದ್ದೆಯ ಅವಧೂತ ವಿನಯಗುರುಜಿಯವರ ರಾಮನಾಥಿ (ಗೋವಾ)ಯ ಸನಾತನದ ಆಶ್ರಮಕ್ಕೆ ಭೇಟಿ !

ರಾಮನಾಥಿ (ಗೋವಾ) – ಗೌರಿಗದ್ದೆಯ ಅವಧೂತ ವಿನಯಗುರುಜಿಯವರು ಇತ್ತೀಚೆಗೆ ಇಲ್ಲಿನ ಸನಾತನ ಆಶ್ರಮಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಅವರು ಸನಾತನ ಸಂಸ್ಥೆ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಈ ಸಂಸ್ಥೆಗಳ ಕಾರ್ಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡರು. ಸನಾತನದ ಸಂತರಾದ ಪೂ. ಪದ್ಮಾಕರ ಹೊನಪ ಇವರು ಅವಧೂತ ವಿನಯಗುರುಜಿಯವರಿಗೆ ಪುಷ್ಪಹಾರ, ಶಾಲು, ಶ್ರೀಫಲ ಮತ್ತು ಉಡುಗೊರೆಯನ್ನು ನೀಡಿ ಸನ್ಮಾನ ಮಾಡಿದರು. ಈ ಸಮಯದಲ್ಲಿ ಅವಧೂತ ವಿನಯಗುರುಜಿಯವರ ಭಕ್ತರಾದ ಸರ್ವಶ್ರೀ ಶಿವಕುಮಾರ, ಗುರುದರ್ಶನ, ಮೌಲಾಜಿ ಇವರೂ ಉಪಸ್ಥಿತರಿದ್ದರು. ತೀವ್ರ ಶಾರೀರಿಕ ತೊಂದರೆ ಇದ್ದರೂ ಪರಾತ್ಪರ ಗುರು ಡಾ. ಆಠವಲೆಯವರು ಅವಧೂತ ವಿನಯಗುರುಜಿಯವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು.

ಅವಧೂತ ವಿನಯಗುರುಜಿಯವರ ಪರಿಚಯ

ಗೌರಿಗದ್ದೆಯಲ್ಲಿ ಅವಧೂತ ವಿನಯಗುರುಜಿಯವರ ‘ದತ್ತಾಶ್ರಮವಿದ್ದು ಅಲ್ಲಿ ಪ್ರತಿದಿನ ನೂರಾರು ಭಕ್ತರು ತಮ್ಮ ವ್ಯಾವಹಾರಿಕ ಮತ್ತು ಇತರ ಸಮಸ್ಯೆಗಳಿಗೆ ಪರಿಹಾರ ಕೇಳಲು ಬರುತ್ತಿರುತ್ತಾರೆ. ತಮ್ಮ ಬಳಿ ಬಂದವರ ಸಮಸ್ಯೆಗಳ ಬಗ್ಗೆ ಅವರನ್ನು ನೋಡಿಯೇ ಸ್ವಾಮೀಜಿಯವರು ಅಂತರ್ಜ್ಞಾನದಿಂದ ಅರಿತುಕೊಂಡು ಆ ಬಗ್ಗೆ ಉತ್ತರಗಳನ್ನು ಮತ್ತು ಉಪಾಯಗಳನ್ನು ಹೇಳುತ್ತಾರೆ. ಎರಡು ವರ್ಷಗಳ ಹಿಂದೆ ಸನಾತನ ಸಂಸ್ಥೆಯ ಸಾಧಕರಾದ ಶ್ರೀ. ರಾಮ ಹೊನಪ ಇವರು ಅವಧೂತ ವಿನಯಗುರುಜಿಯವರ ಬಳಿ ಹೋಗಿದ್ದರು. ಆಗ ಶ್ರೀ. ರಾಮ ಹೊನಪ ಇವರು ಅವರಿಗೆ ರಾಷ್ಟ್ರ ಮತ್ತು ಧರ್ಮ ಇವುಗಳ ಕುರಿತು ಪ್ರಶ್ನೆಗಳನ್ನು ವಿವರಿಸುವ ಮೊದಲೇ ಅವಧೂತ ವಿನಯಗುರುಜಿಯವರು ಅಂತರ್ಜ್ಞಾನದಿಂದ ಆ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದ್ದರು.

ಸನಾತನದ ಆಶ್ರಮವೆಂದರೆ ವಿದ್ಯಾವಾಚಸ್ಪತಿ (ಪಿ.ಎಚ್‌ಡಿ.)ಯನ್ನು ನಿರ್ಮಿಸುವ ವಿಶ್ಯವಿದ್ಯಾಲಯ !

ಅವಧೂತ ವಿನಯಗುರುಜಿಯವರು ಸನಾತನ ಆಶ್ರಮದ ಬಗ್ಗೆ ತೆಗೆದ ಗೌರವೋದ್ಗಾರ ಸನಾತನದ ಆಶ್ರಮವು ಎಲ್ಲ ಸಾಧಕರ ‘ವಿಶ್ವಮನೆಯಾಗಿದೆ, ಇದು (ಸನಾತನ ಆಶ್ರಮದಲ್ಲಿ) ಅಧ್ಯಾತ್ಮದಲ್ಲಿ ಸತ್-ಚಿತ್-ಆನಂದ ಸ್ವರೂಪದ ವಿಶ್ಯವಿದ್ಯಾಲಯವಾಗಿದೆ. ನನ್ನ ಆಶ್ರಮವು ಆಧಿಭೌತಿಕ ಶಾಲೆ ಮತ್ತು ಸನಾತನದ ಆಶ್ರಮವು ಆಧ್ಯಾತ್ಮಿಕ ಶಾಲೆ ಅಂದರೆ ವಿದ್ಯಾವಾಚಸ್ಪತಿ (ಪಿ.ಎಚ್.ಡಿ.)ಯನ್ನು ನಿರ್ಮಿಸುವ ವಿಶ್ವವಿದ್ಯಾಲಯವಾಗಿದೆ. ಇದು ಅಧ್ಯಾತ್ಮದಲ್ಲಿ ಸಂಶೋಧನೆಗಳ ಪ್ರಯೋಗಾಲಯವಾಗಿದೆ. ಸಾಧನೆಯಿಂದಾಗಿ ಇಲ್ಲಿ ವಾಸಿಸಲು ಬರುವ ವ್ಯಕ್ತಿಯ ಸ್ವಾರ್ಥಮಯ ಇಚ್ಛೆಯು ದೂರವಾಗಿ ಅವನು ಅನಾಸಕ್ತನಾಗುತ್ತಾನೆ. ಇಲ್ಲಿನ ಸಾಧಕರು ತಮ್ಮ ತನು, ಮನ ಮತ್ತು ಧನ ಇವೆಲ್ಲವುಗಳ ತ್ಯಾಗ ಮಾಡಿ ಜೀವನ್ಮುಕ್ತರಾಗುತ್ತಿದ್ದಾರೆ. (Seekers are giving everything and moving nothing)