ಹಿಂದುತ್ವವು ಅವಸಾನವಾಗುತ್ತಿರುವಾಗ ನಿದ್ದೆಯಲ್ಲಿರುವ ಕೇರಳದ ಹಿಂದೂಗಳು !

ಶ್ರೀ. ಪ್ರದೀಶ ವಿಶ್ವನಾಥ

ನಮ್ಮೆಲ್ಲರಿಗೂ ಕಾಶ್ಮೀರಿ ಪಂಡಿತರ ವಿಷಯದಲ್ಲಿ ಏನಾಯಿತು ಎನ್ನುವುದು ಗೊತ್ತಿದೆ. ಅವರ ವಿಷಯದಲ್ಲಿ ಘಟಿಸಿದ ವಿಷಯ ನೂರಾರು ವರ್ಷಗಳ ಹಿಂದಿನ ಘಟನೆ ಏನಲ್ಲ, ಅದು ತೀರಾ ಇತ್ತೀಚಿನ ಘಟನೆಯಾಗಿದೆ. ಆದರೆ ಅದರಿಂದ ಹಿಂದೂಗಳು ಏನೂ ಕಲಿಯಲಿಲ್ಲ. ಹಿಂದೂಗಳು ಇರುವುದೇ ಹೀಗೆ, ಅವರಿಗೆ ಇತಿಹಾಸದಿಂದ ಏನನ್ನು ಕಲಿಯುವ ಇಚ್ಛೆಯೇ ಇಲ್ಲ. ಅವರಿಗೆ ಸಂಕಟ ತಮ್ಮ ಬಾಗಿಲಿಗೆ ಬರುವ ತನಕ ವಿಶ್ವಾಸವಿರುವುದಿಲ್ಲ. ಇದರ ಉತ್ತಮ ಉದಾಹರಣೆ ಎಂದರೆ ಕೇರಳದ ಹಿಂದೂಗಳು ! ಜಿಹಾದಿಗಳಿಂದ ಅವರಿಗೆ ಅತೀವ ತೊಂದರೆಯಾಗಿದೆ. ೧೯೨೧ ನೇ ಇಸವಿಯಲ್ಲಾದ ಮೋಪಲಾ ಗಲಭೆಯ ಬಗ್ಗೆ ಪ್ರತಿಯೊಬ್ಬರೂ ಮಾತನಾಡುತ್ತಾರೆ. ಈ ಗಲಭೆಯಲ್ಲಿ ಜಿಹಾದಿಗಳು ಸಾವಿರಾರು ಹಿಂದೂಗಳ ಹತ್ಯೆ ಮಾಡಿದ್ದರು, ನೂರಾರು ಹಿಂದೂ ಮಹಿಳೆಯರ ಬಲಾತ್ಕಾರ ಮಾಡಿದ್ದರು, ನೂರಾರು ಹಿಂದೂ ಮಹಿಳೆಯರನ್ನು ಮತಾಂತರಿಸಿದ್ದರು, ಆದರೆ ಅದೆಲ್ಲ ಭೂತಕಾಲದ ವಿಷಯವಾಗಿದೆ ಎಂದು ಹಿಂದೂಗಳು ಹೇಳುತ್ತಾರೆ. ಇದರ ಹಿಂದಿನ ಮುಖ್ಯ ಕಾರಣವೆಂದರೆ ಸಾಮ್ಯವಾದ ! ಎಡಪಂಥೀಯ ವಿಚಾರಸರಣಿಯ ಇತಿಹಾಸಕಾರರು ಈ ಘಟನೆಯನ್ನು ಮುಚ್ಚಿಟ್ಟು ಅಥವಾ ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿ, ಪಠ್ಯಕ್ರಮವನ್ನು ಸಿದ್ಧಪಡಿಸಿದರು. ಇದರ ಪರಿಣಾಮದಿಂದ ಅಲ್ಪಸಂಖ್ಯಾತರು ಮದರಸಾಗಳಲ್ಲಿ ಚಿಕ್ಕಂದಿನಿಂದಲೇ ಹಿಂದಿನ ಇತಿಹಾಸವನ್ನು ಕಲಿತು ಅದರ ಮುಂದಿನ ನಿಯೋಜನೆ ಏನಾಗಿರಬೇಕು ಎಂಬುದನ್ನು ನಿರ್ಧರಿಸುತ್ತಾರೆ. ತದ್ವಿರುದ್ಧ ನಾವು ಹಿಂದೂಗಳು ನಮ್ಮ ಮಕ್ಕಳಿಗೆ ‘ಸರ್ವಧರ್ಮಸಮಭಾವ ಮತ್ತು ಹೊಳೆಯುವುದೆಲ್ಲವೂ ಬಂಗಾರ ಎಂದು ಕಲಿಸುತ್ತಿದ್ದೇವೆ.

ಕೇರಳವನ್ನು ‘ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡುವ ಅಲ್ಪಸಂಖ್ಯಾತರ ನೀತಿ

ಇಲ್ಲಿನ ಮುಸಲ್ಮಾನ ಸಮಾಜವು ಒಂದು ವಿಶಿಷ್ಟ ಉದ್ದೇಶದಿಂದ ಅಭಿಯಾನವನ್ನು ನಡೆಸುತ್ತಿದೆ. ‘ಮುಂಬರುವ ೨ ದಶಕಗಳಲ್ಲಿ ಕೇರಳವನ್ನು ‘ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡುವ ಧ್ಯೇಯವನ್ನು ಮುಂದಿಟ್ಟುಕೊಂಡು ಅವರು ಕಾರ್ಯವನ್ನು ಮಾಡುತ್ತಿದ್ದಾರೆ, ಎಂದು ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಇವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅವರು ತಮ್ಮ ಜನಸಂಖ್ಯೆಯನ್ನು ಎಷ್ಟೋ ಪಟ್ಟುಗಳಲ್ಲಿ ಹೆಚ್ಚಿಸುತ್ತಿದ್ದಾರೆ. ನಾವು ಒಂದು ವೇಳೆ ೭ ವರ್ಷಗಳ ಕೆಳಗಿನ ಮಕ್ಕಳ ಸಂಖ್ಯೆಯನ್ನು ನೋಡಿದರೆ, ಮುಸಲ್ಮಾನರ ಸಂಖ್ಯೆ ಅತ್ಯಧಿಕವಾಗಿದೆ. ಕೇರಳದಲ್ಲಿ ಮುಸಲ್ಮಾನರ ಜನನದ ಪ್ರಮಾಣ ವರ್ಷಕ್ಕೆ ಶೇ. ೪೩ ರಷ್ಟು ಮತ್ತು ಹಿಂದೂಗಳ ಜನನದ ಪ್ರಮಾಣ ಶೇ. ೪೧ ರಷ್ಟಿದೆ. ಹಾಗೆಯೇ ಹಿಂದೂಗಳ ಮರಣದ ಪ್ರಮಾಣ ಶೇ. ೬೦ ರಷ್ಟಿದ್ದರೆ, ಮುಸಲ್ಮಾನರ ಮರಣದ ಪ್ರಮಾಣ ಸುಮಾರು ಶೇ. ೨೦ ರಷ್ಟಿದೆ. ಇದರಿಂದ ಗಮನಕ್ಕೆ ಬರುವುದೇನೆಂದರೆ, ಹಿಂದೂಗಳಲ್ಲಿ ಹಿರಿಯ ನಾಗರಿಕರ ಪ್ರಮಾಣ ಅಧಿಕವಾಗಿದೆ ಮತ್ತು ಇದರಿಂದಲೇ ಹಿಂದೂಗಳ ಮರಣದ ಪ್ರಮಾಣ ಅಧಿಕವಾಗಿದೆ. ಎರಡೂ ಸಮಾಜಗಳ ಜನನ ಪ್ರಮಾಣ ಮತ್ತು ಮರಣ ಪ್ರಮಾಣಗಳನ್ನು ಗಮನಿಸಿದ್ದಲ್ಲಿ ಮುಂಬರುವ ೧೦ ವರ್ಷಗಳಲ್ಲಿ ಕೇರಳ ಸಂಪೂರ್ಣ ‘ಇಸ್ಲಾಮಿಕ್ ರಾಜ್ಯವಾಗುವುದು ಎಂಬ ನಿಷ್ಕರ್ಷಕ್ಕೆ ಬರಬಹುದು.

ಜನಸಂಖ್ಯೆಯನ್ನು ಹೆಚ್ಚಿಸಲು ಇದೊಂದೇ ಆಯುಧವಾಗಿಲ್ಲ, ವ್ಯಾಪಾರಿ ಜಿಹಾದ ಮತ್ತೊಂದು ಆಯುಧವಾಗಿದೆ. ನಾವು ಒಂದು ವೇಳೆ ಹಿಂದೂ ಬಹುಸಂಖ್ಯಾತರಿರುವ ತಿರುವನಂತಪುರಂ ನಗರದ ಎಮ್.ಜಿ. ರಸ್ತೆಗೆ ಹೋದರೆ, ಅಲ್ಲಿ ಮುಸಲ್ಮಾನ ಮಾಲೀಕರಲ್ಲದ ಅಂಗಡಿಗಳು ಒಂದೆರಡು ಸಿಗಬಹುದು. ಪಿಜ್ಜಾ ಕಾರ್ನರ್, ಉಪಹಾರಗೃಹಗಳು, ಬೇಕರಿ, ಚಪ್ಪಲಿ ಅಂಗಡಿ, ಬಟ್ಟೆ ಅಂಗಡಿ, ತಂಪು ಪಾನೀಯ ಗೃಹಗಳು, ಸಂಚಾರವಾಣಿ ಮಾರಾಟ ಮಾಡುವ ಅಂಗಡಿಗಳು ಇವುಗಳಿಗೆ ಮುಸಲ್ಮಾನರೇ ಮಾಲೀಕರಾಗಿದ್ದಾರೆ. ಹಾಗೆಯೇ ಅಲ್ಲಿ ಕೆಲಸ ಮಾಡುವ ಕೆಲಸಗಾರರೆಲ್ಲರೂ ಉತ್ತರ ಕೇರಳದ ಮಲ್ಲಪ್ಪುರಮ್, ಕಾಸರಗೋಡು ಈ ನಗರದವರಾಗಿದ್ದಾರೆ. ಈ ಕೆಲಸಗಾರರನ್ನು ಖಾಸಗಿ ಸೈನಿಕರೆಂದೂ ಉಪಯೋಗಿಸಲಾಗುತ್ತದೆ. ಇದರೊಂದಿಗೆ ಅವರಿಗೆ ಸಮೀಪದ ಯಾವುದಾದರೂ ಮಸೀದಿಯ ಧ್ವನಿವರ್ಧಕಗಳಿಂದ ವಿಶಿಷ್ಟ ರೀತಿಯ ಸಂಕೇತ ಸಿಕ್ಕರೆ, ಅವರು ಸ್ವಲ್ಪ ಸಮಯದಲ್ಲಿಯೇ ರಸ್ತೆಯ ಮೇಲೆ ಒಟ್ಟಾಗುತ್ತಾರೆ. ಬೆಂಗಳೂರಿನಲ್ಲಿ ನಡೆದ ಗಲಭೆಯು ಇದರ ಉತ್ತಮ ಉದಾಹರಣೆಯಾಗಿದೆ. ಬೆಂಗಳೂರಿನಲ್ಲಿ ಕೆಲವೊಂದು ನಿಮಿಷಗಳಲ್ಲಿಯೇ ಸಾವಿರಾರು ಮತಾಂಧರು ಒಟ್ಟಿಗೆ ಬಂದಿದ್ದರು.

ಸ್ವಾಭಿಮಾನವನ್ನು ಮರೆತು ಮುಸಲ್ಮಾನರಲ್ಲಿ ಬಾಯ್ಮುಚ್ಚಿ ನೌಕರಿ ಮಾಡುವ ಹಿಂದೂಗಳು !

ಮುಸಲ್ಮಾನರು ನಡೆಸುವ ವ್ಯಾಪಾರಿ ಮಳಿಗೆಗಳಲ್ಲಿ ಹಿಂದೂ ಸ್ವಾಭಿಮಾನದ ಹತ್ಯೆಯಾಗುತ್ತಿದೆ. ಬಹುತೇಕ ವ್ಯಾಪಾರಿ ಮಳಿಗೆಗಳನ್ನು ಮುಸಲ್ಮಾನರು ನಡೆಸುತ್ತಾರೆ ಮತ್ತು ಅಲ್ಲಿ ಹೆಚ್ಚಾಗಿ ಹಿಂದೂ ಮಹಿಳೆಯರು ನೌಕರಿ ಮಾಡುತ್ತಾರೆ. ‘ಲವ್ ಜಿಹಾದ್ನ ಮಾಧ್ಯಮದಿಂದ ಈ ಮಹಿಳೆಯರನ್ನು ಗುರಿ ಮಾಡಲಾಗುತ್ತದೆ. ಸಾಮ್ಯವಾದದ ಕಾರಣದಿಂದ ರಾಜ್ಯದಲ್ಲಿ ನೌಕರಿಯ ಅವಕಾಶ ದೊರಕುತ್ತಿಲ್ಲ. ಇದರಿಂದ ಕೇರಳದ ಜನರು ಅರಬ್ ದೇಶಗಳಲ್ಲಿ ಮುಸಲ್ಮಾನರ ಅಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು, ಅವರಲ್ಲಿ ಹಿಂದೂಗಳೂ ಇದ್ದಾರೆ. ಅಂದರೆ ಮುಸಲ್ಮಾನರು ಮಾಲೀಕರು ಮತ್ತು ಹಿಂದೂಗಳು ಅವರ ನೌಕರರು ಎಂದಾಯಿತು. ಇದರಿಂದ ರಾಜ್ಯದ ಅನೇಕ ಹಿಂದೂಗಳ ಮನೋವೃತ್ತಿ ಬದಲಾಗಿದೆ. ಅವರು ಸ್ವಾಭಿಮಾನವನ್ನು ಕಳೆದುಕೊಂಡಿದ್ದಾರೆ ಮತ್ತು ಈಗ ತಮ್ಮ ಹೊಟ್ಟೆಪಾಡಿಗಾಗಿ ಮುಸಲ್ಮಾನರನ್ನು ಅವಲಂಬಿಸಲು ಅವರಿಗೆ ಯಾವುದೇ ರೀತಿಯಲ್ಲಿ ನಾಚಿಕೆಯೆನಿಸುವುದಿಲ್ಲ. ಕೇರಳದಲ್ಲಿ ಮುಸಲ್ಮಾನರಿಗೆ ವ್ಯಾಪಾರಿ ಸಾಮ್ರಾಜ್ಯವನ್ನು ನಿರ್ಮಿಸಲು ಅವಕಾಶ ಮಾಡಿಕೊಡುವ ಕಾಂಗ್ರೆಸ್ ಪಕ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉದ್ಯೋಗ ಖಾತೆಯನ್ನು ಮುಸ್ಲಿಂ ಲೀಗ್‌ಗೆ ಕೊಡಲಾಯಿತು. ಇದರಿಂದ ಅವರ ಸಮಾಜಕ್ಕೆ ಅವರ ವ್ಯಾಪಾರಿ ಸಾಮ್ರಾಜ್ಯವನ್ನು ಸೃಷ್ಟಿಸಲು ಸಹಾಯವಾಯಿತು. ಅಂಕಿಅಂಶಗಳನ್ನು ಪರಿಶೀಲಿಸಿದರೆ, ರಾಜ್ಯದಲ್ಲಿ ಹಿಂದೂಗಳ ಮಾಲೀಕತ್ವದಲ್ಲಿ ಕೇವಲ ಶೇ. ೨೨ ರಷ್ಟು ಜಮೀನು ಇದೆ. ಹಾಗೆಯೇ ಶೇ. ೧೭ ರಷ್ಟು ಹಿಂದೂಗಳು ವ್ಯಾಪಾರದ ದೃಷ್ಟಿಯಿಂದ ಮಾಲೀಕತ್ವ ಹೊಂದಿದ್ದಾರೆ ಮತ್ತು ಅವರ ಬ್ಯಾಂಕಿನ ಹಣಕಾಸು ವ್ಯವಹಾರ ಕೇವಲ ಶೇ. ೧೫ ರಷ್ಟಿದೆ. ಇದರಿಂದ ರಾಜ್ಯದಲ್ಲಿ ನಿಜವಾದ ಅರ್ಥದಲ್ಲಿ ಯಾರು ಅಲ್ಪಸಂಖ್ಯಾತರಾಗಿದ್ದಾರೆ ಮತ್ತು ಯಾವ ಸಮಾಜಕ್ಕೆ ದುಃಖವನ್ನು ಅನುಭವಿಸಬೇಕಾಗುತ್ತಿದೆ ಎನ್ನುವುದು ಗಮನಕ್ಕೆ ಬರುತ್ತದೆ. ಹಿಂದೂಗಳ ಅಳಿದುಳಿದ ಸ್ವಾಭಿಮಾನವನ್ನು ನಾಶ ಮಾಡಲು ಸಾಮ್ಯವಾದಿಗಳಿಂದ ನಾಸ್ತಿಕತೆಯ ಪ್ರಚಾರ ಹೀಗಿದ್ದರೂ, ಇಂದಿಗೂ ಅಲ್ಲಿಯ ಹಿಂದೂಗಳಿಗೆ ಅಪಾಯದ ಅರಿವಾಗಿಲ್ಲ. ಅವರು ಇಂದಿಗೂ ‘ಜಮಾತ-ಎ-ಇಸ್ಲಾಮ್ ಮತ್ತು ಸಾಮ್ಯವಾದಿಗಳ ಪ್ರಚಾರಕ್ಕೆ ಬಲಿಯಾಗುತ್ತಿದ್ದಾರೆ. ಕುರುಡರಂತೆ ವರ್ತಿಸುವ ಹಿಂದೂಗಳನ್ನು ಅವರು ಹೊಗಳುವು ದರಿಂದ ಹಿಂದೂಗಳಿಗೆ ವಾಸ್ತವಿಕತೆಯ ಅರಿವಾಗುವುದಿಲ್ಲ. ಇನ್ನೊಂದೆಡೆ ಮುಸ್ಲಿಂ ಲೀಗ ಪಕ್ಷವು ೨೦ ಕ್ಕಿಂತ ಹೆಚ್ಚು ಶಾಸಕರ ಸ್ಥಾನವನ್ನುಗಳಿಸುತ್ತದೆ, ಅದರಲ್ಲಿ ಇಬ್ಬರು ಮಂತ್ರಿಗಳಾಗುತ್ತಾರೆ ಮತ್ತು ಇಬ್ಬರು ಸಚಿವರಾಗುತ್ತಾರೆ. ಈಗಿನ ಹೊಸಪ್ರಕಾರವೆಂದರೆ ಸಾಮ್ಯವಾದಿ ಪಕ್ಷ ಕ್ರಮೇಣ ಜಿಹಾದಿಗಳ ವಶಕ್ಕೆ ಹೋಗುತ್ತಿದೆ ಮತ್ತು ಅವರು ಹಿಂದೂಗಳ ಅಳಿದುಳಿದ ಸ್ವಾಭಿಮಾನವನ್ನು ನಾಶ ಮಾಡಲು ನಾಸ್ತಿಕತೆಯ ಪ್ರಚಾರ ಮಾಡುತ್ತಿದ್ದಾರೆ.

ಲವ್ ಜಿಹಾದ್‌ನ ಅಪಾಯವನ್ನು ಗುರುತಿಸಿ ಅದರ ವಿರುದ್ಧ ಪ್ರಚಾರ ಮಾಡುವ ಕ್ರೈಸ್ತ ಪಾದ್ರಿಗಳು

ಮುಖ್ಯ ಪ್ರವಾಹದಲ್ಲಿರುವ ಚರ್ಚ್‌ಗಳಿಂದಾಗುವ ಮತಾಂತರದ ಪ್ರಮಾಣ ಈಗ ಕಡಿಮೆಯಾಗಿದೆ; ಆದರೆ ಭೂತಕಾಲದಲ್ಲಿ ಅವರು ಬಹಳಷ್ಟು ಹಾನಿಯನ್ನು ಮಾಡಿದ್ದಾರೆ. ಭೂಸುಧಾರಣೆ ಕಾನೂನಿನ ಹಿಂದೆ ಅವರದ್ದೇ ಕೈವಾಡವಿತ್ತು. ಈ ಕಾನೂನಿನಲ್ಲಿ ಕಳ್ಳಮಾರ್ಗವನ್ನು ಶೋಧಿಸಿ ಅವರು ಸಾಮ್ಯವಾದಿ ಸರಕಾರ ದಿಂದ ಆಸ್ತಿಪಾಸ್ತಿ ಮತ್ತು ಸಂಪತ್ತನ್ನುಗಳಿಸಿದರು ಹಾಗೂ ಹಿಂದೂಗಳು ಆಸ್ತಿಪಾಸ್ತಿ ಮತ್ತು ತಮ್ಮ ಜಮೀನನ್ನು ಕಳೆದುಕೊಂಡರು. ಈಗ ಈ ಮಾರ್ಗವನ್ನು ಹೊಸ ಪೀಳಿಗೆಯ ಚರ್ಚಗಳು ಅವಲಂಬಿಸುತ್ತಿವೆ. ಈ ಹೊಸ ಪೀಳಿಗೆ, ಮುಖ್ಯ ಪ್ರವಾಹದಲ್ಲಿರುವ ಚರ್ಚಗಳಿಗೂ ಅಪಾಯಕಾರಿಯಾಗಿದೆ. ಈಗ ಕ್ರೈಸ್ತ ಸಮಾಜಕ್ಕೂ ಲವ್ ಜಿಹಾದ್‌ನ ಬಿಸಿ ತಟ್ಟಿದೆ. ಈ ಅಪಾಯವು ಗಮನಕ್ಕೆ ಬಂದ ಬಳಿಕ ಅನೇಕ ಕ್ರೈಸ್ತ ಪಾದ್ರಿಗಳು ಬಹಿರಂಗವಾಗಿ ಜಿಹಾದ್‌ನ ವಿರುದ್ಧ ಮಾತನಾಡುತ್ತಿದ್ದಾರೆ. ಅವರ ಸಮಾಜಕ್ಕೆ ಇದು ಒಳ್ಳೆಯ ಚಿಹ್ನೆಯಾಗಿದೆ; ಆದರೆ ಹಿಂದೂ ಸಮಾಜ ಮಾತ್ರ ಇಂದಿಗೂ ನಿದ್ದೆಯಲ್ಲಿದೆ ಮತ್ತು ಅದು ವಾಸ್ತವವನ್ನು ಅರಿತುಕೊಂಡು ಎಚ್ಚೆತ್ತುಕೊಳ್ಳುತ್ತಿಲ್ಲ. ಅವರು ಇಂದಿಗೂ ಸಾಮ್ಯವಾದಿ, ಕ್ರಿಶ್ಚಿಯನ್ ಧರ್ಮೋಪದೇಶಕರು ಮತ್ತು ಜಿಹಾದಿಗಳು ನಿರ್ಮಾಣ ಮಾಡಿರುವ ಸುಂದರ ಭೂಮಿಯಲ್ಲಿ ವಾಸಿಸುತ್ತಿದ್ದಾರೆ.

ಭಾರತ ದೇಶದ ಐಕ್ಯತೆಗೆ ಅಪಾಯಕಾರಿ ಆಗಿರುವ ಕೇರಳದ ಸ್ಥಿತಿ

ಮತ್ತೊಂದೆಡೆಯಿಂದ ಕೇರಳ ರಾಜ್ಯವು ಭಾರತದ ಅಸ್ಥಿರತೆಯ ಕಳ್ಳ ರಾಜಧಾನಿಯಾಗುತ್ತಿದೆ. ಎಲ್ಲ ಜಿಹಾದಿ ಮತ್ತು ಸಾಮ್ಯವಾದಿಗಳ ಕೃತ್ಯಗಳೆಲ್ಲ್ಲವೂ ಕೇರಳದಲ್ಲಿಯೇ ಆಯೋಜನೆ ಆಗುತ್ತದೆ. ಹಾಗೆಯೇ ಭಾರತದಲ್ಲಿರುವ ಕ್ರೈಸ್ತರಿಗೆ ಮತಾಂತರದ ವಿಷಯದಲ್ಲಿ ಕೇರಳದಿಂದಲೇ ಮಾರ್ಗದರ್ಶನ ದೊರಕುತ್ತದೆ. ಮತಾಂತರ ಚಳುವಳಿಗಾಗಿ ಸುಮಾರು ೬೫ ಸಾವಿರ ನನ್‌ಗಳು ಭಾರತದ ಅನೇಕ ರಾಜ್ಯಗಳಿಗೆ ಹೋಗಿದ್ದಾರೆ. ಐಸಿಸ್‌ಗೆ ಸೇರಿದವರಲ್ಲಿ ಬಹಳಷ್ಟು ಜನರು ಕೇರಳದವರೇ ಆಗಿದ್ದಾರೆ. ಪೌರತ್ವ ತಿದ್ದುಪಡಿ ಕಾನೂನಿನ ಸಮಯದಲ್ಲಿ ಅದನ್ನು ವಿರೋದಿಸುವ ನಿಯೋಜನೆ ಕೇರಳದಲ್ಲಿಯೇ ಆಗಿತ್ತು ಮತ್ತು ಕೇರಳದಿಂದ ಹೋದ ಜನರು ಅಲ್ಲಿ ಗಲಭೆಯನ್ನು ಮಾಡಿ ಅಸ್ಥಿರತೆಯನ್ನು ಸೃಷ್ಟಿಸಿದ್ದರು; ಆದುದರಿಂದ ಕೇಂದ್ರ ಸರಕಾರವು ಈ ವಿಷಯದಲ್ಲಿ ಗಮನಹರಿಸಿ ಅದನ್ನು ಆದಷ್ಟು ಬೇಗನೆ ಹದ್ದುಬಸ್ತಿನಲ್ಲಿಡುವುದರ ಅವಶ್ಯಕತೆಯಿದೆ.

ಕೇರಳದ ಹಿಂದೂ ಸಮಾಜವನ್ನು ಸುದೃಢಗೊಳಿಸಲು ಹಿಂದೂಗಳು ಜಾಗೃತರಾಗುವ ಆವಶ್ಯಕತೆ

ಒಂದು ವೇಳೆ ನಾವು ಕೇರಳ ರಾಜ್ಯವನ್ನು ಕಳೆದುಕೊಂಡರೆ, ಮತಾಂಧರಿಗೆ ಭಾರತದಲ್ಲಿದ್ದು, ತಮ್ಮ ಕೃತ್ಯಗಳನ್ನು ನಡೆಸಲು ಮತ್ತು ತದನಂತರ ಭಾರತದಲ್ಲಿ ಇನ್ನಷ್ಟು ಒಡಕುಗಳನ್ನು ಹುಟ್ಟಿಸಲು ಸುಲಭವಾಗುವುದು. ಅವರು ದೊರಕಿರುವ ಅವಕಾಶವನ್ನು ಬಂಡವಾಳ ಮಾಡಿಕೊಂಡು ಪ್ರತಿಯೊಂದು ಸಲ ಭಾರತದ ಏಕಾತ್ಮತೆಯನ್ನು ಭಂಗಗೊಳಿಸಲು ಪ್ರಯತ್ನಿಸುತ್ತಾರೆ. ನಾವು ಈಗ ಏನಾದರೂ ಮಾಡಲೇ ಬೇಕು ಅಂದರೆ ಒಂದು ನಿಮಿಷವನ್ನು ಸಹ ವ್ಯರ್ಥಗೊಳಿಸುವಂತಿಲ್ಲ. ಇವರೆಲ್ಲರ ಪರಸ್ಪರ ಸಂಬಂಧವನ್ನು ಕಡಿಮೆಗೊಳಿಸಲು ಎಲ್ಲ ಪರ್ಯಾಯಗಳನ್ನು ಆಯ್ಕೆ ಮಾಡಿಕೊಂಡು ಹಿಂದೂ ಸಮಾಜವನ್ನು ಸುದೃಢಗೊಳಿಸಬೇಕು. ನಮ್ಮ ಬಳಿ ದಾರಿಕಾಯಲು ಅಥವಾ ವ್ಯರ್ಥಗೊಳಿಸಲು ಹೆಚ್ಚು ಸಮಯವಿಲ್ಲ. ಇದು ಹೀಗೆಯೇ ಮುಂದುವರೆದರೆ, ಮುಂಬರುವ ೧೦ ವರ್ಷಗಳಲ್ಲಿ ಕೇರಳವೆಂದರೆ ಮತ್ತೊಂದು ಕಾಶ್ಮೀರವಾಗುವುದು. ಕಾಶ್ಮೀರಿ ಹಿಂದೂಗಳಂತೆಯೇ ಕೇರಳದಲ್ಲಿರುವ ಹಿಂದೂಗಳೂ ಪರಿಣಾಮವನ್ನು ಎದುರಿಸಬೇಕಾಗುವುದು. ಆದುದರಿಂದ ಏಳಿರಿ, ಎಚ್ಚೆತ್ತುಕೊಳ್ಳಿರಿ ಮತ್ತು ಸಾಧ್ಯವಾದಷ್ಟು ಬೇಗನೆ ಏನು ಸಾಧ್ಯವಿದೆಯೋ, ಅದನ್ನು ಮಾಡಲು ಪ್ರಾರಂಭಿಸಿರಿ.

– ಶ್ರೀ. ಪ್ರದೀಶ ವಿಶ್ವನಾಥ, ಹಿಂದುತ್ವನಿಷ್ಠ, ಕೇರಳ.