ಕೇರಳದಲ್ಲಿ ಹಲಾಲ ಮಾಂಸಕ್ಕೆ ಕ್ರೈಸ್ತರಿಂದ ವಿರೋಧ

ಕ್ರಿಸ್ಮಸ್ ಕಾಲದಲ್ಲಿ ಹಲಾಲ್ ಮಾಂಸವನ್ನು ಬಹಿಷ್ಕರಿಸಲು ಕೇರಳದ ಕ್ರೈಸ್ತರು ನಿರ್ಧರಿಸಿದ್ದಾರೆ. ‘ಯೇಸುವಿನ ಹುಟ್ಟಿದ ದಿನ ಹಲಾಲ್ ಮಾಂಸ ಏಕೆ ಸೇವಿಸಬೇಕು ?’ ಎಂದು ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ. ಕ್ರೈಸ್ತರ ಸಂಘಟನೆಯಾದ ‘ಚರ್ಚಸ್ ಆಕ್ಸಲರಿ ಆಫ್ ಸೋಶಲ ಆಕ್ಷನ್’ ಇದು ಕ್ರೈಸ್ತರಿಗೆ, ‘ಹಲಾಲ್ ಮಾಂಸವನ್ನು ಸೇವಿಸಬಾರದು” ಎಂದು ಕರೆ ನೀಡಿದೆ.

ಇತರ ಧರ್ಮದವರು ದೇವಸ್ಥಾನದಲ್ಲಿ ಪ್ರವೇಶಿಸಿದರೆ ಆಕಾಶ ಬೀಳುತ್ತದೆಯೇ ? – ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಶ್ನೆ

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥಾನ ಹಾಗೂ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಕಛೇರಿಗಳಲ್ಲಿ ಕಲಂ ೭ ರ ಅಡಿಯಲ್ಲಿ ಹಿಂದೂಯೇತರರಿಗೆ ಕೆಲಸ ನೀಡಲು ಅನುಮತಿಯನ್ನು ನೀಡಬಾರದು, ಎಂದು ಆಗ್ರಹಿಸುವ ೨ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ‘ಒಂದು ವೇಳೆ ಇತರ ಧರ್ಮದವರು ದೇವಸ್ಥಾನದೊಳಗೆ ಪ್ರವೇಶಿಸಿದರೆ, ಆಕಾಶ ಬೀಳುವುದೇ ?’, ಎಂದು ನ್ಯಾಯಾಲಯವು ಪ್ರಶ್ನಿಸಿದೆ.

ಶ್ರೀಲಂಕಾದಲ್ಲಿ ಕರೋನಾದಿಂದ ಮೃತಪಟ್ಟವರ ಅಗ್ನಿಸಂಸ್ಕಾರಕ್ಕೆ ಮುಸಲ್ಮಾನರಿಂದ ಮತ್ತೆ ವಿರೋಧ !

ಶ್ರೀಲಂಕಾದಲ್ಲಿ ಕರೋನಾದಿಂದ ಮೃತಪಟ್ಟ ಪ್ರತಿಯೊಬ್ಬ ವ್ಯಕ್ತಿಯ ಮೃತದೇಹಕ್ಕೆ ಅಗ್ನಿಸಂಸ್ಕಾರ ಮಾಡುವಂತೆ ಸರಕಾರವು ಆದೇಶಿಸಿದೆ. ಈ ಕಾರಣದಿಂದ ಹಿಂದೂಗಳ ಸಹಿತ ಬೌದ್ಧರು, ಕ್ರೈಸ್ತರು ಮತ್ತು ಮುಸ್ಲಿಮರ ಶವಗಳನ್ನು ಸಹ ಅಗ್ನಿಸಂಸ್ಕಾರ ಮಾಡಲಾಗುತ್ತಿದೆ.

ಅತ್ಯಾಚಾರಿಗಳನ್ನು ನಪುಂಸಕರನ್ನಾಗಿಸುವ ಕಾನೂನು ಅನ್ವಯಗೊಳಿಸಿದ ಪಾಕಿಸ್ತಾನ !

ಪಾಕಿಸ್ತಾನದಲ್ಲಿ ಅತ್ಯಾಚಾರಿಗಳನ್ನು ನಪುಂಸಕರನ್ನಾಗಿ ಮಾಡುವ ಕಾನೂನಿಗೆ ರಾಷ್ಟ್ರಪತಿಯವರು ಹಸ್ತಾಕ್ಷರ ಮಾಡಿದ್ದಾರೆ. ಹಾಗಾಗಿ ಈಗ ಅದನ್ನು ಕಾರ್ಯಾನ್ವಿತಗೊಳಿಸಲಾಗುವುದು. ಪದೇ ಪದೇ ಈ ರೀತಿಯ ಅಪರಾಧವನ್ನು ಮಾಡುವವರನ್ನು ನಪುಂಸಕರನ್ನಾಗಿಸಲಾಗುವುದು.

ತುಮಕೂರಿನ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮನವರು ಮಂಗಳೂರಿನ ಆಶ್ರಮಕ್ಕೆ ಆಗಮನ

ಕಾರ್ತಿಕ ಮಾಸದ ಕೊನೆಯ ಸೋಮವಾರ ಅಂದರೆ ದಿನಾಂಕ ೧೪ ಡಿಸೆಂಬರ್ ೨೦೨೦ ಈ ದಿನದಂದು ಸಂಜೆ ೪.೧೦ ಕ್ಕೆ ಸನಾತನದ ಮಂಗಳೂರು ಆಶ್ರಮಕ್ಕೆ ತುಮಕೂರಿನ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ನವರ ದಿವ್ಯ ಆಗಮನವಾಯಿತು.

ಗೋಹತ್ಯೆ ನಿಷೇಧ ಮಸೂದೆ ಕುರಿತು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಘರ್ಷಣೆ

ಗೋಹತ್ಯೆ ನಿಷೇಧದ ಬಗ್ಗೆ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರ ಮಧ್ಯೆ ಘರ್ಷಣೆ ನಡೆಯಿತು. ಕಾಂಗ್ರೆಸ್‌ನ ಸದಸ್ಯರು ನೇರವಾಗಿ ಸಭಾಪತಿಯ ಜಾಗಕ್ಕೆ ಧಾವಿಸಿ ಉಪಸಭಾಪತಿಯನ್ನು ಕುರ್ಚಿಯಿಂದ ಎತ್ತಿದರು.

‘ಸಿಬ್ಬಂದಿಗಳ ಮೇಲಿನ ದಾಳಿಯ ಭಯದಿಂದ ಫೇಸ್‌ಬುಕ್‌ನ ಸೌಮ್ಯ ನಿಲುವು !’(ಅಂತೆ) – ಅಮೇರಿಕಾದ ದೈನಿಕ ‘ವಾಲ್ ಸ್ಟ್ರೀಟ್ ಜರ್ನಲ್’ನ ಸುಳ್ಳಿನ ಕಂತೆ !

ಅಮೇರಿಕಾದ ‘ವಾಲ್ ಸ್ಟ್ರೀಟ್ ಜರ್ನಲ್’ ಈ ದಿನಪತ್ರಿಕೆಯಲ್ಲಿ ಮಾತ್ರ ‘ಭಾರತದ ಆಡಳಿತಾರೂಢ ಹಿಂದೂ ರಾಷ್ಟ್ರೀಯವಾದಿ ನಾಯಕರ ಮತ್ತು ಭಜರಂಗದಳದ ವಿರುದ್ಧದ ಕ್ರಮ ಕೈಗೊಂಡರೆ ಭಾರತದಲ್ಲಿನ ಫೇಸ್‌ಬುಕ್ ವ್ಯವಹಾರದ ಮೇಲೆ ವಿಪರೀತ ಪರಿಣಾಮ ಬೀರಬಹುದು ಅದೇರೀತಿ ಅವರ ಉದ್ಯೋಗಿಗಳ ಮೇಲೆ ದಾಳಿಯಾಗಬಹುದು. ಆದ್ದರಿಂದ ಫೇಸ್‌ಬುಕ್ ಭಜರಂಗದಳದ ಬಗ್ಗೆ ಮೃದುನಿಲುವನ್ನು ತೆಗೆದುಕೊಂಡಿದೆ ಎಂದು ಹೇಳಿದೆ.

‘ಭಗವಾನ್ ಶ್ರೀರಾಮ ಸಮಾಜವಾದಿ ಪಕ್ಷದವರಾಗಿದ್ದು, ನಾವೂ ಕೂಡಾ ರಾಮನ ಭಕ್ತರಾಗಿದ್ದೇವೆ !’(ಅಂತೆ) – ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ

ಭಗವಾನ ಶ್ರೀರಾಮ ಮತ್ತು ಶ್ರೀಕೃಷ್ಣನ ಮೇಲೆ ಯಾರಿಗೂ ಹಕ್ಕಿಲ್ಲ. ಭಗವಾನ್ ಶ್ರೀರಾಮ ಕೂಡ ಸಮಾಜವಾದಿ ಪಕ್ಷಕ್ಕೆ ಸೇರಿದವರು. ನಾವೂ ರಾಮ ಮತ್ತು ಕೃಷ್ಣ ಭಕ್ತರಾಗಿದ್ದೇವೆ. ಭಗವಾನ ರಾಮನಿಗೆ ಪೂಜೆ ಸಲ್ಲಿಸಲು ಶೀಘ್ರದಲ್ಲೇ ತಮ್ಮ ಕುಟುಂಬ ಸದಸ್ಯರೊಂದಿಗೆ ಅಯೋಧ್ಯೆಗೆ ಹೋಗುವುದಾಗಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ ಹೇಳಿದ್ದಾರೆ.

ಬಾಂಗ್ಲಾದೇಶದ ದೇವಸ್ಥಾನವೊಂದರ ಶ್ರೀ ಮಹಾಕಾಳಿ ಮಾತೆಯ ೩ ಮೂರ್ತಿ ಧ್ವಂಸ ಹಾಗೂ ಆಭರಣಗಳ ಲೂಟಿ !

ಸ್ಥಳೀಯ ಶುಜಾನಗರದ ಅಹಮದಪುರದಲ್ಲಿರುವ ಕಾಳಿ ದೇವಸ್ಥಾನದ ಶ್ರೀ ಮಹಾಕಾಳಿ ಮಾತೆಯ ೩ ಮೂರ್ತಿಗಳನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿರುವ ಘಟನೆ ಡಿಸೆಂಬರ ೧೧ ರಂದು ನಡೆದಿದೆ. ಇದರೊಂದಿಗೆ ಚಿನ್ನದ ಆಭರಣಗಳನ್ನೂ ಲೂಟಿ ಮಾಡಿದ್ದಾರೆ. ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರನ್ನು ನೋಂದಾಯಿಸಲಾಗಿದೆ.

ಕಾಂಚೀಪುರಂನ ಪ್ರಾಚೀನ ದೇವಾಲಯದ ಜೀರ್ಣೋದ್ಧಾರದ ಸಮಯದಲ್ಲಿ ದೊರೆತ ಅರ್ಧ ಕೆಜಿ ಚಿನ್ನ ಸರಕಾರದ ವಶಕ್ಕೆ !

ಕಾಂಚೀಪುರಂನ ಉತಿರಾಮೆರೂರಿನಲ್ಲಿರುವ ಪುರಾತನ ಶಿವ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿರುವಾಗ ಗ್ರಾಮಸ್ಥರಿಗೆ ದೇವಾಲಯದ ಗರ್ಭಗೃಹದ ಮೆಟ್ಟಿಲುಗಳ ಕೆಳಗೆ ೫೬೫ ಗ್ರಾಂ ಚಿನ್ನ ಸಿಕ್ಕಿದೆ. ಸರಕಾರಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ತಿಳಿದಾಗ ಅವರು ಸ್ಥಳಕ್ಕೆ ಧಾವಿಸಿ ಚಿನ್ನದ ಮೇಲೆ ಸರಕಾರದ ಹಕ್ಕಿದೆ ಎಂದು ಹೇಳಿದರು