ಅಪರಾಧಿ ಹಿನ್ನೆಲೆಯಿರುವ ರಾಜಕಾರಣಿಗಳು ಮತ್ತು ಅಸಹಾಯಕ ಕಾನೂನು !

ಸರ್ವೋಚ್ಚ ನ್ಯಾಯಾಲಯವು  ಇತ್ತೀಚೆಗೆ ದೇಶದ ಎಲ್ಲ ಉಚ್ಚ ನ್ಯಾಯಾಲಯಗಳಿಗೆ ‘ಅಪರಾಧಿ ಹಿನ್ನೆಲೆಯಿರುವ ರಾಜಕಾರಣಿಗಳ (ಸರ್ವೋಚ್ಚ ನ್ಯಾಯಾಲಯವು ಅವರಿಗೆ ‘ಟೆಂಟೆಡ್ ಪಾಲಿಟಿಶಿಯನ್ ಎಂದು ಹೇಳುತ್ತದೆ) ಎಲ್ಲ ಖಟ್ಲೆಗಳ ತೀರ್ಪನ್ನು ತ್ವರಿತಗತಿಯಲ್ಲಿ ನೀಡಬೇಕೆಂದು ಆದೇಶ ನೀಡಿದೆ. ಈ ಆದೇಶದ ಹಿನ್ನೆಲೆಯನ್ನು ತಿಳಿದುಕೊಳ್ಳೋಣ.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ಅಧಿಕಾರವನ್ನು ದುರುಪಯೋಗಿಸಿಕೊಂಡು ತಮ್ಮ ಭ್ರಷ್ಟಾಚಾರದ ಖಟ್ಲೆಗಳನ್ನು ನಡೆಸಲು ಬಿಡದ ಮಹಾರಾಷ್ಟ್ರದ ಮಾಜೀ ಮುಖ್ಯಮಂತ್ರಿ ಎ. ಆರ್. ಅಂತುಲೆ !

ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯನ್ನು ತಿಳಿದುಕೊಳ್ಳಲು ಅಪರಾಧ ಮತ್ತು ರಾಜಕಾರಣ, ಭ್ರಷ್ಟಾಚಾರ ಮತ್ತು ರಾಜಕಾರಣ ಇವುಗಳ ಸಮೀಕರಣವನ್ನು ನೋಡಬೇಕಾಗುವುದು. ೧೯೮೦ ರಲ್ಲಿ ಅಂತುಲೆಯವರು ಮುಖ್ಯಮಂತ್ರಿಗಳಾಗಿರುವಾಗ ಅವರ ಮೇಲೆ ಸಿಮೆಂಟ್ ಖರೀದಿಯ ಹಗರಣ ಮತ್ತು ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹೆಸರಿನಲ್ಲಿ ನ್ಯಾಸವನ್ನು ಸ್ಥಾಪಿಸಿ ಅದರಲ್ಲಿ ಹಣ ಸಂಗ್ರಹಿಸಿದ ಆರೋಪವನ್ನು ಮಾಡಲಾಗಿತ್ತು. ಇವೆರಡೂ ಪ್ರಕರಣಗಳು ತುಂಬಾ ಪ್ರಸಿದ್ಧಿಪಡೆದಿದ್ದವು. ಆದ್ದರಿಂದ ಅವರ ಆಡಳಿತವು ಅತ್ಯಂತ ವಿವಾದಾತ್ಮಕವಾಗಿತ್ತು. ಅಪರಿಮಿತ ಹಣ ಮತ್ತು ಅಧಿಕಾರ ಕೈಯಲ್ಲಿದ್ದ ಕಾರಣ ಅವರು ಬದುಕಿರುವವರೆಗೆ ಆ ಅಪರಾಧಗಳಿಗೆ ಅಂತಿಮ ಸ್ವರೂಪ ಬರಲು ಬಿಡಲಿಲ್ಲ. ಪ್ರಾರಂಭದಲ್ಲಿ ‘ಈ ಖಟ್ಲೆಯನ್ನು ವಿಶೇಷ ನ್ಯಾಯಾಲಯದಲ್ಲಿ ನಡೆಸಬೇಕೋ ಅಥವಾ ಉಚ್ಚನ್ಯಾಯಾಲಯದಲ್ಲಿ ನಡೆಸಬೇಕು, ಎನ್ನುವ ವಿವಾದವೇ ಸರ್ವೋಚ್ಚ ನ್ಯಾಯಾಲಯದವರೆಗೆ ಹೋಯಿತು. ಅನಂತರ ಖಟ್ಲೆಯನ್ನು ನಡೆಸಲು ಯಾರ ಅನುಮತಿಬೇಕು, ಎನ್ನುವ ವಿಷಯದಲ್ಲಿ ಚರ್ಚೆ ನಡೆಯಿತು. ಮೇಲೆ ಉಲ್ಲೇಖಿಸಿದಂತೆ ಅವರ ಮೇಲೆ ಅನೇಕ ಅಪರಾಧಗಳನ್ನು ದಾಖಲಿಸಲಾಗಿತ್ತು. ಆದ್ದರಿಂದ ವಿಧಾನಸಭೆಯ ಸಭಾಪತಿ ಮತ್ತು ಯಾವ ನ್ಯಾಸದ ಮಂಡಳದ ಅಧಿಕಾರಿಗಳು ಅದರಲ್ಲಿನ ಹಣವನ್ನು ನುಂಗಿದ್ದರೋ, ಅವರಲ್ಲಿ ಯಾರಾದರೊಬ್ಬರು ಅಥವಾ ಇಬ್ಬರೂ ಖಟ್ಲೆಗಳನ್ನು ನಡೆಸಲು ಅನುಮತಿಯನ್ನು ನೀಡಬೇಕಾಗುತ್ತದೆ. ಈ ವಿವಾದವು ೧೦ ರಿಂ ೨೦ ವರ್ಷಗಳವರೆಗೆ ನಡೆಯಿತು.

೨ ವಿಧಾನಮಂಡಳದಲ್ಲಿ ಭ್ರಷ್ಟಾಚಾರಕ್ಕೆ ಪ್ರತಿಷ್ಠೆ ಮತ್ತು ಅಪರಾಧಿಗಳಿಗೆ ಗೌರವದ ಸ್ಥಾನವನ್ನು ನೀಡುವ ಜಿಗುಪ್ಸೆಯನ್ನುಂಟು ಮಾಡುವ ರಾಜಕಾರಣ !

೨ ಅ. ಮಹಾರಾಷ್ಟ್ರದಲ್ಲಿ ಮುಂಬಯಿಯ ಒಂದು ಪ್ರತಿಷ್ಠಿತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಔಷಧಗಳ ವ್ಯವಹಾರದಲ್ಲಿ ಹಗರಣವಾಯಿತು. ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ಮತ್ತು ಸರಕಾರ, ನ್ಯಾಯಾಧೀಶ ಲೆಂಟಿನ್ ಆಯೋಗವನ್ನು ನೇಮಕ ಮಾಡಿತು. ಈ ಆಯೋಗದ ಮುಂದೆ ಖಟ್ಲೆಯ ಆಲಿಕೆ ನಡೆಯುತ್ತಿರುವಾಗಲೇ ಅಂದಿನ ಆರೋಗ್ಯಮಂತ್ರಿಗಳು ಹೃದಯಾಘಾತದಿಂದ ನಿಧನರಾದರು. ಅಪರಾಧ ಮತ್ತು ಭ್ರಷ್ಟಾಚಾರದಂತಹ ಉದಾಹರಣೆಗಳು ಆ ಸಮಯದಲ್ಲಿ ಬೆರಳೆಣಿಕೆಯಷ್ಟೇ ಇದ್ದವು.

೨ ಆ. ಅನಂತರ ಜಯಲಲಿತಾ, ಲಾಲೂಪ್ರಸಾದ ಯಾದವ, ಮಧು ಕೋಡಾ, ಸುಖರಾಮ ಮುಂತಾದವರು ಭ್ರಷ್ಟಾಚಾರಕ್ಕೆ ಪ್ರತಿಷ್ಠೆಯನ್ನು ತಂದುಕೊಟ್ಟರು. ಈ ಜನರು ಅಧಿಕಾರವನ್ನು ದುರುಪಯೋಗಿಸಿ ಭ್ರಷ್ಟಾಚಾರದ ರಾಜಕಾರಣವನ್ನು ಮಾಡಿದರು ಮತ್ತು ಸಾವಿರಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದರು.

೨ ಇ. ಫೂಲನದೇವೀಯ ವಿಷಯದಲ್ಲಿ, ಅವಳು ೨೧ ಜನ ಠಾಕೂರರನ್ನು ಒಂದು ಸಾಲಿನಲ್ಲಿ ನಿಲ್ಲಿಸಿ ಅವರ ಹತ್ಯೆಯನ್ನು ಮಾಡಿದಳು ಎಂದು ಹೇಳಲಾಗುತ್ತದೆ, ಅವಳಿಗೆ ಯಾವುದೇ ರಾಜಕೀಯ ಹಿನ್ನೆಲೆ ಇರಲಿಲ್ಲ ಅಥವಾ ಅವಳಿಂದ ಯಾವುದೇ ವಿಶೇಷ ಸಾಮಾಜಿಕ ಕಾರ್ಯವೂ ಆಗಿರಲಿಲ್ಲ. ಆದರೂ ಅವಳು ೨ ಬಾರಿ ಸಂಸದಳೆಂದು ಆರಿಸಿ ಬಂದಳು.

೨ ಈ. ಮಹಾರಾಷ್ಟ್ರದಲ್ಲಿ ಕಳ್ಳಸಾಗಾಣಿಕೆಯಲ್ಲಿ ಕುಪ್ರಸಿದ್ಧನಾಗಿದ್ದ ಅರುಣ ಗವಳೀ ಮುಂಬಯಿಯಿಂದ ೨ ಬಾರಿ ಶಾಸಕನೆಂದು ಆರಿಸಿ ಬಂದನು !

ಹಿಂದೂ ಸಾಮ್ರಾಟ ಬಾಳಾಸಾಹೇಬ ಠಾಕ್ರೆಯವರು ‘ಸಾಮನಾದ ಸಂಪಾದಕರಾಗಿರುವಾಗ ಒಂದು ಸಂಪಾದಕೀಯವನ್ನು ಬರೆದಿದ್ದರು. ಆ ಲೇಖನದಲ್ಲಿ ಅಪರಾಧಿಗಳಿಗೆ ಹೇಗೆ ಪ್ರತಿಷ್ಠೆ ಲಭಿಸಿತು ಮತ್ತು ಅವರು ಉಮೇದುವಾರರೆಂದು ಹೇಗೆ ಆರಿಸಿ ಬರುತ್ತಾರೆ, ಎನ್ನುವ ವಿಷಯದಲ್ಲಿ ಉದಾಹರಣೆಯನ್ನು ನೀಡಿದ್ದರು. ಅದರಲ್ಲಿ ಅವರು ‘ಸತ್ಯಶೀಲ ರಾಜಕಾರಣಿ, ವಿದ್ವಾಂಸರು, ಅನೇಕ ಭಾಷೆಗಳು ಬರುವ, ವಿಧಾನಸಭೆಯ ಸಭಾಪತಿಯ ಹುದ್ದೆಯನ್ನು ಅಲಂಕರಿಸಿ ಆ ಹುದ್ದೆಗೆ ಪ್ರತಿಷ್ಠೆಯನ್ನುಗಳಿಸಿಕೊಟ್ಟಿರುವ ಅರುಣ ಗುಜರಾತಿಯವರಂತಹ ವ್ಯಕ್ತಿ ಚುನಾವಣೆಯಲ್ಲಿ ಸೋಲುತ್ತಾರೆ ಮತ್ತು ಅರುಣಗವಳಿಯಂತಹ ಕಳ್ಳಸಾಗಾಣಿಕೆದಾರ ವ್ಯಕ್ತಿ ‘ಶಾಸಕನೆಂದು ಆರಿಸಿ ಬರುತ್ತಾನೆ, ಎನ್ನುವ ವಿಷಯದಲ್ಲಿ ದುಃಖವನ್ನು ವ್ಯಕ್ತಪಡಿಸಿದ್ದರು.

೩. ಭಗವಾ ಉಗ್ರವಾದವನ್ನು ಸಿದ್ಧಪಡಿಸಲು ಹೊರಟಿದ್ದ ಮಾಜಿ ಗೃಹಮಂತ್ರಿ ಪಿ. ಚಿದಂಬರಮ್ ಇವರ ಭ್ರಷ್ಟಾಚಾರ

ಭಗವಾ ಉಗ್ರವಾದವನ್ನು ಸಿದ್ಧಮಾಡಲು ಹೊರಟ ಮಾಜೀ ಗೃಹಮಂತ್ರಿ ಪಿ. ಚಿದಂಬರಮ್ ಮತ್ತು ಅವರ ಪುತ್ರ ಕಾರ್ತಿ ಅನೇಕ ದಿನಗಳವರೆಗೆ ಸೆರೆಮನೆಯಲ್ಲಿದ್ದರು. ಪ್ರಿಯಾಂಕಾ ಮತ್ತು ರಾಬರ್ಟ್ ವಾಡ್ರಾ ಮತ್ತು ಗಾಂಧಿ ಕುಟುಂಬದ ಮೇಲೆ ‘ನ್ಯಾಶನಲ್ ಹೇರಾಲ್ಡ್ನ ಭೂಮಿಯನ್ನು ಕಬಳಿಸಿದ ಆರೋಪವಿದೆ, ಆವಾಗಿನಿಂದ ಅವರು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದು ಸದ್ಯ ಅವರು ಜಾಮೀನಿನ ಮೇಲೆ ಮುಕ್ತರಾಗಿದ್ದಾರೆ.

ವಾಚಕರಿಗೆ ೨-ಜೀ ಸ್ಪೆಕ್ಟ್ರಮ್ ಹಗರಣ, ಕಲ್ಲಿದ್ದಲು ಹಗರಣ ನೆನಪಾಗುತ್ತಿರಬಹುದು. ಇವೆಲ್ಲ ವಿಷಯಗಳ ದಾಖಲೆ ನಮ್ಮಲ್ಲಿರುವಂತೆಯೇ ನ್ಯಾಯಾಲಯದಲ್ಲಿಯೂ ಇರುತ್ತವೆ. ರಾಜಕಾರಣಿಗಳ ಅಪರಾಧಗಳು ಮತ್ತು ಭ್ರಷ್ಟಾಚಾರದ ಖಟ್ಲೆಗಳು ತನ್ನ ಮುಂದೆ ಬಂದಾಗ ನ್ಯಾಯಾಲಯಕ್ಕೂ ದುಃಖವಾಗುತ್ತದೆ .

೪. ತಮ್ಮ ಮೇಲಿನ ಅವಿಶ್ವಾಸ ಗೊತ್ತುವಳಿಯನ್ನು ತಳ್ಳಿ ಹಾಕಲು ಅಂದಿನ ಪ್ರಧಾನಮಂತ್ರಿ ಪಿ.ವಿ.ನರಸಿಂಹರಾವ್ ಇವರು ಲಂಚ ಕೊಟ್ಟಿರುವ ಪ್ರಕರಣ

೪ ಅ. ತಮ್ಮ ಮೇಲಿನ ಅವಿಶ್ವಾಸಗೊತ್ತುವಳಿ ವಿರುದ್ಧ ಮತದಾನ ಮಾಡಲು ಪ್ರಧಾನಮಂತ್ರಿ ಪಿ.ವಿ.ನರಸಿಂಹರಾವ್ ಇವರಿಂದ ೩ ಕೋಟಿ ರೂಪಾಯಿಗಳ ಲಂಚ ! : ಆಗಿನ ಪ್ರಧಾನಮಂತ್ರಿ ಪಿ.ವಿ.ನರಸಿಂಹ ರಾವ್ ಇವರ ವಿರುದ್ಧ ಸಾಮ್ಯವಾದಿಗಳು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದರು. ಆಗ ಕಾಂಗ್ರೆಸ್‌ನ ಬಳಿ ೨೫೪ ಸಂಸದರಿದ್ದರು ಮತ್ತು ಗೊತ್ತುವಳಿ ತಳ್ಳಿ ಹಾಕಲು ಅವರಿಗೆ ೧೪ ಮತಗಳ ಅವಶ್ಯಕತೆಯಿತ್ತು. ‘ಝಾರಖಂಡ ಮುಕ್ತಿ ಮೋರ್ಚಾದ ನೇತಾರ ಶಿಬೂ ಸೋರೇನರೊಂದಿಗೆ ಇತರ ೧೪ ಸಂಸದರು ಗೊತ್ತುವಳಿಯ ವಿರುದ್ಧ ಮತದಾನ ಮಾಡಬೇಕೆಂದು ಅವರಲ್ಲಿನ ಪ್ರತಿಯೊಬ್ಬರಿಗೆ ೩ ಕೋಟಿ ರೂಪಾಯಿಗಳನ್ನು ಕೊಡಲಾಗಿದೆಯೆಂದು ಆರೋಪಿಸಲಾಗಿತ್ತು.

೪ ಆ. ಲಂಚ ತೆಗೆದುಕೊಳ್ಳುವವರ ವಿರುದ್ಧ ಖಟ್ಲೆಗಳನ್ನು ನಡೆಸದಿರಲು ನ್ಯಾಯಾಲಯದ ನಿರ್ಣಯ : ಪ್ರಧಾನಮಂತ್ರಿ ನರಸಿಂಹ ರಾವ್ ಇವರ ಮೇಲಿನ ಅವಿಶ್ವಾಸ ಗೊತ್ತುವಳಿ ವ್ಯರ್ಥವಾಯಿತು; ಆದರೆ ಅವರ ಮುಖಭಂಗವಾಯಿತು ಮತ್ತು ಭಾರತೀಯ ಪ್ರಜಾಪ್ರಭುತ್ವದ ಅವಮಾನವೂ ಆಯಿತು. ಆ ಸಮಯದಲ್ಲಿ ರಾವ್ ಇವರ ವಿರುದ್ಧದ ಖಟ್ಲೆಗೂ ತುಂಬಾ ಪ್ರಸಿದ್ಧಿ ಸಿಕ್ಕಿತು ; ಏಕೆಂದರೆ ‘ಹಣ ನೀಡುವವರ ವಿರುದ್ಧ ಖಟ್ಲೆ ನಡೆಸಬೇಕು, ಹಣವನ್ನು ಸ್ವೀಕರಿಸುವ ಶಿಬೂ ಸೋರೇನ್ ಇವರ ವಿರುದ್ಧ ಖಟ್ಲೆಯನ್ನು ನಡೆಸಲು ಬರುವುದಿಲ್ಲ, ಎನ್ನುವ ಅಭಿಪ್ರಾಯವನ್ನು ಸರ್ವೋಚ್ಚ ನ್ಯಾಯಾಲಯವು ವ್ಯಕ್ತಪಡಿಸಿತ್ತು.

೪ ಇ. ಕಾನೂನೇ ತಪ್ಪಾಗಿದೆ  ಎಂಬುದು ಸಾಮಾನ್ಯ ಜನರ ಭಾವನೆ ! : ಸಂವಿಧಾನದ ಕಲಮ್ ೧೦೫ ಕ್ಕನುಸಾರ ಸಂಸತ್ತಿನಲ್ಲಿ ಘಟಿಸಿದ ವಿಷಯಗಳಿಗೆ ವಿಶೇಷಾಧಿಕಾರವಿದೆ (ಪ್ರಿವಿಲೇಜ್). ಆದ್ದರಿಂದ ಇಂತಹ ವಿವಾದಗಳನ್ನು ನ್ಯಾಯಾಲಯದಲ್ಲಿ ನಡೆಸಲು ಬರುವುದಿಲ್ಲ. ಇದರಿಂದಾಗಿ ಸೋರೇನ್ ಇವರಿಗೆ ಲಾಭವಾಯಿತು. ಸಾಮಾನ್ಯರಿಗೆ ಮಾತ್ರ ಅವರನ್ನು ಮುಕ್ತಗೊಳಿಸಿರುವುದು ಇಷ್ಟವಾಗಲಿಲ್ಲ. ಹಣವನ್ನು ತೆಗೆದುಕೊಂಡು ಅವಿಶ್ವಾಸಗೊತ್ತುವಳಿ ವ್ಯರ್ಥವಾಯಿತು ಎಂಬುದನ್ನು ಒಪ್ಪಿಕೊಂಡರೂ ಶಿಕ್ಷೆಯಾಗಲಿಲ್ಲ, ಆದ್ದರಿಂದ ಇಂತಹ ಕಾನೂನೇ ತಪ್ಪಾಗಿದೆ ಎಂಬುದು ಅವರ ಸರಳ ಅಭಿಪ್ರಾಯವಾಗಿತ್ತು. ಅವರಿಗೆ ಕಲಮ್ ೧೦೫ ಇತ್ಯಾದಿ ತಿಳಿಯುವುದಿಲ್ಲ. ಇಂದಿರಾ ಗಾಂಧಿಯ ನಂತರ ಪ್ರಧಾನಮಂತ್ರಿಯ ಹುದ್ದೆಯಲ್ಲಿರುವ ವ್ಯಕ್ತಿಯ ವಿರುದ್ಧ ಖಟ್ಲೆ ನಡೆಯುವುದು ಇದೇ ಮೊದಲಾಗಿತ್ತು; ಆದರೆ ನರಸಿಂಹ ರಾವ್ ಇವರ ವಿರುದ್ಧದ ಖಟ್ಲೆಯು ಕ್ರಿಮಿನಲ್ ಸ್ವರೂಪದ್ದಾಗಿತ್ತು.

೫. ರಾಜಕಾರಣದ ಅಪರಾಧಗಳು ಬಂದಾಗ ಸರ್ವೋಚ್ಚ ನ್ಯಾಯಾಲಯ ಕಠಿಣ ನಿಲುವು ತೆಗೆದುಕೊಳ್ಳುವುದು

ಈ ಎಲ್ಲ ಘಟನೆಗಳು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿದಿವೆ. ಆದ್ದರಿಂದ ಯಾವಾಗ ಅದರ ಮುಂದೆ ‘ರಾಜಕಾರಣದಲ್ಲಿನ ಅಪರಾಧಗಳು ಬರುತ್ತವೆಯೋ, ಆಗ ನ್ಯಾಯಾಲಯವು ಕಠೋರ ಭೂಮಿಕೆಯನ್ನು ತೆಗೆದುಕೊಂಡಿದೆ.

೫ ಅ. ಅಪರಾಧಿ ಹಿನ್ನೆಲೆಯಿರುವ ಉಮೇದುವಾರರ ಮಾಹಿತಿ ಯನ್ನು ವರ್ತಮಾನಪತ್ರಿಕೆಗಳಲ್ಲಿ ಪ್ರಸಿದ್ಧಗೊಳಿಸಲು ಸರ್ವೋಚ್ಚ ನ್ಯಾಯಾಲಯದ ಆದೇಶ : ‘ಕಲಂಕಿತ ರಾಜಕಾರಣಿಗಳು ಅಥವಾ ಅಪರಾಧಿ ಹಿನ್ನೆಲೆಯಿರುವ ರಾಜಕಾರಣಿಗಳು ಬೇಡ, ಎಂಬುದಕ್ಕಾಗಿ ೧೯೯೫ ರಲ್ಲಿ ಕೆಲವು ಮಹಿಳೆಯರು ಸಂಸದಭವನದ ಸಮೀಪ ಆಂದೋಲನ ಮಾಡಿದ್ದರು. ಅನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ ಜನಹಿತಯಾಚನೆ ಅರ್ಜಿ ದಾಖಲಾಯಿತು. ಆ ಸಮಯದಲ್ಲಿ ‘ಅಪರಾಧಿ ಹಿನ್ನೆಲೆಯಿರುವ ಉಮೇದುವಾರರ ಹೆಸರುಗಳನ್ನು ಸ್ಥಳೀಯ ವರ್ತಮಾನಪತ್ರಿಕೆಗಳಲ್ಲಿ ಪ್ರಸಿದ್ಧ ಪಡಿಸಬೇಕು, ಎಂದು ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ಆದೇಶ ನೀಡಿತ್ತು.

೫ ಆ. ರಾಜಕೀಯ ಪಕ್ಷಗಳು ಅಪರಾಧಿ ಹಿನ್ನೆಲೆಯಿರುವ ಎಷ್ಟು ಅಭ್ಯರ್ಥಿಗಳನ್ನು  ಚುನಾವಣೆಗೆ ಆಯ್ಕೆಮಾಡಿದೆ, ಎಂಬುದರ ಪಟ್ಟಿಯನ್ನು ಪ್ರಸಿದ್ಧ ಪಡಿಸಲು ಆದೇಶ : ಸರ್ವೋಚ್ಚ ನ್ಯಾಯಾಲಯಕ್ಕೆ, ಈ ಹೆಸರುಗಳನ್ನು ಕಡಿಮೆ ವಿತರಣೆಯಿರುವ ದಿನಪತ್ರಿಕೆಗಳಲ್ಲಿ ಮುದ್ರಿಸಲಾಗುತ್ತದೆ ಮತ್ತು ಮತದಾರರಿಗೆ ಇದರ ಬಗ್ಗೆ ಏನೂ ತಿಳಿಯುವುದಿಲ್ಲ ಎಂಬುದು ಗಮನಕ್ಕೆ ಬಂದಿತು. ಆಗ ನ್ಯಾಯಾಲಯವು ರಾಜಕೀಯ ಪಕ್ಷಗಳಿಗೆ ‘ಅಪರಾಧಿ ಹಿನ್ನೆಲೆಯಿರುವ ಎಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಎಂಬುದರ ಪಟ್ಟಿಯನ್ನು ಘೋಷಿಸಲು ಮತ್ತು ‘ಈ ಮಾಹಿತಿಯನ್ನು ದಿನಪತ್ರಿಕೆ ಮತ್ತು ಸಾಮಾಜಿಕ ಮಾಧ್ಯಮಗಳಿಂದ ಜನರಿಗೆ ತಿಳಿಸಬೇಕು, ಎಂದು ಆದೇಶ ನೀಡಿತು.

೫ ಇ. ಶೇ. ೩೩ ರಷ್ಟು ಜನಪ್ರತಿನಿಧಿಗಳ ಮೇಲೆ ಅಪರಾಧಗಳ ಆರೋಪ : ೨೦೧೪ ರ ಸಾರ್ವಜನಿಕ ಚುನಾವಣೆಯ ನಂತರ ಸರ್ವೋಚ್ಚ ನ್ಯಾಯಾಲಯಕ್ಕೆ ಯಾವ ಯಾಚಿಕೆಗಳು (ಅರ್ಜಿ ಗಳು) ಬಂದವೋ, ಅದರಿಂದ ಶೇ. ೩೩ ರಷ್ಟು ಜನಪ್ರತಿನಿಧಿಗಳ ಮೇಲೆ ಅಪರಾಧದ ಆರೋಪಗಳಿವೆ, ಎಂಬುದು ಗಮನಕ್ಕೆ ಬಂದಿತು. ಅವುಗಳಲ್ಲಿ ಹತ್ಯೆಯ ಪ್ರಯತ್ನ ಮಾಡುವುದು, ಸರಕಾರೀ ಅಧಿಕಾರಿಗಳ ಮೇಲೆ ಮಾರಣಾಂತಿಕ ಆಕ್ರಮಣಗಳನ್ನು ಮಾಡುವುದು ಇತ್ಯಾದಿಗಳ ಸಮಾವೇಶವಿದೆ. ಇಂತಹ ಖಟ್ಲೆಗಳು ಪ್ರಲಂಬಿತ  ಇರುವಾಗ ಇವರು ಆರಿಸಿ ಬರುತ್ತಾರೆ ಮತ್ತು ‘ಕಾನೂನುಗಳನ್ನು ಮಾಡುವ ಜನಪ್ರತಿನಿಧಿಗಳೆಂದು ಮೆರೆಯುತ್ತಾರೆ. ಇದರೊಂದಿಗೆ ಅವರ ಖಟ್ಲೆಗಳು ೧೦ ರಿಂದ ೨೦ ವರ್ಷಗಳವರೆಗೆ ನೆನೆಗುದಿಯಲ್ಲಿರುತ್ತವೆ. ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಅವಕಾಶ ಸಿಕ್ಕಿದಾಗಲೆಲ್ಲ ರಾಜಕಾರಣದ ಶುದ್ಧೀಕರಣವನ್ನು ಮಾಡುವ ಬಗ್ಗೆ ಸೂಚನೆಗಳನ್ನು ನೀಡಿದೆ. ಒಮ್ಮೆ ನ್ಯಾಯಾಲಯವು, ಅಪರಾಧಿ ಹಿನ್ನೆಲೆಯಿರುವಾಗ ಅವರು ಕೇವಲ ‘ಆರಿಸಿ ಬರುತ್ತಾರೆ, ಎನ್ನುವ ಏಕೈಕ ಕಾರಣಕ್ಕಾಗಿ ಈ ಜನರಿಗೆ ಅಭ್ಯರ್ಥಿಸ್ಥಾನವನ್ನು (ಟಿಕೆಟ್) ನೀಡುತ್ತೀರಾ ಎಂದು ಸ್ಪಷ್ಟವಾಗಿ ಕೇಳಿದೆ  ?

೫ ಈ. ರಾಜಕಾರಣಿಗಳ ಅಪರಾಧಗಳ ಖಟ್ಲೆಗಳು ೧೦-೨೦ ವರ್ಷಗಳವರೆಗೆ ಪ್ರಲಂಬಿತ ಇರುವುದ ರಿಂದ ಶೀಘ್ರಗತಿಯ ನ್ಯಾಯಾಲಯಗಳನ್ನು ಸ್ಥಾಪಿಸಲು ಆದೇಶ : ಇಂತಹ ಒಂದು ಖಟ್ಲೆ ೧೭ ಸಪ್ಟೆಂಬರ್ ೨೦೨೦ ರಂದು ಆಲಿಕೆಗೆ ಬಂದಾಗ ಸರ್ವೋಚ್ಚ ನ್ಯಾಯಾಲಯವು ಅಪರಾಧಿ ಹಿನ್ನೆಲೆಯಿರುವ ರಾಜಕಾರಣಿಗಳ ಖಟ್ಲೆಗಳು ೧೦ ರಿಂದ ೨೦ ವರ್ಷಗಳವರೆಗೆ ಏಕೆ ಪ್ರಲಂಬಿತವಾಗಿರುತ್ತವೆ, ಎನ್ನುವ ವಿಷಯದಲ್ಲಿ ತೀವ್ರ ಚಿಂತೆ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ನ್ಯಾಯಾಲಯವು, ‘ಎಲ್ಲಿಯವರೆಗೆ ಸಂವಿಧಾನದ ಕಲಮ್ ೧೦೨ ಮತ್ತು ‘ರಿಪ್ರೆಝೆಂಟೇಶನ್ ಆಫ್ ಪೀಪಲ್ಸ್, ೧೯೫೦ ಈ ಕಾನೂನಿನಲ್ಲಿ ಸುಧಾರಣೆಯಾಗುವುದಿಲ್ಲವೋ, ಅಲ್ಲಿಯವರೆಗೆ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಎಂದು ಸ್ಪಷ್ಟವಾಗಿ ಹೇಳಿತು. ಅದೇ ರೀತಿ ‘ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿ ಶೀಘ್ರಗತಿಯಲ್ಲಿ ಅಪರಾಧಿ ಹಿನ್ನೆಲೆಯಿರುವ ರಾಜಕಾರಣಿಗಳ ಖಟ್ಲೆಗಳಿಗೆ ನಿರ್ಣಯ ನೀಡಬೇಕು, ಎಂದು ಸೂಚನೆಯನ್ನು ನೀಡಿತು; ಏಕೆಂದರೆ ‘ರಾಜಾಕಾಲಸ್ಯ ಕಾರಣಮ್, ಈ ಸಿದ್ಧಾಂತವು ಅವರಿಗೆ ಒಪ್ಪಿಗೆಯಿದೆ.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯ, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳು.