ಕಳೆದ ೨೦ ವಷಗಳಲ್ಲಿ ದೇಶದಲ್ಲಿ ಏಳೂ ದಿನಗಳು ಮತ್ತು ೨೪ ಗಂಟೆಗಳು ನಡೆಯುವ ೩೭೫ ‘ನ್ಯೂಸ್ ಚ್ಯಾನೆಲ್ಸ್ ಪ್ರಾರಂಭವಾಗಿವೆ. ಇದು ಯಾವಾಗಲೂ ಹಸಿದಿರುವ ಒಂದು ಪ್ರಾಣಿಯಾಗಿದೆ. ಅದಕ್ಕೆ ತಿನ್ನಲು ಏನು ಕೊಡಬೇಕು ? ಎಂಬುದೇ ಒಂದು ಪ್ರಶ್ನೆಯಾಗಿದೆ. ಹಾಗೆ ನೋಡಿದರೆ, ಇವುಗಳ ಸಂಖ್ಯೆಯು ಹೆಚ್ಚಾಗಿದೆ; ಆದರೆ ದುರ್ದೈವದಿಂದ ಗುಣಮಟ್ಟವು ಮಾತ್ರ ಕಡಿಮೆಯಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸದ್ಯ ಮಾಧ್ಯಮಗಳ ಮೇಲೆ ಜನರ ವಿಶ್ವಾಸವೇ ಇಲ್ಲದಂತಾಗಿದೆ. ಜನರು ನಮ್ಮ ಕಡೆಗೆ ನೋಡಲು ಭಯಪಡುತ್ತಾರೆ. ನಮಗೆ ಯಾವುದೇ ರೀತಿಯ ಗೌರವಾದರ ನೀಡುವುದಿಲ್ಲ. ಇಂದಿನ ಮಾಧ್ಯಮಗಳು ಕೇವಲ ಮನೋರಂಜನೆ ಮತ್ತು ನಾಟಕೀಯ ಅಥವಾ ಉತ್ತೇಜಕ ಸಾಮಗ್ರಿಗಳನ್ನು ಜನರೆದುರು ಪ್ರಸ್ತುತ ಪಡಿಸುವ ಒಂದು ಸಾಧನವಾಗಿ ಉಳಿದಿದೆ. – ಓರ್ವ ಹಿರಿಯ ಪತ್ರಕರ್ತ (ಆಧಾರ : ಲೋಕ ಕಲ್ಯಾಣ ಸೇತು, ಜನವರಿ ೨೦೧೩)