ಭಾರತೀಯ ರಾಜಕಾರಣವು ಎಷ್ಟು ಕೆಳಮಟ್ಟಕ್ಕೆ ಕುಸಿದಿದೆ ಎಂಬುದನ್ನು ಅಳೆಯಲು ಯಾವುದೇ ಮಾನದಂಡವಿಲ್ಲ. ನೈತಿಕತೆ, ಹಣಕಾಸಿನ ದುರುಪಯೋಗ, ವಿರೋಧಿಗಳನ್ನು ಟೀಕಿಸುವುದು, ತಮ್ಮ ಪ್ರಭುತ್ವವನ್ನು ಉಳಿಸಿಕೊಳ್ಳಲು ಮಾಡುವ ಪಿತೂರಿಗಳು ಇವುಗಳ ಬಗ್ಗೆ ಯಾವುದೇ ಲಿಖಿತ ದಾಖಲೆಗಳಿಲ್ಲ, ಇಂತಹ ಘಟನೆಗಳು ಸಾರ್ವಜನಿಕರಿಗೆ ತಿಳಿದಿರುತ್ತದೆ. ನಮ್ಮ ಮುಂದೆ ನಾಯಕನೆಂದು ಮೆರೆಯುವ ವ್ಯಕ್ತಿ ಹೇಗಿದ್ದಾನೆ ಎಂಬುದು ಅವರಿಗೆ ನಿಖರವಾಗಿ ತಿಳಿದಿರುತ್ತದೆ. ಹಾಗಿದ್ದರೂ ಪ್ರಜಾಪ್ರಭುತ್ವದ ಸವಿಯಾದ ಹೆಸರಿನಲ್ಲಿ ಇದನ್ನೆಲ್ಲವನ್ನು ಅರಗಿಸಿಕೊಳ್ಳಬೇಕಾಗುತ್ತದೆ. ರಾಜಕಾರಣಿಗಳ ಅಪರಾಧೀ ಹಿನ್ನೆಲೆಯು ಗಂಭೀರ ಮತ್ತು ಆಗಾಗ ಚರ್ಚಿಸಲ್ಪಡುವ ವಿಷಯವಾಗಿದೆ. ಅನೇಕ ದೂರುಗಳು ಮತ್ತು ಅರ್ಜಿಗಳು ದಾಖಲಾಗಿದ್ದರೂ, ಯಾವುದೇ ನಿಖರವಾದ ಪರಿಹಾರ ಕಂಡುಬಂದಿಲ್ಲ. ‘ಗಂಭೀರ ಸ್ವರೂಪದ ಅಪರಾಧಗಳಲ್ಲಿ ಶಿಕ್ಷೆಗೊಳಗಾದವರು ಜೀವಮಾನವಿಡಿ ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿದೆ. ಸರಕಾರಿ ಅಧಿಕಾರಿಯೊಬ್ಬರು ಅಪರಾಧಕ್ಕಾಗಿ ಶಿಕ್ಷೆಗೊಳಗಾಗಿದ್ದರೆ, ಆತನಿಗೆ ಜೀವಾವಧಿ ನಿಷೇಧವಿದೆ, ಆದರೆ ರಾಜಕಾರಣಿಗೆ ಏಕಿಲ್ಲ ? ಎಂಬುದು ಅರ್ಜಿದಾರರ ಪ್ರಶ್ನೆ. ಅರ್ಜಿಯ ವಿಷಯವನ್ನು ಓದಿದ ನಂತರ ಎಲ್ಲರೂ ತೃಪ್ತರಾಗಿದ್ದರೂ, ಕೇಂದ್ರ ಸರಕಾರ ಮಾತ್ರ ಹಾಗೆ ಮಾಡುವುದನ್ನು ವಿರೋಧಿಸಿದೆ. ಸರಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಜನಪ್ರತಿನಿಧಿಗಳು ಏನು ಮಾಡಬೇಕೆಂದು ಹೇಳಿದೆ. ಸರಕಾರವು ಸುತ್ತಿಬಳಸಿ ಉತ್ತರಗಳನ್ನು ನೀಡುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವ ಬದಲು ಜಾರಿಗೊಂಡಿದೆ. ‘ಜನಪ್ರತಿನಿಧಿಗಳು ಅವರು ಮಾಡಿದ ಪ್ರತಿಜ್ಞೆಗೆ ಬದ್ಧರಾಗಿರುತ್ತಾರೆ. ಪ್ರತಿಜ್ಞೆಯ ಪ್ರಕಾರ, ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಮತ್ತು ದೇಶದಲ್ಲಿ ಜನರಿಗೆ ಸೇವೆ ಸಲ್ಲಿಸುತ್ತಾರೆಂಬ ನಿರೀಕ್ಷೆಯಿದೆ ಎಂದು ಸರಕಾರ ಹೇಳಿದೆ. ವಾಸ್ತವದಲ್ಲಿ ರಾಜಕಾರಣಿಗಳು ಪ್ರತಿದಿನ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆಂದು ನಿರೀಕ್ಷಿಸಲಾಗದು. ಕೇಂದ್ರ ಸರಕಾರ ಇದರ ಬಗ್ಗೆ ಮಾತನಾಡುವುದನ್ನು ತಪ್ಪಿಸಿಕೊಳ್ಳುತ್ತಿದೆ. ಅದಕ್ಕಾಗಿಯೇ ಎಲ್ಲ ಪಕ್ಷದ ರಾಜಕಾರಣಿಗಳ ಪ್ರಜಾಪ್ರಭುತ್ವ ವಿರೋಧಿ ವರ್ತನೆಯಿಂದ ಜನಸಾಮಾನ್ಯರು ಆಕ್ರೋಶಗೊಂಡಿದ್ದಾರೆ.
ಅಪರಾಧಿಗಳಿಗೆ ಆಶ್ರಯ
ಪ್ರಸ್ತುತ ಭಾರತದ ಶೇ. ೩೩ ರಷ್ಟು ಜನಪ್ರತಿನಿಧಿಗಳು ಅಪರಾಧೀ ಹಿನ್ನೆಲೆಯವರಾಗಿದ್ದಾರೆ. ಅನೇಕ ರಾಜಕಾರಣಿಗಳ ಮೇಲೆ ಗಂಭೀರ ಅಪರಾಧಗಳ ಆರೋಪವಿದೆ. ಇದರ ಹೊರತಾಗಿಯೂ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಜನರು ವರ್ಷಾನು ವರ್ಷ ಅವರಿಗೆ ಮತ ಹಾಕುತ್ತಾರೆ. ಕಳಂಕಿತ ರಾಜಕಾರಣಿಗಳ ವಿರುದ್ಧದ ಅಪರಾಧಗಳು ನ್ಯಾಯಾಲಯಗಳಲ್ಲಿ ವರ್ಷಾನುವರ್ಷಗಳಿಂದ ಬಾಕಿ ಉಳಿದಿವೆ. ರಾಜಕೀಯ ಪ್ರಭಾವವನ್ನು ಬಳಸಿಕೊಂಡು ನಿಗ್ರಹಿಸಲಾಗದ ಒಟ್ಟು ಅಪರಾಧಗಳು ಶೇ. ೩೩ ರಷ್ಟಿದೆ. ವಾಸ್ತವದಲ್ಲಿ ಈ ಅಪರಾಧಗಳಲ್ಲಿ ಶೇಕಡಾ ೩೩ ರಷ್ಟು ಅಪರಾಧಗಳನ್ನು ಆಡಳಿತ ಅಧಿಕಾರಿಗಳು, ಪೊಲೀಸ್ ಮತ್ತು ರಾಜಕಾರಣಿ ಗಳ ಸರಪಳಿಯಿಂದಲೂ ನಿಗ್ರಹಿಸಲು ಆಗಿಲ್ಲ. ಬಹಿರಂಗಪಡಿಸಲು ಅನುಮತಿಸದ ಅಪರಾಧಗಳ ಸಂಖ್ಯೆಯನ್ನು ಎಲ್ಲಿಯೂ ದಾಖಲಿಸಲಾಗಿಲ್ಲ, ಆದರೆ ಜನರಿಗೆ ಇದೆಲ್ಲ ವಿಷಯ ತಿಳಿದಿದೆ. ಅದಕ್ಕಾಗಿಯೇ ಅಂತಹ ಅರ್ಜಿಗಳಿಗೆ ಸಾಮೂಹಿಕ ಬೆಂಬಲವಿದೆ. ಸರಕಾರ ನೀಡಿದ ಮೆದುವಾದ ಉತ್ತರಗಳು ಜನರಿಗೆ ತಿಳಿದಿದೆ. ಅದರಿಂದ ಜನರು ತಮ್ಮ ಮನಸ್ಥಿತಿ ಮತ್ತು ಕೆಲಸದ ದಿಕ್ಕನ್ನು ಅಳೆಯುತ್ತಾರೆ. ಪಾರದರ್ಶಕತೆ ಜನರ ಆದ್ಯತೆಯಾಗಿದೆ. ಅಭ್ಯರ್ಥಿಗಳ ಅಪರಾಧದ ಹಿನ್ನೆಲೆ ಕಂಡುಹಿಡಿಯಲು ಹೆಣಗಾಡ ಬೇಕಾಗುತ್ತದೆ. ಆಗ ನ್ಯಾಯಾಲಯವು ಮಧ್ಯಪ್ರವೇಶಿಸಬೇಕಾಯಿತು. ಹಾಗಿದ್ದರೂ, ನ್ಯಾಯಾಲಯವು ಕಾಲಕಾಲಕ್ಕೆ ರಾಜಕೀಯದ ಶುದ್ಧೀಕರಣದ ಕುರಿತು ಸೂಚನೆಗಳನ್ನು ನೀಡಿದೆ. ಇಂತಹ ಸಲಹೆಗಳನ್ನು ಎಲ್ಲ ಸರಕಾರಗಳು ಅನುಕೂಲಕರವಾಗಿ ಕಡೆಗಣಿಸಿವೆ.
ವಿಭಿನ್ನ ವರ್ತನೆ ಏಕೆ ?
ಅಪರಾಧಿಗಳನ್ನು ಯಾವುದೇ ಕ್ಷೇತ್ರದಲ್ಲಿ ಗೌರವದಿಂದ ನೋಡಲಾಗುವುದಿಲ್ಲ. ಆಧುನಿಕ ವೈದ್ಯನು ತನ್ನ ಕ್ಷೇತ್ರದಲ್ಲಿ ಅಪರಾಧ ಮಾಡಿದರೆ, ಯಾವ ರೋಗಿಯು ಅವನಿಂದ ಚಿಕಿತ್ಸೆ ಪಡೆಯುತ್ತಾನೆ ? ಒಬ್ಬ ಶಿಕ್ಷಕನು ಅಪರಾಧ ಮಾಡಿದರೆ, ‘ಶಿಕ್ಷಣಕ್ಷೇತ್ರವು ಕಳಂಕಿತವಾಗಿದೆ ಎಂಬ ಭಾವನೆ ಬರುತ್ತದೆ.ಅವರು ಸಾಮಾಜಿಕ ಆಕ್ರೋಶವನ್ನು ಎದುರಿಸಬೇಕಾಗುತ್ತದೆ. ಯಾವುದೇ ಖಾಸಗಿ ಅಥವಾ ಸರಕಾರಿ ಕಂಪನಿಯು ಅಪರಾಧಿಗೆ ನೌಕರಿ ನೀಡುವುದಿಲ್ಲ ಅಥವಾ ಅವನೊಂದಿಗೆ ಉತ್ತಮವಾಗಿ ವರ್ತಿಸುವುದಿಲ್ಲ. ಹಾಗಾದರೆ ಜನಪ್ರತಿನಿಧಿಗಳಿಗೆ ಮಾತ್ರ ವಿಶೇಷ ಸ್ಥಾನಮಾನ ಏಕೆ ? ಕೊಲೆಯತ್ನ ಮತ್ತು ಸರಕಾರಿ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ಮುಂತಾದ ಗಂಭೀರ ಪ್ರಕರಣಗಳನ್ನು ಹೊಂದಿರುವವರು ‘ಕಾನೂನು ರೂಪಿಸುವ ಜನಪ್ರತಿನಿಧಿಗಳು ಎಂದು ಆಯ್ಕೆ ಮಾಡಲಾಗುತ್ತದೆ. ಇದು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ ! ಅಂತಹ ನಾಯಕರ ರಾಜ್ಯದಲ್ಲಿ ಅಪರಾಧಗಳಿಗೆ ರಾಜಾಶ್ರಯ ಸಿಗದೇ ಇನ್ನೇನಾಗಬಹುದು ? ಸಂವಿಧಾನ, ಕಾನೂನಿನ ರಾಜ್ಯ ಇತ್ಯಾದಿಗಳ ಬಗ್ಗೆ ಬಡಬಡಾಯಿಸುವವರು ರಾಜಕಾರಣಿಗಳ ಅಪರಾಧಗ ಬಗ್ಗೆ ಒಂದು ಮಾತನ್ನೂ ಹೇಳುವುದಿಲ್ಲ. ಪ್ರಗತಿಪರ ಸಂವಿಧಾನದ ರಕ್ಷಕರು ತಮ್ಮದೇ ಆದ ರಾಜಕೀಯ ಸಂಬಂಧಗಳನ್ನು ಉಳಿಸಿಕೊಳ್ಳಲು ರಾಜಕಾರಣಿಗಳ ಅಪರಾಧಗಳಿಗೆ ಅಂತಹ ಮೌನ ಅನುಮೋದನೆ ನೀಡುವುದು ಯಾವಾಗಲೂ ಅಯೋಗ್ಯವಾಗಿದೆ.
ಪರಿಶುದ್ಧವಾಗಿರಲು ಒತ್ತಾಯ !
ತಮ್ಮನ್ನು ಪ್ರಜಾಪ್ರಭುತ್ವದ ಕೇಂದ್ರಬಿಂದು ಎಂದು ಕರೆದುಕೊಳ್ಳುವ ಜನರು ಎಷ್ಟು ದುರ್ಬಲರಾಗಿದ್ದಾರೆ ? ಇದೆಲ್ಲ ತಿಳಿದಿದ್ದರೂ ಕೆಲವೊಮ್ಮೆ ರಾಜಕೀಯ ಒತ್ತಡದಿಂದ ಅವರು ತಮ್ಮ ಕೆಲಸಗಳನ್ನು ಸಂಬಂಧಿತ ಜನಪ್ರತಿನಿಧಿಗಳಿಂದ ಪೂರ್ಣಗೊಳಿಸಲು ಕೆಲವೊಮ್ಮೆ ಹತಾಶರಾಗಿ ಇಂತಹ ನಾಯಕರನ್ನೇ ಆಯ್ಕೆ ಮಾಡುತ್ತಾರೆ. ತಮ್ಮ ಎಲ್ಲ ಸ್ವಾರ್ಥವನ್ನು ಬದಿಗಿಟ್ಟು ಯಾವುದೇ ಅಪರಾಧಿ ಹಿನ್ನೆಲೆಯ ನಾಯಕನನ್ನು ಶಾಶ್ವತವಾಗಿ ಮನೆಯಲ್ಲಿ ಕೂರಿಸಲು ಜನರು ನಿರ್ಧರಿಸುವುದು ಕಠಿಣವೇನಿಲ್ಲ. ಜನರು ಅದನ್ನು ನಿರ್ಧರಿಸಲು ದೇಶಪ್ರೇಮಿಗಳು ದೊಡ್ಡ ಜಾಗೃತಿ ಮೂಡಿಸಬೇಕು. ಸರಕಾರ ಅಥವಾ ಕಾನೂನುಗಳು ಏನೇ ಹೇಳಿದರೂ ಜನರು ನಿಷ್ಕಳಂಕ ಮತ್ತು ಪಾರದರ್ಶಕ ಜನಪ್ರತಿನಿಧಿಗಳನ್ನು ಬಯಸುತ್ತಾರೆ. ಅಪರಾಧಿ ಹಿನ್ನೆಲೆ ಹೊಂದಿರುವ ಜನಪ್ರತಿನಿಧಿಗಳನ್ನು ಜೀವಮಾನವಿಡೀ ನಿಷೇಧಿಸಬೇಕು. ಅಲ್ಲದೇ ಕಳಂಕವಿಲ್ಲದ ಜನಪ್ರತಿನಿಧಿಗಳಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇರಬೇಕು. ಒಂದು ಅಪರಾಧ ದಾಖಲಾಗಿದ್ದರೂ ಅವರಿಗೆ ಅಭ್ಯರ್ಥಿಸ್ಥಾನ ನೀಡಬಾರದು ಎಂಬುದು ಜನರ ಭಾವನೆಯಾಗಿದೆ. ಇತರ ಎಲ್ಲ ಕ್ಷೇತ್ರಗಳಂತೆ, ಆಯಾ ಕ್ಷೇತ್ರದಲ್ಲಿ ಉನ್ನತ ಶಿಕ್ಷಣಕ್ಕೆ ಆದ್ಯತೆ ಇದೆ, ಹಾಗೆಯೇ ರಾಜಕೀಯ ಕ್ಷೇತ್ರದಲ್ಲಿ ಶಿಕ್ಷಣವನ್ನು ನಿರ್ಲಕ್ಷಿಸಲಾಗುತ್ತದೆ ಎಂಬುದೂ ಚಿಂತೆಯ ವಿಷಯವಾಗಿದೆ. ಮೂಲತಃ ವಿದ್ಯಾವಂತ, ಸುಸಂಸ್ಕೃತ ಜನರು ಅಂತಹ ಹಾದಿಯನ್ನು ಹಿಡಿಯುವುದಿಲ್ಲ. ಅದಕ್ಕಾಗಿಯೇ ಉತ್ತಮ ಶಿಕ್ಷಣ, ನೈತಿಕತೆ, ಮೌಲ್ಯಾಧಾರಿತ ಶಿಕ್ಷಣವು ರಾಜಕಾರಣದ ಆದ್ಯತೆಯಾಗಿದೆ. ಅಂತಹ ವ್ಯಕ್ತಿಯೇ ಅಧಿಕಾರ, ಸಂಪತ್ತು, ಹಕ್ಕುಗಳೊಂದಿಗೆ ಸುಸಂಸ್ಕೃತ ರೀತಿಯಲ್ಲಿ ವರ್ತಿಸಬಹುದು. ಸುಸಂಸ್ಕೃತ ಜನಪ್ರತಿನಿಧಿಯು ಸುಸಂಸ್ಕೃತ, ಸೌಮ್ಯ ಸಮಾಜದ ಅಧಿಕಾರಿಯಾಗಿದ್ದಾನೆ !