ಮಂಗಳೂರಿನ ಯೂತ್ ಆಫ್ ಜಿ.ಎಸ್.ಬಿ.ಯುಟ್ಯೂಬ್ ಚಾನೆಲ್‌ನಲ್ಲಿ ಧರ್ಮೋ ರಕ್ಷತಿ ರಕ್ಷಿತಃ ಎಂಬ ಕೊಂಕಣಿ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಹಭಾಗ

ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಜವಾಬ್ದಾರ ಸಮಾಜವು ಮುಂದೆ ಬರಬೇಕು ! – ಸೌ. ಲಕ್ಷ್ಮಿ ಪೈ, ಸನಾತನ ಸಂಸ್ಥೆ

ಮಂಗಳೂರು – ಇಂದಿನ ಸಮಾಜದಲ್ಲಿ ಹಿಂದೂಗಳು ಧರ್ಮಶಿಕ್ಷಣದ ಅಭಾವದಿಂದ ಧರ್ಮಾಚರಣೆಯಿಂದ ದೂರ ಹೋಗಿರುವುದು ಗಮನಕ್ಕೆ ಬರುತ್ತದೆ, ಜಾತ್ಯತೀತ ಆಡಳಿತ ಪದ್ಧತಿಯಿಂದ ನಮ್ಮ ವಿದ್ಯಾಭ್ಯಾಸ ಪದ್ಧತಿಯಿಂದ ಧರ್ಮವನ್ನು ತೆಗೆದುಹಾಕಲಾಗಿದೆ. ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ಕೊಡುವ ವ್ಯವಸ್ಥೆ ಇಲ್ಲದಿರುವುದರಿಂದ ಇಡೀ ಹಿಂದೂ ಸಮಾಜ ಇದರ ದುಷ್ಪರಿಣಾಮಗಳನ್ನು ಎದುರಿಸುತ್ತಿದೆ, ಎಂದು ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈಯವರು ಪ್ರತಿಪಾದಿಸಿದ್ದಾರೆ. ಅವರು ಮಂಗಳೂರಿನ ಯೂತ್ ಆಫ್ ಜಿ.ಎಸ್.ಬಿ. ಯುಟ್ಯೂಬ್ ಚಾನೆಲ್‌ನಲ್ಲಿ ಡಿಸೆಂಬರ್ ೩ ರಂದು ಆಯೋಜಿಸಲಾಗಿದ್ದ ‘ಧರ್ಮೋ ರಕ್ಷತಿ ರಕ್ಷಿತಃ ಎಂಬ ಕೊಂಕಣಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಬೋಧನ ಸಂಯೋಜಕರಾದ ಶ್ರೀ. ಪ್ರಕಾಶ ಪೈ ಇವರು ಮಾರ್ಗದರ್ಶನ ಮಾಡಿದರೆ ಶ್ರೀ. ಗೋಪಾಲಕೃಷ್ಣ ಭಟ್ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಸೌ. ಲಕ್ಷ್ಮೀ ಪೈಯವರು ತಮ್ಮ ಮಾತನ್ನು ಮುಂದುರಿಸುತ್ತಾ, ‘ಇವತ್ತು ಯುವಜನತೆ ನಮ್ಮ ಧಾರ್ಮಿಕ ಆಚರಣೆಗಳ ಬಗ್ಗೆ ಪ್ರಶ್ನಿಸುತ್ತಿದೆ. ಅವರಿಗೆ ಸೂಕ್ತ ಉತ್ತರ ಕೊಡುವವರು ಇಲ್ಲದಂತಾಗಿದೆ. ಪರಿಣಾಮವಾಗಿ ನಾಸ್ತಿಕವಾದ, ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಹೆಚ್ಚಾಗುತ್ತಿದೆ. ಈಗಲೂ ಕಾಲ ಮಿಂಚಿಲ್ಲ. ಜವಾಬ್ದಾರ ನಾಗರಿಕರಾಗಿ ನಾವೆಲ್ಲರೂ ಎಚ್ಚೆತ್ತುಕೊಂಡು ಧರ್ಮಶಿಕ್ಷಣವನ್ನು ನೀಡಿ ಸಮಾಜಕ್ಕೆ ಯೋಗ್ಯ ದಿಶೆಯನ್ನು ಕೊಡಬೇಕಾಗಿದೆ. ನಾವೆಲ್ಲರೂ ಈ ನಿಟ್ಟಿನಲ್ಲಿ ಕೃತಿಶೀಲರಾಗಬೇಕು, ಎಂದು ಕರೆ ನೀಡಿದರು..

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ. ಪ್ರಕಾಶ ಪೈ ಅವರು ತಮ್ಮ ವಿಚಾರವನ್ನು ಮಂಡಿಸುತ್ತಾ ಪ್ರತಿಯೊಬ್ಬ ಹಿಂದೂ ತನ್ನ ಧರ್ಮಕರ್ತವ್ಯವನ್ನು ಯೋಗ್ಯ ರೀತಿಯಲ್ಲಿ ನಿಭಾಯಿಸಿದರೆ ಸಮಾಜದಲ್ಲಿ ಸುಧಾರಣೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೈಶಿಷ್ಟ್ಯ

೧. ಈ ಕಾರ್ಯಕ್ರಮವನ್ನು ೫೭೦೦ ಮಂದಿ ಲೈವ್ ವೀಕ್ಷಣೆ ಮಾಡಿದ್ದಾರೆ ಮತ್ತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

೨. ಕಾರ್ಯಕ್ರಮ ನೋಡಿದ ಓರ್ವ ಧರ್ಮಪ್ರೇಮಿ ಕೂಡಲೇ ಸಂಪರ್ಕಿಸಿ ಕೊಂಕಣಿ ಭಾಷೆಯ ಧರ್ಮಶಿಕ್ಷಣಕ್ಕೆ ಬೇಡಿಕೆ ನೀಡಿದ್ದಾರೆ ಹಾಗೂ ಒಂದು ಪ್ರವಚನದ ಆಯೋಜನೆ ಮಾಡಿದ್ದಾರೆ.