ಪುಸ್ತಕದ ಜ್ಞಾನ ಆಚರಣೆಗೆ ತರದಿದ್ದರೆ ಅದು ವ್ಯರ್ಥವಾಗುತ್ತದೆ

ಬ್ರಹ್ಮಚೈತನ್ಯ ಗೋಂದವಲೆಕರ ಮಹಾರಾಜರು

ಬಹಳಷ್ಟು ಸಲ ವಿದ್ಯೆಯು ಮನುಷ್ಯನನ್ನು ಭಗವಂತನಿಂದ ದೂರ ಒಯ್ಯುತ್ತದೆ. ಏನು ಅರಿಯದ ವಾರಕರಿ ಪಂಥದ ಜನರು ‘ವಿಠ್ಠಲ ವಿಠ್ಠಲ’ ಎನ್ನುತ್ತಾ ಭಗವಂತನನ್ನು ಗುರುತಿಸುತ್ತಾರೆ, ಆದರೆ ಜಾಣರು ಪರಮಾರ್ಥದ ಪುಸ್ತಕಗಳನ್ನು ಓದಿಯೂ ಅವನನ್ನು ಗುರುತಿಸುವುದಿಲ್ಲ. ಮನೆಯಲ್ಲಿ ಬಾದಾಮಿ ಮತ್ತು ಒಣ ಖರ್ಜೂರದಿಂದ ತುಂಬಿದ ಗೋಣಿ ಚೀಲಗಳಿದ್ದರೂ, ಎಲ್ಲಿಯವರೆಗೆ ಆ ಪದಾರ್ಥಗಳು ಮೂಳೆ ಮಾಂಸದೊಳಗೆ ಹೋಗಿ ರಕ್ತದಲ್ಲಿ ಬೆರೆಯುವುದಿಲ್ಲವೋ, ಅಲ್ಲಿಯವರೆಗೆ ಅವುಗಳ ಉಪಯೋಗವಿಲ್ಲ. ಅದರಂತೆ ಪುಸ್ತಕದ ಜ್ಞಾನವನ್ನು ಆಚರಣೆಗೆ ತರದಿದ್ದರೆ ಅದು ವ್ಯರ್ಥವಾಗುತ್ತದೆ.

– ಬ್ರಹ್ಮ ಚೈತನ್ಯ ಗೋಂದವಲೇಕರ ಮಹಾರಾಜ

(ಪೂ. ಪ್ರಾ. ಕೆ. ವಿ. ಬೆಲಸರೆ – ಆಧಾರ: ಆಧ್ಯಾತ್ಮಿಕ ಸಾಹಿತ್ಯ ಈ ಫೇಸ್‌ಬುಕ್‌ನಿಂದ )