ಸ್ವಾವಲಂಬಿ ವ್ಯಕ್ತಿಯು ಎಷ್ಟು ಸುಖಿ ಮತ್ತು ಪ್ರಸನ್ನನಾಗಿರುತ್ತಾನೆಯೋ, ಅಷ್ಟು ಪರಾವಲಂಬಿ ವ್ಯಕ್ತಿಯು ಪ್ರಸನ್ನನ್ನಾಗಿರಲು ಸಾಧ್ಯವಿಲ್ಲ. ಅಜ್ಞಾನದಿಂದ ವ್ಯಕ್ತಿಗೆ, ‘ನನಗೆ ದೊಡ್ಡ ಅಧಿಕಾರ ಸಿಕ್ಕಿದರೆ ಅಥವಾ ಬಹಳಷ್ಟು ಸಂಪತ್ತು ಸಿಕ್ಕಿದ್ದರೆ, ನಾನು ಸುಖಿಯಾಗುವೆನು ಎಂದು ಅನಿಸುತ್ತದೆ, ಆದರೆ ಅವನ ವೈಭವ ಹೆಚ್ಚಾದಂತೆ, ಅವನ ಜೀವನದಲ್ಲಿ ಪರಾಧೀನತೆ, ಭಯ, ರೋಗ, ಭೋಗದ-ಆಸಕ್ತಿ, ಕಠೋರತೆ ಇತ್ಯಾದಿ ಹೆಚ್ಚಾಗುತ್ತವೆ ಮತ್ತು ಇವೇ ದು:ಖದ ಕಾರಣಗಳಾಗಿವೆ.
– ಬ್ರಹ್ಮಲೀನ ಶ್ರದ್ಧೇಯ ಸ್ವಾಮಿ ಶ್ರೀಶರಣಾನಂದಜೀ ಮಹಾರಾಜ ಇವರ ಪ್ರವಚನದಿಂದ ಸಂಗ್ರಹಿಸಿದ (ಆಧಾರ: ಮಾಸಿಕ ‘ಕಲ್ಯಾಣ’ ಫೆಬ್ರುವರಿ ೨೦೨೨)
ಸಂತರು ಸಂಸಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಭಗವಂತ ನೊಂದಿಗೆ ಅನುಸಂಧಾನದಲ್ಲಿ ಇರುತ್ತಾರೆ. ಸಂತರಲ್ಲಿ ನಾಮದ ಆನಂದ ಎಷ್ಟಿದೆ ಅಂದರೆ ಅದರಲ್ಲಿ ಎಲ್ಲ ದುಃಖಗಳು ಕರಗಿ ಹೋಗುತ್ತವೆ. ನಮಗೆ ವಿಷಯದ ಸುಖ ಎಷ್ಟಿರುತ್ತದೆ ಎಂದರೆ ಭಗವಂತ ಅದರಲ್ಲಿ ಕರಗಿ ಹೋಗುತ್ತಾನೆ – ವಿ.ಶ್ರೀ. ಕಾಕಡೆ |