
ಉಕಸಾನ ಎಂಬ ಹಳ್ಳಿಯಲ್ಲಿ ಓರ್ವ ವ್ಯಕ್ತಿಗೆ ಮಹಾರೋಗವಾಗಿತ್ತು. ಅವನಿಗೆ ಯೋಗಾಯೋಗದಿಂದ ಶ್ರೀಮಹಾರಾಜರು (ಬ್ರಹ್ಮಚೈತನ್ಯ ಗೋಂದಾವಲೆಕರ ಮಹಾರಾಜ) ಭೇಟಿಯಾದರು. ಶ್ರೀಮಹಾರಾಜರು ಅವನಿಂದ ಮೂರೂವರೆ ಕೋಟಿ ಜಪದ ಸಂಕಲ್ಪವನ್ನು ಮಾಡಿಸಿಕೊಂಡರು ಮತ್ತು ಗೋಂದಾವಲೆಯಲ್ಲಿ ವಾಸಿಸಲು ಹೇಳಿದರು. ಅವನು ೬ ವರ್ಷದಲ್ಲಿ ಆ ಜಪ ಸಂಖ್ಯೆಯನ್ನು ಪೂರ್ಣಗೊಳಿಸಿದನು. ಜಪ ಪೂರ್ಣ ಆಗುತ್ತಿದ್ದಂತೆಯೇ ಆ ವ್ಯಕ್ತಿಯ ರೋಗವು ಬೇಗನೆ ಕಡಿಮೆಯಾಗಲು ಆರಂಭವಾಯಿತು. ತಾನು ಈಗ ‘ಬೇಗನೇ ರೋಗ ಮುಕ್ತವಾಗುವೆನು’ ಎಂದು ಅವನಿಗೆ ಅನಿಸತೊಡಗಿತು. ಒಂದು ದಿನ ಅವನು ಮಹಾರಾಜರಿಗೆ ಮುಂದಿನಂತೆ ಹೇಳಿದ, ‘ಮಹಾರಾಜರೇ, ನಿಮ್ಮ ಕೃಪೆಯಿಂದ ನಾನು ಈಗ ಸಂಪೂರ್ಣವಾಗಿ ರೋಗ ಮುಕ್ತನಾಗುವೆನು, ಆದರೆ ಮೂರೂವರೆ ಕೋಟಿ ಜಪದಿಂದ ದೊರಕಿದ ಪುಣ್ಯವನ್ನು ಖರ್ಚು ಮಾಡಿ ನನ್ನ ರೋಗವನ್ನು ಸರಿ ಮಾಡುವುದು ಬೇಡ, ನನ್ನ ದೇಹದ ಭೋಗವನ್ನು ಭೋಗಿಸಿ ಮುಗಿಸಲು ನಾನು ಸಿದ್ಧನಾಗಿದ್ದೇನೆ.’ ಅವನ ಈ ಮಾತುಗಳನ್ನು ಕೇಳಿ ಶ್ರೀ ಮಹಾರಾಜರು ತುಂಬಾ ಪ್ರಸನ್ನರಾದರು ಮತ್ತು ಅವರು ‘ನಾಮಸ್ಮರಣೆಯಿಂದ ಮನುಷ್ಯನ ವೃತ್ತಿಯಲ್ಲಿ ಅಮೂಲಾಗ್ರ ಬದಲಾವಣೆ ಆಗುತ್ತದೆ ಮತ್ತು ಅವನಿಗೆ ವೈರಾಗ್ಯ ಪ್ರಾಪ್ತವಾಗುತ್ತದೆ, ಇದು ಅದರ ಜ್ವಲಂತ ಉದಾಹರಣೆಯಾಗಿದೆ. ಶ್ರೀ ಮಹಾರಾಜರು ಆ ವ್ಯಕ್ತಿಯ ಕಡೆ ತಿರುಗಿ ‘ಒಳ್ಳೆಯ ರೀತಿಯಿಂದ ನೌಕರಿ ಮಾಡಿದರೆ ದೀಪಾವಳಿ ಸಮಯದಲ್ಲಿ ಸಂಬಳ ಹೆಚ್ಚಿಸುವುದರೊಂದಿಗೆ ‘ಮಾಲಿಕನು ಕೆಲವು ಬೋನಸ್‌ಗಳನ್ನು ಕೂಡ ಕೊಡುತ್ತಾನೆ’ ಹಾಗೆಯೇ ನಿನ್ನ ಈ ಉಪಾಸನೆಗೆ ರಾಮ ಪ್ರಸನ್ನನಾಗಿ ದೀಪಾವಳಿಗೆ ಬೋನಸ್ ಎಂದು ನಿನ್ನನ್ನು ರೋಗಮುಕ್ತಗೊಳಿಸುತ್ತಾನೆ. ಅದನ್ನು ಆನಂದದಿಂದ ಸ್ವೀಕರಿಸಬೇಕು. ನಾಮಸ್ಮರಣೆಯಿಂದ ಸಂಪಾದಿಸಿದ ಪುಣ್ಯವು ಸಂಪೂರ್ಣವಾಗಿ ಹಾಗೆಯೇ ಉಳಿಯುವುದು’ ಎಂದರು.
(ಆಧಾರ : ಶ್ರೀಬ್ರಹ್ಮಚೈತನ್ಯ ಗೊಂದಾವಲೆಕರ ಮಹಾರಾಜ ಇವರ ‘ಹೃದ್ಯ ಆಠವಣೀ’, ಈ ಮರಾಠಿ ಪುಸ್ತದಿಂದ; ಲೇಖಕ : ಲ.ಗ. ಮರಾಠೆ)