೧. ಸಂತರನ್ನು ಜನರು ಪ್ರೀತಿಸುತ್ತಾರೆ; ಏಕೆಂದರೆ ಅವರ ದೇಹವು ಪ್ರೇಮಮಯವಾಗಿರುತ್ತದೆ. ಸಂತರ ದೇಹವು ಮೃದುವಾಗಿರುತ್ತದೆ; ಏಕೆಂದರೆ ಅವರ ಮನಸ್ಸಿನ ಮೃದುತ್ವವು ಪರಾಕಾಷ್ಠೆಯಾಗಿರುತ್ತದೆ.
೨. ವೇದಾಂತದ ಮೇಲೆ ಚರ್ಚೆ ಮಾಡಲು ಸಾಧ್ಯವಾಯಿತು ‘ವೇದಗಳ ಅರಿವಾಯಿತು’ ಎಂದು ಅನಿಸಿದರೂ, ದೇಹಬುದ್ಧಿಯ ಹೆಮ್ಮೆ ಪಡಬಾರದು: ಏಕೆಂದರೆ ವೇದವು ಈಶ್ವರನ ನಿರ್ಮಿತಿ ಆಗಿದೆ ಮತ್ತು ಅರಿವು ಮಾಡಿಕೊಡುವ ಪ್ರಕ್ರಿಯೆ ಕೂಡ ಈಶ್ವರನೇ ಮಾಡುತ್ತಾನೆ.
೩. ಅತಿಯಾಗಿ ಓದುವುದರಿಂದ ಆತ್ಮವು ರಕ್ತರಂಜಿತವಾಗುತ್ತದೆ.
೪. ಸ್ವಾಮಿಗಳ ಚರಣಗಳನ್ನು ಧೃಢವಾಗಿ ಹಿಡಿದರೆ ವ್ಯವಹಾರದಲ್ಲಿನ ದುಃಖವು ನಾಶವಾಗಿ ಇನ್ಯಾರ ಚರಣಗಳನ್ನು ಹಿಡಿಯಬೇಕಾಗುವುದಿಲ್ಲ.
೫. ಸಗುಣವು ನಿರ್ಗುಣಕ್ಕಾಗಿದೆ ಮತ್ತು ನಿರ್ಗುಣವು ಸಗುಣಕ್ಕಾಗಿದೆ. ಒಟ್ಟು ಸಗುಣ ಮತ್ತು ನಿರ್ಗುಣದ ಸಂದರ್ಭದಲ್ಲಿ ಮಾಡಿದ ಪ್ರಯತ್ನಗಳಿಂದ ಶೂನ್ಯತೆಯ ಅನುಭವ ಬರುತ್ತದೆ.
– ಪ್ರೊ. ಗುರುನಾಥ ವಿಶ್ವನಾಥ ಮುಂಗಳೆ, ಕೊಲ್ಲಾಪುರ (‘ಗುರುಬೋಧ’)
ಯಾರು ಜಾಣರು ?‘ಮಾಯೆಯ ಅರಿವಾದಾಗ (ಜ್ಞಾನವಾದಾಗ), ಬುದ್ಧಿಯ ದರ್ಪವು ಕೊನೆಗೊಳ್ಳುತ್ತದೆ, ಕಾರ್ಯಕಾರಣಭಾವವು ಅದೃಶ್ಯವಾಗು ತ್ತದೆ ಮತ್ತು ಆ ವ್ಯಕ್ತಿಯು ವಿನಮ್ರನಾಗುತ್ತಾನೆ. ‘ನಾವು ಅಸಹಾಯಕರು ಹಾಗೂ ಅಜ್ಞಾನಿಗಳು’, ಎಂಬ ಅರಿವನ್ನು ಸದಾ ಜಾಗೃತವಾಗಿಟ್ಟುಕೊಂಡು ಶಾಸ್ತ್ರದ ಪ್ರಕಾರ ನಿರಂತರವಾಗಿ ಆಚರಿಸುವುದನ್ನೇ ಜಾಣ್ಮೆ ಎನ್ನುತ್ತಾರೆ. ಹೀಗೆ ವರ್ತಿಸುವವನು ಚಾಂಡಾಲನಾಗಿದ್ದರೂ ಪೂಜ್ಯನಾಗುತ್ತಾನೆ.’ – ಗುರುದೇವ ಡಾ. ಕಾಟೆಸ್ವಾಮಿಜಿ (ಸಂಗ್ರಹ : ಮಾಸಿಕ ‘ಘನಗರ್ಜಿತ’, ಜುಲೈ ೨೦೨೧) |