ಸ್ವಾಮಿ ವಿವೇಕಾನಂದರ ಬೋಧನೆ
ಮನುಷ್ಯನು ಪ್ರಕೃತಿಯ ಮುಂದೆ ಹೋಗುವ ಪ್ರಯತ್ನವನ್ನು ಮಾಡುತ್ತಿರುವ ತನಕ ಅವನು ಮನುಷ್ಯನಾಗಿರುತ್ತಾನೆ. ಈ ಪ್ರಕೃತಿ ‘ಬಾಹ್ಯ’ ಅಂದರೆ ಹೊರಗಿನ ಹಾಗೂ ‘ಅಂತರ್’ ಅಂದರೆ ಒಳಗಿನ ಎಂಬ ಎರಡು ವಿಧದ್ದಾಗಿದೆ. ಬಾಹ್ಯ ಪ್ರಕೃತಿ ಜಯಿಸುವುದು ಒಳ್ಳೆಯ ಹಾಗೂ ದೊಡ್ಡ ಗೌರವದ ವಿಷಯವಾಗಿದೆ ಆದರೆ ಅಂತಃಪ್ರಕೃತಿ ಅಂದರೆ ಒಳ ಪ್ರಕೃತಿಯನ್ನು ಜಯಿಸುವುದು ಅದಕ್ಕಿಂತಲೂ ಹೆಚ್ಚು ಗೌರವದ ವಿಷಯವಾಗಿದೆ. ಆಕಾಶದಲ್ಲಿನ ನಕ್ಷತ್ರಗಳು ಹಾಗೂ ಗ್ರಹಗಳು ದೊಡ್ಡ ವಿಷಯವಾಗಿದೆ ಆದರೆ ಮನುಕುಲದ ಬಯಕೆಗಳ, ಭಾವನೆಗಳ ಹಾಗೂ ಇಚ್ಛಾಶಕ್ತಿಗಳನ್ನು ನಡೆಸುವವನ ಬಗೆಗಿನ ಜ್ಞಾನವನ್ನು ಗಳಿಸುವುದು ಇದು ಅದಕ್ಕಿಂತಲೂ ಹೆಚ್ಚಿನ ಒಳ್ಳೆಯ ಹಾಗೂ ದೊಡ್ಡ ಕಾರ್ಯವಾಗಿದೆ. (ಕೃಪೆ : ‘ಸ್ವಾಮಿ ವಿವೇಕಾನಂದರು ಹೇಳುತ್ತಾರೆ’, ರಾಮಕೃಷ್ಣ ಮಠ, ನಾಗಪುರ.)
ಮನುಷ್ಯಜನ್ಮದ ಮಹತ್ವ
ನೀವು ಜನ್ಮಕ್ಕೆ ಬಂದಿದ್ದೀರಿ. ಹಾಗಿರುವಾಗ ಭೂಮಿಯ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ ಅಥವಾ ಏನಾದರೂ ಮಹತ್ವದ ಕಾರ್ಯವನ್ನು ಮಾಡಿ ಹೋಗಿ. ಇಲ್ಲದಿದ್ದರೆ ನಿವಗೂ ಮತ್ತು ಮರ ಹಾಗೂ ಕಲ್ಲು ಇವುಗಳಿಗೂ ಏನು ವ್ಯತ್ಯಾಸವಿದೆ ? ಅದು ಕೂಡ ಅಸ್ತಿತ್ವಕ್ಕೆ ಬರುತ್ತದೆ, ಸವೆಯುತ್ತದೆ ಹಾಗೂ ಕೊನೆಗೆ ನಷ್ಟವಾಗುತ್ತದೆ.
(ಕೃಪೆ : ‘ಸ್ವಾಮಿ ವಿವೇಕಾನಂದರು ಹೇಳುತ್ತಾರೆ’, ರಾಮಕೃಷ್ಣ ಮಠ, ನಾಗಪುರ.)