ಗುರುಬೋಧ

ಪ್ರಶ್ನೆಗಳು ಮುಗಿಯುವುದೆಂದಿಲ್ಲ; ಏಕೆಂದರೆ ದೇಹವೇ ಒಂದು ದೊಡ್ಡ ಪಶ್ನಾರ್ಥಕ ಚಿಹ್ನೆಯಾಗಿದೆ. ಹೇಗೆ, ಯಾವಾಗ, ಏಕೆ ಮತ್ತು ಎಲ್ಲಿ (How, When, Why and Where) ಈ ಶಬ್ದಗಳ ಆಧಾರದಲ್ಲಿ ಮನುಷ್ಯನು ಕರ್ಮ ನಡೆಸುತ್ತಾ ಇರುತ್ತಾನೆ. ಅದರಿಂದ ವಿಚಾರ ಆರೋಗ್ಯಕರ, ಅಂದರೆ ಆತ್ಮಲೀನವಾಗುವುದಿಲ್ಲ. ಅಂತಃಕರಣಕ್ಕೆ ಸ್ಥೈರ್ಯ ಪ್ರಾಪ್ತವಾಗುವುದಿಲ್ಲ. ಸಂಘರ್ಷವು ಮುಗಿಯುವುದಿಲ್ಲ. ಅತೃಪ್ತಿಯು ಸದಾ ಕಾಲ ಮನುಷ್ಯನಲ್ಲಿರುತ್ತದೆ. ಸಂತರ ಬಳಿ ಸದಾ ಕಾಲ ಆನಂದವಿರುತ್ತದೆ; ಏಕೆಂದರೆ ಆನಂದ ನಿಜವಾಗಿಯೂ ಎಲ್ಲಿ ಇರುತ್ತದೆ ಎಂಬುದು ಅವರಿಗೆ ತಿಳಿದಿರುತ್ತದೆ.

– ಪ್ರೊ. ಗುರುನಾಥ ವಿಶ್ವನಾಥ ಮುಂಗಳೆ