ಆತ್ಮಸಾಕ್ಷಾತ್ಕಾರವಿಲ್ಲದೆ ಮತ್ತು ಭಗವಂತನ ಕೃಪೆಯಿಲ್ಲದೆ ಸೂಕ್ಷ್ಮದೇಹ ಮತ್ತು ವಾಸನಾದೇಹಗಳ ವಿಸರ್ಜನೆ ಆಗದು !

‘ಮೃತ್ಯುವಾದಾಗ, ಸೂಕ್ಷ್ಮ ದೇಹವು ಹೊರಬರುತ್ತದೆ. ಆಕಾಶ, ವಾಯು ಮತ್ತು ಅಗ್ನಿ ಎಂಬ ಮೂರು ತತ್ತ್ವಗಳಿಂದ ಸೂಕ್ಷ್ಮ ದೇಹವು ರೂಪುಗೊಂಡಿದೆ. ವಾಸನಾ ಇದುವೇ ಅದರ ಜೀವನವಾಗಿದೆ. ವಾಸನಾ ನಾಶವಾದಾಗ ಈ ದೇಹವೂ ಕೊನೆಗೊಳ್ಳುತ್ತದೆ. ಇದೇ ಮುಕ್ತಿಯಾಗಿದೆ ! ಜೀವನದುದ್ದಕ್ಕೂ ಬ್ರಹ್ಮಚಿಂತನೆ ಮಾಡುವ, ಬ್ರಹ್ಮಾನುಭೂತಿ (ಬ್ರಹ್ಮನ ಸಾಕ್ಷಾತ್ಕಾರ)   ಪಡೆದ ಜೀವನ್ಮುಕ್ತ (ಬಂಧನದಿಂದ ಮುಕ್ತನಾದವನು)ನಾಗಿ ಸಾಯುತ್ತಾನೆ. ಅವನ ದೇಹ ಬೀಳುತ್ತದೆ. ವಾಸನಾ ಇದು ಉಳಿದಿಲ್ಲದ ಕಾರಣ ವಾಸನಾದೇಹವು, ಅಂದರೆ ‘ಅತಿವಾಹಕ ದೇಹವೂ’ ಉಳಿಯುವುದಿಲ್ಲ. ಅವನ ಸೂಕ್ಷ್ಮ ದೇಹವೂ ವಿಲೀನವಾಗುತ್ತದೆ. ಅವನು ಎಲ್ಲಿಗೂ ಹೋಗುವುದಿಲ್ಲ, ಇಲ್ಲಿಯೇ ವಿರಾಟ ಅಸ್ತಿತ್ವದೊಂದಿಗೆ ಏಕರೂಪವಾಗುತ್ತಾನೆ. ವಾಸನಾ ಇರುವವರ ಸೂಕ್ಷ್ಮ ದೇಹವು ಮರಣದ ನಂತರ ದೇಹದಿಂದ ಹೊರಬರುತ್ತದೆ. ಅದರ ಸೂಕ್ಷ್ಮ ದೇಹವು ಮರಣದ ನಂತರ ದೇಹದಿಂದ ಹೊರಬರುತ್ತದೆ. ಸೂಕ್ಷ್ಮ ದೇಹ (ಲಿಂಗದೇಹ ಅಥವಾ ವಾಸನಾ ದೇಹ) ಇರುವವರೆಗೆ, ಅದು ಹೊಸ ಹೊಸ ದೇಹಗಳನ್ನು ಧರಿಸುತ್ತದೆ. ಜನ್ಮ ಜನ್ಮಾಂತರ ಅಲೆದಾಡುತ್ತದೆ.

ಆತ್ಮಸಾಕ್ಷಾತ್ಕಾರವಿಲ್ಲದೆ ಮತ್ತು ಭಗವಂತನ ಕೃಪೆ ಇಲ್ಲದೆ ಸೂಕ್ಷ್ಮ ದೇಹಗಳು, ವಾಸನಾ ದೇಹಗಳು ಇವುಗಳ ವಿಸರ್ಜನೆಯು ಆಗುವುದಿಲ್ಲ. ಅಲ್ಲಿಯವರೆಗೆ ಸ್ವಸ್ಥತೆಯೂ ಇಲ್ಲ, ಶಾಂತಿಯೂ ಇಲ್ಲ, ಮುಕ್ತಿಯೂ ಇಲ್ಲ !

(ಸೌಜನ್ಯ : ಮಾಸಿಕ ‘ಘನಗರ್ಜಿತ’ ಡಿಸೆಂಬರ್‌ ೨೦೨೨)