ಕರ್ನಾಟಕದಲ್ಲಿ, ಆರ್ಥಿಕವಾಗಿ ದುರ್ಬಲರಾಗಿರುವ ಸ್ವಜಾತಿಯ ಅರ್ಚಕನನ್ನು ಮದುವೆಯಾಗುವ ಬ್ರಾಹ್ಮಣ ವಧುಗೆ ೩ ಲಕ್ಷ ರೂಪಾಯಿಯ ಆರ್ಥಿಕ ಸಹಾಯ ಸಿಗಲಿದೆ

ರಾಜ್ಯದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಬ್ರಾಹ್ಮಣ ಸಮುದಾಯದ ಹುಡುಗಿಯರಿಗಾಗಿ ‘ಅರುಂಧತಿ’ ಮತ್ತು ‘ಮೈತ್ರೇಯಿ’ ಎಂಬ ಹೆಸರಿನ ಎರಡು ಯೋಜನೆಗಳನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಬ್ರಾಹ್ಮಣ ಸಮುದಾಯದ, ಆರ್ಥಿಕವಾಗಿ ದುರ್ಬಲ ವರ್ಗದ ಹುಡುಗಿಯರಿಗೆ ಆರ್ಥಿಕ ನೆರವು ಸಿಗಲಿದೆ.

ಅಭಿವೃದ್ಧಿಯ(ವಿಕಾಸದ) ಬಗ್ಗೆ ಪ್ರಶ್ನೆಯನ್ನು ವಿಚಾರಿಸಿದ ಆಗದಿರುವ ಬಗ್ಗೆ ಗ್ರಾಮಪಂಚಾಯತಿ ಸದಸ್ಯನನ್ನು ವೇದಿಕೆಯಿಂದ ಕೆಳದಬ್ಬಿದ (ದೂಡಿದ) ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ!

ಗ್ರಾಮಪಂಚಾಯತಿಯ ನೂತನ ಸದಸ್ಯನು ರಾಜ್ಯದ ವಿಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ‘ಸಿದ್ಧರಾಮಯ್ಯರವರು ನಮ್ಮೂರಿಗೆ ಬಂದುಹೋದರೂ ನಮ್ಮ ಊರಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದೊಡನೆ ಸಿಟ್ಟುಗೊಂಡ ಸಿದ್ಧರಾಮಯ್ಯರವರು ಆತನನ್ನು ವೇದಿಕೆಯಿಂದ ಕೆಳಗೆ ದೂಡಿದರು.

ಕೇಂದ್ರ ಸರಕಾರದ ಪ್ರಾಧಿಕಾರವು ‘ಹಲಾಲ್’ ಪದವನ್ನು ಸರಕಾರಿ ನಿಯಮಗಳಿಂದ ತೆಗೆದುಹಾಕಿದೆ !

ಕೇಂದ್ರ ಸರಕಾರದ ‘ಅಗ್ರಿಕಲ್ಚರಲ್ ಅಂಡ್ ಪ್ರೊಸೆಸ್ಡ್ ಫುಡ್ ಪ್ರೊಡಕ್ಟ್ ಎಕ್ಸಪೋರ್ಟ್ ಡೆವಲಪ್‌ಮೆಂಟ್’ಯು (ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ)ಅಂದರೆ ‘ಆಪೆಡಾ’ವು ತನ್ನ ‘ರೆಡ ಮೀಟ್ ಮ್ಯಾನುಯಲ್’ ನಿಂದ ‘ಹಲಾಲ್’ ಪದವನ್ನೇ ತೆಗೆದುಹಾಕಿದೆ.

ನುಸುಳಿ ಬಂದ ರೊಹಿಂಗ್ಯಾ ವ್ಯಕ್ತಿಯ ಬಂಧನ

ಉತ್ತರಪ್ರದೇಶದ ಉಗ್ರ ನಿಗ್ರಹ ದಳವು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ದಾಳಿ ನಡೆಸಿ ಮ್ಯಾನ್ಮಾರ್‌ನ ನಿವಾಸಿ, ರೋಹಿಂಗ್ಯಾ ಮುಸ್ಲಿಂ ವ್ಯಕ್ತಿ ಅಜೀಜುಲ್ಲಾ ಹಕ್ ಅಲಿಯಾಸ್ ಅಜೀಜುಲ್ಲಾಹನನ್ನು ಖಲೀಲಾಬಾದ್‌ನಿಂದ ಬಂಧಿಸಿದೆ. ಅವನ ಬಳಿ ೨ ನಕಲಿ ಭಾರತೀಯ ಪಾಸ್‌ಪೋರ್ಟ್‌ಗಳು, ೩ ಆಧಾರ್ ಕಾರ್ಡ್‌ಗಳು, ೧ ಪ್ಯಾನ್ ಕಾರ್ಡ್, ೫ ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ಇತರ ದಾಖಲೆಗಳು ಪತ್ತೆಯಾಗಿವೆ.

೨೦೦೮ ರಲ್ಲಿ ನಡೆದ ಮಾಲೆಗಾಂವ್ ಬಾಂಬ್ ಸ್ಫೋಟದ ಸಂಚಿನ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೆ ! – ಲೆ. ಕರ್ನಲ್ ಪ್ರಸಾದ ಶ್ರೀಕಾಂತ ಪುರೋಹಿತ

೨೦೦೮ ರಲ್ಲಿ ಮಾಲೆಗಾಂವ್ ಬಾಂಬ್ ಸ್ಫೋಟದ ಸಂಚಿನ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ನಾನು ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೆ, ಎಂಬ ವಾದವನ್ನು ಈ ಪ್ರಕರಣದ ಆರೋಪಿ ಲೆ. ಕರ್ನಲ ಪ್ರಸಾದ ಶ್ರೀಕಾಂತ ಪುರೋಹಿತ ಇವರ ವತಿಯಿಂದ ಉಚ್ಚ ನ್ಯಾಯಾಲಯದಲ್ಲಿ ಮಾಡಲಾಯಿತು. ನ್ಯಾಯಮೂರ್ತಿ ಎಸ್.ಎಸ್. ಶಿಂದೆ ಹಾಗೂ ನ್ಯಾಯಮೂರ್ತಿ ಮಕರಂದ ಕರ್ಣಿಕ ಅವರ ನ್ಯಾಯಪೀಠವು ಪುರೋಹಿತ ಇವರ ಮನವಿಯನ್ನು ಆಲಿಸಿತು.

ಹಿಂದೂ ಜನಜಾಗೃತಿ ಸಮಿತಿಯ ಪ್ರಬೋಧನೆ, ಶ್ರೀ ಹನುಮಂತನ ವಿಡಂಬನೆಗೆ ತಡೆ

ಸ್ಥಳೀಯ ಎಸ್.ಆರ್.ಜೆ. ಎಂಬ ಹೆಸರಿನ ಖಾಸಗಿ ಸಂಸ್ಥೆಯು ಉಪ್ಪಿನ ಪೊಟ್ಟಣದ ಮೇಲೆ ಶ್ರೀ ಹನುಮಂತನ ಚಿತ್ರವನ್ನು ಮುದ್ರಿಸುತ್ತಿತ್ತು. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕಿದಾಗ ‘ಇದರಿಂದ ದೇವತೆಗಳ ಅವಮಾನ ಹೇಗಾಗುತ್ತಿದೆ?’, ಎಂಬುವುದರ ಬಗ್ಗೆ ಪ್ರಬೋಧನೆ ಮಾಡಿದ ನಂತರ ಅವರು ಶ್ರೀ ಹನುಮಂತನ ಚಿತ್ರವನ್ನು ಮುದ್ರಿಸುವುದನ್ನು ನಿಲ್ಲಿಸಲು ಒಪ್ಪಿದರು.

ಒಡಿಶಾದ ದೇವಾಲಯಗಳಲ್ಲಿ ಅಜ್ಞಾತರಿಂದ ದೇವತೆಗಳ ವಿಗ್ರಹಗಳ ಧ್ವಂಸ !

ಒಡಿಶಾ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ರಾಯಗಡ ಜಿಲ್ಲೆಯ ಹುಕುಮಾಟೊಲಾ ಗ್ರಾಮದಲ್ಲಿರುವ ಭಗವಾನ ರಾಮೇಶ್ವರ ಮಹಾದೇವ ದೇವಸ್ಥಾನದಲ್ಲಿ ಅಪರಿಚಿತ ವ್ಯಕ್ತಿಗಳು ಶ್ರೀ ಸರಸ್ವತಿ ದೇವಿ, ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ವೃಂದಾವತಿ ದೇವಿ ವಿಗ್ರಹಗಳನ್ನು ಭಗ್ನಗೊಳಿಸಿದ್ದಾರೆ.

ಕೇರಳದಲ್ಲಿ ಭಯೋತ್ಪಾದಕ ತರಬೇತಿ ಕೇಂದ್ರವನ್ನು ನಡೆಸಲು ಪಿ.ಎಫ್.ಐ. ಹಣ ಸಂಗ್ರಹಿಸಿತ್ತು ! – ಈಡಿ ಆರೋಪ

ಕೇರಳದ ಕಣ್ಣೂರು ಜಿಲ್ಲೆಯ ಭಯೋತ್ಪಾದಕ ತರಬೇತಿ ಕೇಂದ್ರಕ್ಕೆ ಹಣಕಾಸು ಒದಗಿಸುವಲ್ಲಿ ಪಾಪ್ಯುಲರ್ ಫ್ರಂಟ್ ಭಾಗಿಯಾಗಿದೆ ಎಂದು ಅದರ ವಿರುದ್ಧದ ಹಣಕಾಸು ದುರುಪಯೋಗದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಈಡಿ) ಹೇಳಿದೆ.

ನಾವೂ ಕೇರಳ ಮುಖ್ಯಮಂತ್ರಿಯ ಗುಲಾಮರಲ್ಲ ! – ಕೇರಳದ ಆರ್ಥೊಡಾಕ್ಸ್ ಚರ್ಚ್‌ನ ಎಚ್ಚರಿಕೆ

ನಾವು ಕೇರಳ ಮುಖ್ಯಮಂತ್ರಿಯ ಗುಲಾಮರಲ್ಲ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚರ್ಚ್‌ನೊಂದಿಗಿನ ವ್ಯವಹಾರದಲ್ಲಿ ಸಭ್ಯರಾಗಿರಬೇಕು ಎಂದು ರಾಜ್ಯದ ಆರ್ಥೊಡಾಕ್ಸ್ ಚರ್ಚ್ ಎಚ್ಚರಿಕೆ ನೀಡಿದೆ. ಆರ್ಥೊಡಾಕ್ಸ್ ಚರ್ಚ್ ಮತ್ತು ಜಾಕೋಬೈಟ್ ಚರ್ಚ್ ನಡುವಿನ ವಿವಾದದ ಬಗ್ಗೆ ಮುಖ್ಯಮಂತ್ರಿ ವಿಜಯನ್ ಒಬ್ಬ ಪಾದ್ರಿಯನ್ನು ಕೇಳಿದ್ದರು.

ತಾಜ್‌ಮಹಲ್‌ನಲ್ಲಿ ಕೇಸರಿ ಧ್ವಜವನ್ನು ಹಾರಿಸುತ್ತಾ ‘ಜೈ ಶ್ರೀರಾಮ’ ಘೋಷಣೆ ಕೂಗಿದ ಹಿಂದೂ ಯುವ ವಾಹಿನಿಯ ಕಾರ್ಯಕರ್ತರು

ಇಲ್ಲಿನ ಪ್ರಸಿದ್ಧ ತಾಜಮಹಲ್ ಪ್ರದೇಶದಲ್ಲಿ ಹಿಂದೂ ಯುವಾ ವಾಹಿನಿಯ ಕಾರ್ಯಕರ್ತರು ಶಿವ ಚಾಲಿಸಾ ಪಠಿಸುತ್ತಾ ಕೇಸರಿ ಧ್ವಜವನ್ನು ಹಾರಿಸಿದರು. ಇಲ್ಲಿ ಕಟ್ಟೆಯ ಮೇಲೆ ಕುಳಿತು ತಮ್ಮ ಜೇಬಿನಿಂದ ಕೇಸರಿ ಧ್ವಜವನ್ನು ತೆಗೆದು ಅದನ್ನು ಹಾರಿಸಿ, ‘ಜೈ ಶ್ರೀರಾಮ’ನ ಘೋಷಣೆಯನ್ನೂ ಕೂಗಿದರು.