ಇಸ್ಲಾಂ ಬಿಟ್ಟು ಹಿಂದೂ ಧರ್ಮವನ್ನು ಸ್ವೀಕಾರ ಮಾಡಿದ ಕುಟುಂಬವನ್ನು ಜೀವಂತವಾಗಿ ಸುಡುವ ಪ್ರಯತ್ನ !

ಸಲೋನ್ ಪ್ರದೇಶದ ರತಾಸೊ ಗ್ರಾಮದ ನಿವಾಸಿ ಮೊಹಮ್ಮದ್ ಅನ್ವರ್ ಅವರು ೨೦೨೦ ರ ಸೆಪ್ಟೆಂಬರ್‌ನಲ್ಲಿ ಸ್ವೇಚ್ಛೆಯಿಂದ ಇಸ್ಲಾಮನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕಾರಿಸಿದ್ದರು. ಅವರು ‘ದೇವ ಪ್ರಕಾಶ ಪಟೇಲ್’ ಎಂದು ಹೆಸರಿಟ್ಟುಕೊಂಡಿದ್ದರು.

ಅಯೋಧ್ಯೆಯ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯವು ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗಲಿದೆ

ಅಯೋಧ್ಯೆಯ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯವು ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗಲಿದೆ. ದೇವಾಲಯದ ನಿರ್ಮಾಣ ಕಾರ್ಯವು ೩ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ತಿಳಿಸಿದೆ.

ಆಂಧ್ರಪ್ರದೇಶದಲ್ಲಿ ಈಗ ಸೀತಾಮಾತೆಯ ವಿಗ್ರಹ ಧ್ವಂಸ !

ಪ್ರತಿದಿನ ಹಿಂದೂಗಳ ದೇವಾಲಯಗಳ ಮೇಲೆ ದಾಳಿ ಮಾಡಿ ವಿಗ್ರಹಗಳನ್ನು ಧ್ವಂಸಗೊಳಿಸುತ್ತಿರುವಾಗ ಕ್ರೈಸ್ತ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಹೇಗೆ ಶಾಂತವಾಗಿರಬಹುದು ?  ಇಂತಹ ಘಟನೆ ಇತರ ಧರ್ಮಗಳ ಪ್ರಾರ್ಥನಾ ಸ್ಥಳಗಳಲ್ಲಿ ನಡೆದಿದ್ದರೆ ಅವರು ಆಕಾಶ ಪಾತಾಳವನ್ನು ಒಂದು ಮಾಡುತ್ತಿದ್ದರು. ಹಿಂದೂಗಳು ಹೆಚ್ಚು ಸಹಿಷ್ಣುಗಳಾಗಿರುವುದರಿಂದ ನಿಷ್ಕ್ರಿಯವಾಗಿರುತ್ತಾರೆ ಮತ್ತು ಆಡಳಿತಗಾರರು ಇದರ ದುರುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ವಿಜಯವಾಡ (ಆಂಧ್ರಪ್ರದೇಶ) – ಸ್ಥಳೀಯ ನೆಹರೂ ಬಸ್ ನಿಲ್ದಾಣದ ಸಮೀಪದಲ್ಲಿರುವ ಸೀತಾರಾಮ ದೇವಸ್ಥಾನದಲ್ಲಿ ಸೀತಾ ಮಾತೆಯ ವಿಗ್ರಹವನ್ನು ಧ್ವಂಸ ಮಾಡಿರುವುದು ಪತ್ತೆಯಾಗಿದೆ. … Read more

ಮಂಗಳೂರಿನಲ್ಲಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಹಿಂದೂ ಧರ್ಮವನ್ನು ಅವಮಾನಿಸುವ ಬರಹದ ನಕಲಿ ನೋಟುಗಳು ಪತ್ತೆ !

ನಗರದ ಕೆಲ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿಯಲ್ಲಿ ಧಾರ್ಮಿಕ ದ್ವೇಷವನ್ನು ಹಬ್ಬಿಸುವ ಮತ್ತು ಅವಹೇಳನಕಾರಿ ಬರಹಗಳನ್ನು ಒಳಗೊಂಡಿರುವ ನಕಲಿ ನೋಟುಗಳು ಮತ್ತು ಗರ್ಭನಿರೋಧಕಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಧಾರ್ಮಿಕ ಸಾಮರಸ್ಯವನ್ನು ಭಂಗಗೊಳಿಸುವ ಪ್ರಯತ್ನ ಎಂದು ಹೇಳಲಾಗುತ್ತದೆ.

ಆಂಧ್ರಪ್ರದೇಶದ ಮತ್ತೊಂದು ದೇವಾಲಯದಲ್ಲಿ ವಿಗ್ರಹಗಳ ಧ್ವಂಸ !

ಕ್ರೈಸ್ತ ಮಿಶನರಿಗಳ ಹಿಡಿತದಲ್ಲಿರುವ ರಾಜಮಂದ್ರಿ ಜಿಲ್ಲೆಯ ವಿಘ್ನೇಶ್ವರ ದೇವಸ್ಥಾನದಲ್ಲಿ ಭಗವಾನ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ವಿಗ್ರಹವನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿರುವ ಘಟನೆ ಡಿಸೆಂಬರ ೩೧ ರ ರಾತ್ರಿ ಸಮಯದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಈ ವಿಗ್ರಹದ ಎರಡೂ ಕೈಗಳು ಕಡಿಯಲಗಿದೆ.

‘ವರ್ಷ 2021 : ಭಾರತ ಮತ್ತು ವಿಶ್ವದ ಮುಂದಿರುವ ಸವಾಲುಗಳು’ ಈ ವಿಷಯದ ಮೇಲೆ ಆನ್‌ಲೈನ್ ವಿಶೇಷ ಚರ್ಚಾಕೂಟ !

ಮುಂಬರುವ ಕಾಲದಲ್ಲಿ ಮೂರನೇ ಮಹಾಯುದ್ಧವಾದರೆ, ಲಭ್ಯವಿರುವ ಭೌತಿಕ ಸಾಧನಸಾಮಗ್ರಿಗಳು ಹಾಗೂ ಸೈನ್ಯಶಕ್ತಿಯ ಆಧಾರದಲ್ಲಿ ಅದಕ್ಕೆ ಪ್ರತ್ಯುತ್ತರ ನೀಡಲು ಭಾರತ ಸಕ್ಷಮವಿದೆ, ಎಂದು ‘ವರ್ಷ 2021 : ಭಾರತ ಮತ್ತು ವಿಶ್ವದ ಮುಂದಿರುವ ಸವಾಲುಗಳು’ ಈ ಚರ್ಚಾಕೂಟದಲ್ಲಿ ತಜ್ಞ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.

‘ಹನುಮಂತನ ಹುಟ್ಟಿದ ದಿನ ನೆನಪಿದ್ದರೆ ಮಾತ್ರ ಜಯಂತಿ ಆಚರಿಸಿ, ಇಲ್ಲದಿದ್ದರೆ ಕೇವಲ ಕೋಳಿ ತಿನ್ನು !(ಅಂತೆ)’

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಿ ಪಕ್ಷದ ನಾಕಯ ಸಿದ್ಧರಾಮಯ್ಯ ಇವರು ಡಿಸೆಂಬರ ೨ ರಂದು ತಮ್ಮ ಮೂಲ ಮನೆಗೆ ಹೋಗಿದ್ದರು. ಅವರು ಅಲ್ಲಿ ಮಾಂಸಾಹಾರ ಸೇವಿಸುತ್ತಿದ್ದರು. ಗ್ರಾಮಸ್ಥರ ಪೈಕಿ ಒಬ್ಬರು ‘ಇಂದು ಹನುಮಂತನ ಜಯಂತಿ ಇದೆ’, ಎಂಬುದನ್ನು ನೆನಪಿಸಿಕೊಟ್ಟರು.

ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡಿದ ಪ್ರಕರಣದಲ್ಲಿ ಪ್ರಾಧ್ಯಾಪಕ ಭಗವಾನ್ ಇವರಿಗೆ ನ್ಯಾಯಾಲಯದಿಂದ ಸಮನ್ಸ ಜಾರಿ

ಹಿಂದೂ ಧರ್ಮವೇ ಇಲ್ಲ. ವೇದ, ಪುರಾಣ, ಸಂಸ್ಕೃತ, ಎಲ್ಲಿಯೂ ಸಹ ಹಿಂದೂ ಶಬ್ದದ ಉಲ್ಲೇಖವಿಲ್ಲ. ಈಗ ಹೇಳುವ ಧರ್ಮವು ವೈದಿಕ ಬ್ರಾಹ್ಮಣರ ಧರ್ಮವಾಗಿದೆ. ಮನುಸ್ಮೃತಿಯಲ್ಲಿ ಶೂದ್ರರು ಬ್ರಾಹ್ಮಣರ ಗುಲಾಮರಾಗಿದ್ದಾರೆ, ವೈಶ್ಯರು ಅವರ ಮಕ್ಕಳು ಎಂದು ಉಲ್ಲೇಖಿಸಲಾಗಿದೆ ಎಂದು ಇದನ್ನು ಸ್ವೀಕರಿಸಬೇಕೇನು ? ಅದನ್ನು ಸ್ವೀಕರಿಸಿದರೆ ಅದು ನಮ್ಮ ಸ್ವಾಭಿಮಾನಕ್ಕೆ ದಕ್ಕೆ(ಅಪಮಾನ).

ದೇಶದಲ್ಲಿ ವಾಸಿಸುವ ಒಂದು ಸಮುದಾಯಕ್ಕೆ ತಾವು ದೇಶಭಕ್ತರೆಂದು ಸಾಬೀತುಪಡಿಸಲು ಆಯುಷ್ಯ ಪೂರ್ತಿ ಕಳೆಯಬೇಕಾಗಿದೆ ! – ಅಸದುದ್ದೀನ್ ಒವೈಸಿ

ಒಂದು ಧರ್ಮದ ಅನುಯಾಯಿಗಳಿಗೆ ತನ್ನಿಂದತಾನೆ ದೇಶಭಕ್ತಿಯ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದ್ದು, ಇನ್ನೋಂದಕ್ಕೆ ‘ಭಾರತದಲ್ಲಿ ವಾಸಿಸಲು ಹಾಗೂ ತಮ್ಮನ್ನು ಭಾರತೀಯರು ಎಂದು ಕರೆಯುವ ಹಕ್ಕಿದೆ’, ಎಂದು ಸಾಬೀತುಪಡಿಸಲು ತಮ್ಮ ಇಡೀ ಜೀವನವನ್ನು ಕಳೆಯಬೇಕಾಗುತ್ತದೆ ಎಂದು ಎಂ.ಐ.ಎಂ.ನ ಅಧ್ಯಕ್ಷ ಹಾಗೂ ಸಂಸದ ಅಸದುದ್ದೀನ್ ಒವೈಸಿಯವರು ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಆಧರಿಸಿ ಟೀಕಿಸಿದ್ದಾರೆ.

ಹಿಂದೂಗಳು ಎಂದಿಗೂ ಭಾರತ ವಿರೋಧಿಗಳಾಗಲು ಸಾಧ್ಯವಿಲ್ಲ ! – ಸರಸಂಘಚಾಲಕ ಡಾ. ಮೋಹನ ಭಾಗವತ್

‘ನನ್ನ ದೇಶಭಕ್ತಿಯ ಉಗಮವು ಧರ್ಮದಿಂದ ಆಗಿದೆ. ನಾನು ಹಿಂದೂ ಆಗಿ ಜನಿಸಿದೆ, ಅಂದರೆ ನಾನು ದೇಶಭಕ್ತನಾಗಿದ್ದೇನೆ. ಅದಕ್ಕಾಗಿ ಬೇರೆ ಏನನ್ನೂ ಮಾಡುವ ಅಗತ್ಯವಿಲ್ಲ’ಎಂದು ಗಾಂಧಿಯವರ ಅಭಿಪ್ರಾಯವಿತ್ತು. ಯಾವುದೇ ಹಿಂದೂ ಭಾರತ ವಿರೋಧಿಯಾಗಲು ಸಾಧ್ಯವಿಲ್ಲ. ಅವನು ಹಿಂದೂ ಆಗಿದ್ದಾನೆ, ಅಂದರೆ ದೇಶಭಕ್ತನಾಗಿದ್ದಾನೆ.