ಒಡಿಶಾದ ದೇವಾಲಯಗಳಲ್ಲಿ ಅಜ್ಞಾತರಿಂದ ದೇವತೆಗಳ ವಿಗ್ರಹಗಳ ಧ್ವಂಸ !

ಜನರಿಂದ ಕ್ರೈಸ್ತ ಮಿಷನರಿಗಳ ಮೇಲೆ ಆರೋಪ

  • ಮೂರ್ತಿಭಂಜನೆ ಆಂಧ್ರಪ್ರದೇಶ ರಾಜ್ಯಕ್ಕೆ ಹತ್ತಿರವಿರುವ ಒಡಿಶಾದ ಗ್ರಾಮದಲ್ಲಿ ನಡೆದಿದೆ. ಕಳೆದ ಒಂದೂವರೆ ವರ್ಷಗಳಿಂದ ಆಂಧ್ರಪ್ರದೇಶದಲ್ಲಿ ಹಿಂದೂಗಳ ದೇವಾಲಯಗಳಲ್ಲಿ ೧೨೦ ಕ್ಕೂ ಹೆಚ್ಚು ವಿಧ್ವಂಸದ ಘಟನೆಗಳು ನಡೆದಿವೆ ಮತ್ತು ಈಗ ಇದು ಒಡಿಶಾಗೆ ಕಾಲಿಟ್ಟಿದೆ ಎಂದು ಕಂಡು ಬರುತ್ತಿದೆ ! ಈಗ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ದೇವಾಲಯಗಳು ಮತ್ತು ಹಿಂದೂ ದೆವತೆಗಳ ವಿಗ್ರಹಗಳನ್ನು ರಕ್ಷಿಸಬೇಕು !
  • ನಿರಂತರವಾಗಿ ಹಿಂದೂಗಳ ದೇವಾಲಯಗಳಲ್ಲಿ ವಿಗ್ರಹಗಳು ಭಗ್ನ ಮಾಡುತ್ತಿದ್ದರೂ ಎಲ್ಲೆಡೆ ಹಿಂದೂಗಳು ಶಾಂತವಾಗಿದ್ದಾರೆ ! ನಿಷೇಧವಿಲ್ಲ ವಿರೋಧವೂ ಇಲ್ಲ ! ಇಂತಹ ನಿಷ್ಕ್ರಿಯ ಹಿಂದೂಗಳನ್ನು ದೇವರು ವಿಪತ್ತು ಬಂದಾಗ ಏಕೆ ಕಾಪಾಡಬೇಕು ?
  • ದೇವಾಲಯಗಳನ್ನು ರಕ್ಷಿಸಲು ಸಾಧ್ಯವಾಗದ ಹಿಂದೂಗಳು ತಮ್ಮ ಮನೆ ಮತ್ತು ದೇಶವನ್ನು ಹೇಗೆ ರಕ್ಷಿಸುವರು ?
ಅಪರಿಚಿತ ವ್ಯಕ್ತಿಗಳು ಭಗ್ನಗೊಳಿಸಿದ ಶ್ರೀ ಸರಸ್ವತಿ ದೇವಿ, ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ವೃಂದಾವತಿ ದೇವಿ ವಿಗ್ರಹಗಳು

ರಾಯಗಡ್ (ಒಡಿಶಾ) – ಒಡಿಶಾ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ರಾಯಗಡ ಜಿಲ್ಲೆಯ ಹುಕುಮಾಟೊಲಾ ಗ್ರಾಮದಲ್ಲಿರುವ ಭಗವಾನ ರಾಮೇಶ್ವರ ಮಹಾದೇವ ದೇವಸ್ಥಾನದಲ್ಲಿ ಅಪರಿಚಿತ ವ್ಯಕ್ತಿಗಳು ಶ್ರೀ ಸರಸ್ವತಿ ದೇವಿ, ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ವೃಂದಾವತಿ ದೇವಿ ವಿಗ್ರಹಗಳನ್ನು ಭಗ್ನಗೊಳಿಸಿದ್ದಾರೆ.

ರಾತ್ರಿಯ ಸಮಯದಲ್ಲಿ ಈ ಘಟನೆ ನಡೆದಿದೆ. ದೇವಾಲಯದ ಅರ್ಚಕರು ಬೆಳಗ್ಗೆ ದೇವಸ್ಥಾನಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ದೇವಾಲಯಗಳಲ್ಲಿನ ಚಿನ್ನದ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ದೇವಾಲಯ ನಿರ್ವಹಣಾ ಸಮಿತಿ ತಿಳಿಸಿದೆ.

(ಈ ಮೇಲಿನ ಚಿತ್ರವನ್ನು ಯಾರ ಭಾವನೆಗಳಿಗೆ ನೋವನ್ನುಂಟುಮಾಡುವ ಉದ್ದೇಶವಾಗಿರದೆ ಕೇವಲ ನಿಜವಾದ ಸಂಗತಿಯನ್ನು ತೋರಿಸುವ ಉದ್ದೇಶವಾಗಿದೆ)

ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರದೇಶದಲ್ಲಿ ಕ್ರೈಸ್ತ ಮಿಷನರಿಗಳ ಓಡಾಟ ಇದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಘಟನೆಯಲ್ಲಿ ಅವರ ಕೈವಾಡ ಇರಬಹುದು ಎಂದು ಆರೋಪಿಸಲಾಗಿದೆ.