ಅಭಿವೃದ್ಧಿಯ(ವಿಕಾಸದ) ಬಗ್ಗೆ ಪ್ರಶ್ನೆಯನ್ನು ವಿಚಾರಿಸಿದ ಆಗದಿರುವ ಬಗ್ಗೆ ಗ್ರಾಮಪಂಚಾಯತಿ ಸದಸ್ಯನನ್ನು ವೇದಿಕೆಯಿಂದ ಕೆಳದಬ್ಬಿದ (ದೂಡಿದ) ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ!

  • ಕಾಂಗ್ರೆಸ್ ನಾಯಕರ ಸರ್ವಾಧಿಕಾರ ! ‘ನಾವು ಏನೂ ಮಾಡುವುದಿಲ್ಲ ಹಾಗೂ ನಮ್ಮನ್ನು ಯಾರಾದರೂ ಪ್ರಶ್ನಿಸಿದರೆ, ಅದಕ್ಕೆ ಉತ್ತರವನ್ನೂ ನೀಡಲಾರೆವು ಹಾಗೂ ಅವರಿಗೆ ದೈಹಿಕವಾಗಿಯೂ ನೋವುಂಟು ಮಾಡುವೆವು’, ಎಂಬಂತಹ ಅಸುರೀ ವೃತ್ತಿಯ ಕಾಂಗ್ರೆಸ್ !
  • ತಮ್ಮ ಪಕ್ಷದ ಗ್ರಾಮಪಂಚಾಯತಿಯ ಸದಸ್ಯನೊಂದಿಗೆ ಹೀಗೆ ವರ್ತಿಸುವ ಕಾಂಗ್ರೆಸ್‌ನ ನಾಯಕರು ಜನಸಾಮಾನ್ಯರೊಂದಿಗೆ ಹೇಗೆ ವರ್ತಿಸಬಹುದು; ಎಂಬುದರ ಬಗ್ಗೆ ವಿಚಾರ ಮಾಡದಿರುವುದು ಒಳಿತು ! ಇಂತಹ ಸಿದ್ಧರಾಮಯ್ಯನವರು ಕೆಲವು ವರ್ಷ ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದರು, ಇದು ದೇಶಕ್ಕೆ ನಾಚಿಕೆಯ ವಿಷಯವಾಗಿದೆ !

ಬಾಗಲಕೋಟೆ – ಗ್ರಾಮಪಂಚಾಯತಿಯ ನೂತನ ಸದಸ್ಯನು ರಾಜ್ಯದ ವಿಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ‘ಸಿದ್ಧರಾಮಯ್ಯರವರು ನಮ್ಮೂರಿಗೆ ಬಂದುಹೋದರೂ ನಮ್ಮ ಊರಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದೊಡನೆ ಸಿಟ್ಟುಗೊಂಡ ಸಿದ್ಧರಾಮಯ್ಯರವರು ಆತನನ್ನು ವೇದಿಕೆಯಿಂದ ಕೆಳಗೆ ದೂಡಿದರು. ರಾಜ್ಯದ ಬಾದಾಮಿಯಲ್ಲಿ ಈ ಘಟನೆಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸನ್ಮಾನ ಕಾರ್ಯಕ್ರಮವು ನಡೆಯುತ್ತಿತ್ತು. ಈ ಸಮಯದಲ್ಲಿ ಮಾತನಾಡಲು ವೇದಿಕೆಗೆ ಬಂದ ಬಾದಾಮಿ ತಾಲೂಕಿನ ಕಿತ್ತಲಿ ಗ್ರಾಮದಿಂದ ಆಯ್ಕೆಯಾದ ಸಂಗಣ್ಣ ಬಾಬಣ್ಣಾವರ ಇವರು ‘ಗ್ರಾಮದಲ್ಲಿ ಅನೇಕ ಸಮಸ್ಯೆಗಳಿವೆ, ಯಾರೂ ಸಹ ಹಳ್ಳಿ ಕಡೆ ಬಂದಿಲ್ಲ. ನಮ್ಮ ಗ್ರಾಮದ ಆಶ್ರಯ ಮನೆಗಳು ಹಾಳಾಗಿ ಹೋಗಿವೆ. ಸಿದ್ಧರಾಮಯ್ಯ ಬಂದೂ ಹೋದರು; ಆದರೆ ಕಾಮಗಾರಿ ಸರಿಯಾಗಿಲ್ಲ”, ಎಂದು ಹೇಳಿದರು ಸಂಗಣ್ಣ ಬಾಬಣ್ಣವರ ಇವರ ಮಾತುಗಳನ್ನು ಕೇಳಿದ ಸಿದ್ಧರಾಮಯ್ಯನವರಿಗೆ ಸಿಟ್ಟು ಬಂದಿತು. ಅವರು ಕುಳಿತಿದ್ದ ಆಸನದಿಂದ ಎದ್ದು ಬಂದು ಆತನ ಮಾತುಗಳನ್ನು ತಡೆದು ವೇದಿಕೆಯಿಂದ ಕೆಳಗೆ ದೂಡಿದರು.