೨ ನಕಲಿ ಭಾರತೀಯ ಪಾಸ್‌ಪೋರ್ಟ್‌ಗಳು, ೩ ಆಧಾರ್ ಕಾರ್ಡ್‌ಗಳು, ೫ ಬ್ಯಾಂಕ್ ಪಾಸ್‌ಬುಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ
|
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರಪ್ರದೇಶದ ಉಗ್ರ ನಿಗ್ರಹ ದಳವು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ದಾಳಿ ನಡೆಸಿ ಮ್ಯಾನ್ಮಾರ್‌ನ ನಿವಾಸಿ, ರೋಹಿಂಗ್ಯಾ ಮುಸ್ಲಿಂ ವ್ಯಕ್ತಿ ಅಜೀಜುಲ್ಲಾ ಹಕ್ ಅಲಿಯಾಸ್ ಅಜೀಜುಲ್ಲಾಹನನ್ನು ಖಲೀಲಾಬಾದ್‌ನಿಂದ ಬಂಧಿಸಿದೆ. ಅವನ ಬಳಿ ೨ ನಕಲಿ ಭಾರತೀಯ ಪಾಸ್‌ಪೋರ್ಟ್‌ಗಳು, ೩ ಆಧಾರ್ ಕಾರ್ಡ್‌ಗಳು, ೧ ಪ್ಯಾನ್ ಕಾರ್ಡ್, ೫ ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ಇತರ ದಾಖಲೆಗಳು ಪತ್ತೆಯಾಗಿವೆ. ವಿದೇಶದಿಂದ ಅವನ ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಜಮೆಯಾಗಿದೆ, ಅದರ ಬಗ್ಗೆಯೂ ತನಿಖೆ ನಡೆಸಲಾಗುವುದು. ಅಜೀಜುಲ್ಲಾ ಭಾರತಕ್ಕೆ ನುಸುಳಿ ಬಂದು ಇಲ್ಲಿ ವಾಸಿಸುತ್ತಿದ್ದ. ಆತ ನಕಲಿ ಅಂಕಗಳು ಮತ್ತು ಶಾಲಾ ಪ್ರಮಾಣಪತ್ರದ ಆಧಾರದ ಮೇಲೆ ಸರಕಾರಿ ದಾಖಲೆಗಳನ್ನು ಸಿದ್ಧಪಡಿಸಿದ್ದ. ಆತ ನಕಲಿ ಪಾಸ್ಪೋರ್ಟ್ ಆಧಾರದ ಮೇಲೆ ಸೌದಿ ಅರೇಬಿಯಾ ಮತ್ತು ಬಾಂಗ್ಲಾದೇಶಕ್ಕೆ ಪ್ರಯಾಣಿಸಿದ್ದ.