ಕೇಂದ್ರ ಸರಕಾರದ ಪ್ರಾಧಿಕಾರವು ‘ಹಲಾಲ್’ ಪದವನ್ನು ಸರಕಾರಿ ನಿಯಮಗಳಿಂದ ತೆಗೆದುಹಾಕಿದೆ !

ಮತಾಂಧರ ಬಲವಂತದ ‘ಹಲಾಲ್’ ಪ್ರಮಾಣಪತ್ರ ಮುಗಿಯಿತು !

ಹಿಂದೂ ವಿರೋಧದ ಪರಿಣಾಮ !

ಹಿಂದೂಗಳ ವಿರೋಧವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡ ಕೇಂದ್ರ ಸರಕಾರಕ್ಕೆ ಅಭಿನಂದನೆಗಳು ! ಸರಕಾರವು ಹಿಂದೂಗಳಿಂದ ವಿರೋಧವಾಗುವ ತನಕ ದಾರಿ ಕಾಯದೇ ಹಿಂದೂ ವಿರೋಧಿ ನಿಯಮಗಳು ಮತ್ತು ಕಾನೂನುಗಳನ್ನು ತೆಗೆದುಹಾಕಬೇಕು; ಅದೇರೀತಿ ಹಿಂದುಗಳ ದೇವತೆಗಳು, ಧರ್ಮ ಮತ್ತು ಸಮಾಜದ ರಕ್ಷಣೆಗಾಗಿ ಕಾನೂನುಗಳನ್ನು ರೂಪಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ನವ ದೆಹಲಿ : ಕೇಂದ್ರ ಸರಕಾರದ ‘ಅಗ್ರಿಕಲ್ಚರಲ್ ಅಂಡ್ ಪ್ರೊಸೆಸ್ಡ್ ಫುಡ್ ಪ್ರೊಡಕ್ಟ್ ಎಕ್ಸಪೋರ್ಟ್ ಡೆವಲಪ್‌ಮೆಂಟ್’ಯು (ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ)ಅಂದರೆ ‘ಆಪೆಡಾ’ವು ತನ್ನ ‘ರೆಡ ಮೀಟ್ ಮ್ಯಾನುಯಲ್’ ನಿಂದ ‘ಹಲಾಲ್’ ಪದವನ್ನೇ ತೆಗೆದುಹಾಕಿದೆ. ಈ ಪದವನ್ನು ತೆಗೆದುಹಾಕಿ ಮಾರ್ಗಸೂಚಿಗಳನ್ನು ನೀಡಲಾಗಿದೆ. ‘ರೆಡ್ ಮೀಟ್ ಮ್ಯಾನುಯಲ್’ನಿಂದ ‘ಹಲಾಲ್’ ಪದವನ್ನು ತೆಗೆದುಹಾಕಲು ಸರಕಾರವು ಯಾವುದೇ ರೀತಿಯಿಂದ ಹಸ್ತಕ್ಷೇಪ ಮಾಡಿಲ್ಲ ಎಂದು ‘ಅಪೆಡಾ’ವು ಸ್ಪಷ್ಟಪಡಿಸಿದೆ. ಅನೇಕ ದೇಶಗಳ ಆಮದು-ರಫ್ತು ನಿಯಮಗಳನ್ನು ಗಮನಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ‘ಅಪೆಡಾ’ವು ತಿಳಿಸಿದೆ. ಇದಲ್ಲದೆ ‘ಮಾಂಸ ರಫ್ತು ಮಾಡುವ ದೇಶದ ಅವಶ್ಯಕತೆಗನುಸಾರ ಇದರಲ್ಲಿ ಬದಲಾವಣೆಗಳನ್ನು ಮಾಡಬಹುದು’ ಎಂದು ಕೂಡ ಸ್ಪಷ್ಟಪಡಿಸಲಾಗಿದೆ.

‘ಹಲಾಲ್’ ಪದವನ್ನು ತೆಗೆದುಹಾಕಲು ಬಹಳ ಸಮಯದಿಂದ ಪ್ರಯತ್ನಿಸುತ್ತಿರುವ ಪ್ರಸಿದ್ಧ ಲೇಖಕ ಹರಿಂದರ ಎಸ್. ಸಿಕ್ಕಾ ಇವರು ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ನೀಡಿದ್ದಾರೆ. ಈ ಪದವನ್ನು ತೆಗೆದುಹಾಕಿದಕ್ಕಾಗಿ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. ಈ ಪದವನ್ನು ತೆಗೆದು ಹಾಕಿದ್ದರಿಂದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಅಥವಾ ರಫ್ತು ಮಾಡಲು ‘ಹಲಾಲ್’ ಪ್ರಮಾಣಪತ್ರ’ವನ್ನು ಪಡೆಯುವ ಅವಶ್ಯಕತೆಯನ್ನು ತೆಗೆದುಹಾಕಲಾಗಿದೆ. ವ್ಯಾಪಾರಿಗಳು ಎಲ್ಲಾ ರೀತಿಯ ಅಧಿಕೃತ ಮಾಂಸಗಳ ನೊಂದಣಿಯನ್ನು ಮಾಡಬಹುದು.

೧. ಹರಿಂದರ ಸಿಕ್ಕಾ ಅವರು, ‘ಇದು ‘ಒಂದು ದೇಶ, ಒಂದು ನಿಯಮ’ ದ ಅಡಿಯಲ್ಲಿ ತೆಗೆದುಕೊಂಡ ತಾರತಮ್ಯರಹಿತ ನಿರ್ಧಾರವಾಗಿದೆ’ ಅದೇರೀತಿ ಹಲಾಲ್ ಮಾಂಸವನ್ನು ಮಾರಾಟ ಮಾಡುವ ರೆಸ್ಟೋರೆಂಟ್‌ಗಳಿಗೆ ಇದು ಒಂದು ಸಂದೇಶವಾಗಿದೆ’,ಎಂದು ಹೇಳಿದ್ದಾರೆ

೨. ‘ಅಪೆಡಾ’ವು ತನ್ನ ‘ಫುಡ್ ಸೆಫ್ಟಿ ಮೆನೆಜಮೆಂಟ್ ಸಿಸ್ಟಮ್’ನ ‘ಸ್ಟೆಂಡರ್ಡ್ಸ’ ಹಾಗೂ ‘ಕ್ವಾಲಿಟಿ ಮೆನೆಜಮೆಂಟ್’ನ ದಾಖಲೆಗಳಲ್ಲಿಯೂ ಈ ಬದಲಾವಣೆಗಳನ್ನು ಮಾಡಿದೆ. ಇದನ್ನು ಮೊದಲೇ ಹೇಗೆ ಬರೆದಿತ್ತು ಎಂದರೆ, ‘ಪ್ರಾಣಿಗಳ ಹತ್ಯೆಗಾಗಿ ಹಲಾಲ್ ಪದ್ದತಿಯ ನಿಯಮವನ್ನು ಅನುಸರಿಸಬೇಕು; ಏಕೆಂದರೆ ಇಸ್ಲಾಮಿಕ್ ರಾಷ್ಟ್ರಗಳ ಅಗತ್ಯಗಳನ್ನು ಪರಿಗಣಿಸ ಬೇಕಾಗುತ್ತದೆ.’ ಈಗ ಅದನ್ನು ಬದಲಾಯಿಸಲಾಗಿದೆ ಮತ್ತು ‘ಮಾಂಸವನ್ನು ರಫ್ತು ಮಾಡಬೇಕಾದ ದೇಶಗಳ ಅಗತ್ಯಗಳಿಗೆ ಅನುಗುಣವಾಗಿ ಪ್ರಾಣಿಗಳನ್ನು ಹತ್ಯೆ ಮಾಡಬೇಕು’ ಎಂದು ಬರೆಯಲಾಗಿದೆ. ಈ ಬದಲಾವಣೆಯನ್ನು ಈ ದಾಖಲೆಪತ್ರಗಳ ೮ ನೇ ಪುಟದಲ್ಲಿ ಮಾಡಲಾಗಿದೆ ಎಂದು ಹೇಳಿದರು.

೩. ೩೦ ನೆಯ ಪುಟದಲ್ಲಿ, ‘ಇಸ್ಲಾಮಿಕ್ ಸಂಘಟನೆಗಳ ಸಮ್ಮುಖದಲ್ಲಿ ಪ್ರಾಣಿಗಳನ್ನು ಹಲಾಲ್ ರೀತಿಯಲ್ಲಿ ಕೊಲ್ಲಬೇಕು’ ಎಂದು ಮೊದಲು ಬರೆಯಲಾಗಿತ್ತು. ಪ್ರತಿಷ್ಠಿತ ಇಸ್ಲಾಮಿಕ್ ಸಂಘಟನೆಗಳಿಂದ ಪ್ರಮಾಣಪತ್ರಗಳನ್ನು ಪಡೆದ ನಂತರ ಇಸ್ಲಾಮಿಕ್ ರಾಷ್ಟ್ರಗಳ ಅಗತ್ಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.’ ಈಗ ಅದರಲ್ಲಿ ಬದಲಾವಣೆ ಮಾಡಿ ‘ಆಮದು ಮಾಡಲಾಗುವ ದೇಶಗಳ ಅಗತ್ಯಗಳಿಗನುಗುಣವಾಗಿ ಪ್ರಾಣಿಗಳ ಹತ್ಯೆಯನ್ನು ಮಾಡಬೇಕು.’

೪. ಹಿಂದೆ ೩೫ ನೇ ಪುಟದಲ್ಲಿ ‘ಶರಿಯಾ ಅನುಸಾರ ನೋಂದಾಯಿಸಲಾದ ಇಸ್ಲಾಮಿಕ್ ಸಂಸ್ಥೆಗಳ ಮೇಲ್ವಿಚಾರಣೆಯಲ್ಲಿ ಹಲಾಲ್ ಪದ್ಧತಿಯಿಂದ ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ ಮತ್ತು ಪ್ರಮಾಣಪತ್ರವನ್ನು ಅವರ ಮೇಲ್ವಿಚಾರಣೆಯಲ್ಲಿ ತೆಗೆದುಕೊಂಡು ಇಸ್ಲಾಮೀ ದೇಶಗಳ ಅವಶ್ಯಕತೆಗನುಸಾರ ವಿಚಾರವಾಗಬೇಕು.’ ಎಂದು ಬರೆದಿತ್ತು. ಈಗ ಈ ವಾಕ್ಯವನ್ನು ತೆಗೆದುಹಾಕಲಾಗಿದೆ.

೫. ೭೧ ನೇ ಪುಟದಲ್ಲಿ, ‘ಜೆಲಾಟಿನ್ ಬೋನ್ ಚಿಪ್ಸ್’ ಅನ್ನು ಸದೃಢ ಎಮ್ಮೆಯನ್ನು ಹಲಾಲ್ ರೀತಿಯಲ್ಲಿ ಹತ್ಯೆ ಮಾಡಿ ನಂತರ ತಯಾರಿಸಲಾಗುತ್ತದೆ.’ ಈಗ ಪದವನ್ನು ಬದಲಾಯಿಸಿ ಅದನ್ನು ‘ಆಮದು ಮಾಡಿಕೊಳ್ಳುವ ದೇಶಗಳ ಅಗತ್ಯಗಳಿಗನುಗುಣವಾಗಿ’ ಎಂದು ಮಾಡಲಾಗಿದೆ. ಅದೇರೀತಿ ‘ಹಲಾಲ್’ ಪದವನ್ನು ತೆಗೆದು ಅಲ್ಲಿ ‘ಪೋಸ್ಟಮಾರ್ಟಮ್‌ನ ಪರಿಶೀಲನೆಯ ನಂತರ ಇದನ್ನು ನಿರ್ಮಿಸಲಾಗಿದೆ’, ಎಂಬ ವಾಕ್ಯವನ್ನು ಹಾಕಲಾಗಿದೆ.

೬. ಕಳೆದ ಕೆಲವು ತಿಂಗಳುಗಳಿಂದ ಹಲಾಲ್ ಪ್ರಮಾಣಪತ್ರಗಳ ಬಗ್ಗೆ ದೇಶದಲ್ಲಿ ಹಿಂದೂಗಳು ಮತ್ತು ಸಿಖ್ಖರ ಸಂಘಟನೆಗಳಿಂದ ವಿವಿಧ ರೀತಿಯಲ್ಲಿ ವಿರೋಧವು ವ್ಯಕ್ತವಾಗಿದೆ. ಈ ವಿರೋಧದ ನಂತರ, ‘ಅಪೆಡಾ’ ಸ್ಪಷ್ಟೀಕರಣಗಳನ್ನು ನೀಡುವುದರೊಂದಿಗೆ ಈ ಬದಲಾವಣೆಗಳನ್ನು ಮಾಡಬೇಕಾಯಿತು. ‘ಅಪೆಡಾ’, ಹಲಾಲ್ ಮಾಂಸವನ್ನು ರಫ್ತು ಮಾಡುವ ಬಗ್ಗೆ ಭಾರತ ಸರಕಾರದಿಂದ ಯಾವುದೇ ದಬ್ಬಾಳಿಕೆಯ ನಿಯಮಗಳಿಲ್ಲ, ತದ್ವಿರುದ್ಧವಾಗಿ ಆಮದು ಮಾಡಿಕೊಳ್ಳುವ ದೇಶಗಳ ನಿಯಮಗಳ ಪ್ರಕಾರ ಇತ್ತು.

೭. ‘ಅಪೆಡಾ’ದ ‘ರೆಡ ಮೀಟ್ ಮ್ಯಾನ್ಯುಯಲ್’ ನಿಂದ ಮಾಂಸ ವ್ಯಾಪಾರಿಗಳಲ್ಲಿ ಧಾರ್ಮಿಕ ತಾರತಮ್ಯ ಉಂಟಾಗುತ್ತಿತ್ತ್ತು. ಹಲಾಲ್ ಪ್ರಕ್ರಿಯೆಯನ್ನು ಅನುಸರಿಸುವ ಹೆಸರಿನಲ್ಲಿ ಮಾಂಸ ಮಾರಾಟ ಮಾಡುವ ಹಿಂದೂ ವ್ಯಾಪಾರಿಗಳನ್ನು ಶೋಷಣೆ ಮಾಡಲಾಗುತ್ತಿತ್ತು. ಹಲಾಲ್ ಪ್ರಮಾಣಪತ್ರಗಳ ಸೋಗಿನಲ್ಲಿ ಉದ್ಯೋಗಗಳಲ್ಲಿಯೂ ತಾರತಮ್ಯ ಮಾಡಲಾಗುತ್ತಿತ್ತು; ಏಕೆಂದರೆ ಹಲಾಲ್‌ನಂತೆ ಹತ್ಯೆ ಮತ್ತು ಮಾಂಸದ ಬಗ್ಗೆ ಎಲ್ಲ ಇತರ ಕಾರ್ಯವಿಧಾನಗಳನ್ನು ಮುಸಲ್ಮಾನರೇ ಮಾಡುವುದು ಅವಶ್ಯವಿದ್ದುದರಿಂದ ಹಿಂದೂಗಳು ನಿರುದ್ಯೋಗಿಗಳಾಗುತ್ತಿದ್ದರು.

ಹಲಾಲ್ ಮಾಂಸ ಎಂದರೇನು ?

‘ಜಟಕಾ ಸರ್ಟಿಫಿಕೆಶನ ಅಥಾರಟಿ’ಯ ಅಧ್ಯಕ್ಷ ರವಿ ರಂಜನ ಸಿಂಗ ಇವರು, ಹಿಂದೂ, ಸಿಖ್ ಮತ್ತು ಇತರ ಭಾರತೀಯ ಧರ್ಮಗಳಲ್ಲಿ ಪ್ರಾಣಿಗಳನ್ನು ‘ಜಟಕಾ’ ಪದ್ದತಿಯಲ್ಲಿ ಕೊಲ್ಲಲಾಗುತ್ತದೆ. ಇದರಲ್ಲಿ ಪ್ರಾಣಿಗಳ ಕುತ್ತಿಗೆಯನ್ನು ಒಂದೇ ಹೊಡೆತದಲ್ಲಿ ಕತ್ತರಿಸಲಾಗುತ್ತದೆ. ಇದರಿಂದ ಪ್ರಾಣಿಗಳಿಗೆ ಸ್ವಲ್ಪ ತೊಂದರೆಯಾಗುತ್ತದೆ. ತದ್ವಿರುದ್ಧ ಹಲಾಲ್ ಪದ್ದತಿಯಲ್ಲಿ ಪ್ರಾಣಿಗಳ ಗಂಟಲಿನ ರಕ್ತನಾಳವನ್ನು ಕತ್ತರಿಸಿ ಪ್ರಾಣಿಯನ್ನು ಹಾಗೆಯೇ ಬಿಡಲಾಗುತ್ತದೆ. ಇದರಿಂದ ರಕ್ತವು ಅಗಾಧವಾಗಿ ಹರಿಯುತ್ತದೆ ಮತ್ತು ನಂತರ ನರಳುತ್ತಾ ನರಳುತ್ತಾ ಸಾಯುತ್ತದೆ. ಈ ಪ್ರಾಣಿಯ ಬಲಿಯನ್ನು ನೀಡುವಾಗ ಅದರ ಮುಖವನ್ನು ಮಕ್ಕಾದ ದಿಕ್ಕಿನಲ್ಲಿ ತಿರುಗಿಸಲಾಗುತ್ತದೆ. ಅಲ್ಲದೆ ಈ ಕೆಲಸವನ್ನು ಮುಸ್ಲಿಮೇತರರಿಗೆ ನೀಡಲಾಗುವುದಿಲ್ಲ. ಇಂದು ‘ಮೆಕಡೊನಾಲ್ಡ್’ ಮತ್ತು ‘ಲೂಸಿಯಸ್’ ನಂತಹ ಸಂಸ್ಥೆಗಳು ಸಹ ಹಲಾಲ್ ಮಾಂಸವನ್ನೇ ಮಾರಾಟ ಮಾಡುತ್ತವೆ ಎಂದು ಹೇಳಿದರು.

ಹಿಂದೂಗಳ ದೊಡ್ಡ ಗೆಲುವು ! – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ರಮೇಶ ಶಿಂದೆ

‘ಅಪೇಡಾ’ ಮತ್ತು ಅದರ ನಿಯಮಗಳಿಂದ ‘ಹಲಾಲ್’ ಪದವನ್ನು ತೆಗೆದುಹಾಕುವುದು, ಇದು ಹಿಂದೂಗಳಿಗೆ ದೊಡ್ಡ ಯಶಸ್ಸು. ಮುಸ್ಲಿಂ ರಾಷ್ಟ್ರಗಳಿಗೆ ಮಾಂಸವನ್ನು ರಫ್ತು ಮಾಡಲಾಗುತ್ತಿದೆ ಎಂಬ ನೆಪಕ್ಕೆ ‘ಹಲಾಲ್ ಪ್ರಮಾಣಪತ್ರ’ ಕಡ್ಡಾಯಗೊಳಿಸಲಾಗಿತ್ತು; ವಾಸ್ತವಿಕವಾಗಿ, ಭಾರತದಿಂದ ರಫ್ತು ಮಾಡುವ ಮಾಂಸದ ಶೇಕಡಾ ೪೬ ರಷ್ಟು, ಅಂದರೆ ೬ ಲಕ್ಷ ಟನ್ ಮಾಂಸವನ್ನು ಮುಸಲ್ಮಾನೇತರ ವಿಯೆಟ್ನಾಂಗೆ ರಫ್ತು ಮಾಡಲಾಗುತ್ತದೆ. ಇಲ್ಲಿ ಹಲಾಲ್ ಪ್ರಮಾಣಪತ್ರದ ಅಗತ್ಯವಿಲ್ಲ; ಆದರೆ ಹಿಂದಿನ ಸರಕಾರಗಳ ಇಸ್ಲಾಮಿಸ್ಟ್ ನೀತಿಗಳಿಂದಾಗಿ ವಾರ್ಷಿಕ ೨೩,೬೪೬ ಕೋಟಿ ರೂಪಾಯಿಗಳ ವ್ಯಾಪಾರವು ಹಲಾಲ್ ಆರ್ಥಿಕತೆಯನ್ನು ಹೆಚ್ಚಿಸುತ್ತಿತ್ತು. ಹಲಾಲ್ ಮಾಂಸ ಪ್ರಕ್ರಿಯೆಯಲ್ಲಿ ಮುಸ್ಲಿಮರು ಮಾತ್ರ ಕೆಲಸ ಮಾಡಬಹುದಾಗಿರುವುದರಿಂದ, ಹಿಂದೂ ಕಟುಕರ ಸಮುದಾಯದ ಮೇಲೆ ನಿರುದ್ಯೋಗದ ಬಿಕ್ಕಟ್ಟು ಬಂದೆರಾಗಿತ್ತು. ಈಗ ಈ ನಿರ್ಧಾರದಿಂದಾಗಿ ಹಿಂದೂ ಕಟುಕ ಸಮುದಾಯಕ್ಕೂ ಲಾಭವಾಗಲಿದೆ.

ಈಗ ಬಹುಸಂಖ್ಯಾತ ಹಿಂದೂಗಳ ಮೇಲೆ ‘ಹಲಾಲ್’ ಮಾಂಸವನ್ನು ಕಡ್ಡಾಯವಾಗಿ ತಿನ್ನುವ ನಿರ್ಣಯದ ಬಗ್ಗೆ ವಿಚಾರ ಮಾಡುವ ಅಗತ್ಯವಿದೆ !

ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ (ಐಟಿಡಿಸಿ), ಏರ್ ಇಂಡಿಯಾ, ರೈಲ್ವೆಯ ಐ.ಆರ್.ಸಿ.ಟಿ.ಸಿ. ಇವರು ಕೆಟರಿಂಗ್‌ನಂತಹ ಈ ಎಲ್ಲಾ ಸಂಸ್ಥೆಗಳು ಹಲಾಲ್ ಮಾಂಸ ಸರಬರಾಜುದಾರರಿಗೆ ಮಾತ್ರ ಗುತ್ತಿಗೆಯನ್ನು ನೀಡುತ್ತವೆ. ಸಂಸತ್ತಿನಲ್ಲಿ ಊಟದ ವ್ಯವಸ್ಥೆ ರೈಲ್ವೆ ಕೆಟರಿಂಗ್ ಬಳಿ ಇದೆ. ಅಲ್ಲಿಯೂ ಹಲಾಲ್ ಮಾಂಸವನ್ನು ನೀಡಲಾಗುತ್ತದೆ. ಹಿಂದೂಗಳಿಗೆ ತಮ್ಮ ಧರ್ಮದ ಆಧಾರದ ಮೇಲೆ ಮಾಂಸ ತಿನ್ನುವ ಸ್ವಾತಂತ್ರ್ಯವೂ ಇಲ್ಲ. ಆದ್ದರಿಂದ ಸರಕಾರಿ ಸಂಸ್ಥೆಗಳ ಮೂಲಕವೂ ಕಡ್ಡಾಯವಾಗಿ ಹಲಾಲ್ ಮಾಂಸವನ್ನು ಮಾತ್ರ ನೀಡುವ ನಿಯಮವನ್ನು ತೆಗೆದುಹಾಕಲು ಸರಕಾರ ಪ್ರಯತ್ನಿಸುವುದು ಆವಶ್ಯಕವಾಗಿದೆ.