ಕರ್ನಾಟಕದಲ್ಲಿ, ಆರ್ಥಿಕವಾಗಿ ದುರ್ಬಲರಾಗಿರುವ ಸ್ವಜಾತಿಯ ಅರ್ಚಕನನ್ನು ಮದುವೆಯಾಗುವ ಬ್ರಾಹ್ಮಣ ವಧುಗೆ ೩ ಲಕ್ಷ ರೂಪಾಯಿಯ ಆರ್ಥಿಕ ಸಹಾಯ ಸಿಗಲಿದೆ

ಕರ್ನಾಟಕದಲ್ಲಿ ಬಿಜೆಪಿ ಸರಕಾರದ ಪ್ರಶಂಸನೀಯ ನಿರ್ಧಾರ !

‘ಇನ್ನು ಜಾತ್ಯತೀತತೆಯನ್ನು ಕಾಪಾಡಲು ಇಮಾಮ್‌ಗಳು ಮತ್ತು ಮೌಲ್ವಿಗಳೊಂದಿಗೆ ಮದುವೆಯಾಗುವ ಮುಸ್ಲಿಂ ಮಹಿಳೆಯರಿಗೆ ಸರಕಾರವು ಇದೇ ರೀತಿಯ ಸಹಾಯವನ್ನು ನೀಡಬೇಕು’ ಎಂದು ತಥಾಕಥಿತ ಜಾತ್ಯತೀತ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ !

ಬೆಂಗಳೂರು – ರಾಜ್ಯದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಬ್ರಾಹ್ಮಣ ಸಮುದಾಯದ ಹುಡುಗಿಯರಿಗಾಗಿ ‘ಅರುಂಧತಿ’ ಮತ್ತು ‘ಮೈತ್ರೇಯಿ’ ಎಂಬ ಹೆಸರಿನ ಎರಡು ಯೋಜನೆಗಳನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಬ್ರಾಹ್ಮಣ ಸಮುದಾಯದ, ಆರ್ಥಿಕವಾಗಿ ದುರ್ಬಲ ವರ್ಗದ ಹುಡುಗಿಯರಿಗೆ ಆರ್ಥಿಕ ನೆರವು ಸಿಗಲಿದೆ.
‘ಅರುಂಧತಿ’ ಯೋಜನೆಯಡಿಯಲ್ಲಿ ವಧುಗಳಿಗೆ ೨೫ ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುವುದು, ಹಾಗೂ ‘ಮೈತ್ರೇಯಿ’ ಅಡಿಯಲ್ಲಿ ಕರ್ನಾಟಕದ ಅರ್ಚಕನನ್ನು ಮದುವೆಯಾಗುವ ಬ್ರಾಹ್ಮಣ ಹುಡುಗಿಗೆ ೩ ಲಕ್ಷ ರೂಪಾಯಿಗಳ ಬಾಂಡ್ ಸಿಗಲಿದೆ. ‘ಅರುಂಧತಿ’ ಅಡಿಯಲ್ಲಿ, ಮದುವೆಯ ವಯಸ್ಸಿನ ೫೫೦ ಬ್ರಾಹ್ಮಣ ಹುಡುಗಿಯರನ್ನು ಗುರುತಿಸಲಾಗಿದೆ. ‘ಮೈತ್ರೇಯಿ’ ಯೋಜನೆಗೆ ೨೫ ಹುಡುಗಿಯರನ್ನು ಆಯ್ಕೆ ಮಾಡಲಾಗಿದೆ.

೧. ಈ ಯೋಜನೆಗಳ ಲಾಭವನ್ನು ಪಡೆಯಲು ವಧು ಮತ್ತು ವರನಿಗೆ ಇದು ಮೊದಲ ವಿವಾಹವಾಗಿರಬೇಕು. ವಧುವಿನ ಕುಟುಂಬವು ಆರ್ಥಿಕವಾಗಿ ದುರ್ಬಲವಾಗಿದೆ ಎಂದು ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.

೨. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚಿದಾನಂದರವರು, ‘ನಾವು ಆರ್ಥಿಕವಾಗಿ ಹಿಂದುಳಿದ ಬಡವರ, ವಿಶೇಷವಾಗಿ ಪುರೋಹಿತರ ಕಲ್ಯಾಣವನ್ನೂ ನೋಡಿಕೊಳ್ಳಬೇಕೆಂದು ಬಯಸುತ್ತೇವೆ. ಕೆಲಸದ ಅನಿಶ್ಚಿತತೆಯು ಅವರ ಜೀವನವನ್ನು ಕಷ್ಟಕರವಾಗಿಸಿದೆ. ಈ ಯೋಜನೆಯಡಿ ಪಡೆದ ಹಣದಿಂದ ಅವರು ವ್ಯಾಪಾರ ಮಾಡಬಹುದು’ ಎಂದು ಹೇಳಿದರು.