ಕೇರಳದಲ್ಲಿ ಭಯೋತ್ಪಾದಕ ತರಬೇತಿ ಕೇಂದ್ರವನ್ನು ನಡೆಸಲು ಪಿ.ಎಫ್.ಐ. ಹಣ ಸಂಗ್ರಹಿಸಿತ್ತು ! – ಈಡಿ ಆರೋಪ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಸಾಕಷ್ಟು ಪುರಾವೆಗಳು ಸಿಕ್ಕಿದರೂ, ಕೇಂದ್ರ ಸರಕಾರ ಇದರ ಮೇಲೆ ನಿಷೇಧ ಹೇರದಿರುವುದು ಆಶ್ಚರ್ಯಕರವಾಗಿದೆ ಎಂದು ಹಿಂದೂಗಳ ಮನಸ್ಸಿನಲ್ಲಿ ವಿಚಾರ ಬರಬಹುದು !

ತಿರುವನಂತಪುರಮ್ (ಕೇರಳ) – ಕೇರಳದ ಕಣ್ಣೂರು ಜಿಲ್ಲೆಯ ಭಯೋತ್ಪಾದಕ ತರಬೇತಿ ಕೇಂದ್ರಕ್ಕೆ ಹಣಕಾಸು ಒದಗಿಸುವಲ್ಲಿ ಪಾಪ್ಯುಲರ್ ಫ್ರಂಟ್ ಭಾಗಿಯಾಗಿದೆ ಎಂದು ಅದರ ವಿರುದ್ಧದ ಹಣಕಾಸು ದುರುಪಯೋಗದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಈಡಿ) ಹೇಳಿದೆ.

ಹಣಕಾಸು ದುರುಪಯೋಗ ಮಾಡಿದ ಪ್ರಕರಣದಲ್ಲಿ ಬಂಧಿಸಲಾದ ಪಿ.ಎಫ್.ಐ. ಮುಖಂಡ ರೌಫ್ ಶರೀಫ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸುವಾಗ ‘ಈಡಿ’ಯು ಈ ಮಾಹಿತಿಯನ್ನು ನೀಡಿದೆ.

(ಸೌಜನ್ಯ : Kaumudy English)

ಈ ತರಬೇತಿ ಕೇಂದ್ರದ ಮೂಲಕ ದೇಶದಲ್ಲಿ ರಕ್ತಪಾತವನ್ನು ಉಂಟುಮಾಡಿ ಅಶಾಂತಿಯನ್ನು ನಿರ್ಮಿಸುವ ಪ್ರಯತ್ನವಾಗಿದೆ ಎಂದು ಆರೋಪದಲ್ಲಿ ತಿಳಿಸಲಾಗಿದೆ.