ತಾಜ್‌ಮಹಲ್‌ನಲ್ಲಿ ಕೇಸರಿ ಧ್ವಜವನ್ನು ಹಾರಿಸುತ್ತಾ ‘ಜೈ ಶ್ರೀರಾಮ’ ಘೋಷಣೆ ಕೂಗಿದ ಹಿಂದೂ ಯುವ ವಾಹಿನಿಯ ಕಾರ್ಯಕರ್ತರು

೪ ಜನರ ಬಂಧನ

ಸರಕಾರವು ಜನರ ಮುಂದೆ ತೇಜೋಮಹಾಲಯದ (ತಾಜಮಹಾಲ) ಸತ್ಯವನ್ನು ತಂದರೆ ಇಂತಹ ಘಟನೆಗಳು ಆಗುವುದಿಲ್ಲ. ಹಿಂದೂಗಳ ಶ್ರದ್ಧೆ ಮತ್ತು ಭಾವನೆಗಳು ತೇಜೋಮಹಾಲಯದೊಂದಿಗೆ ಇರುವುದರಿಂದ, ಈ ಸತ್ಯವನ್ನು ಜನರ ಮುಂದೆ ತರಲು ಸರಕಾರ ಧೈರ್ಯವನ್ನು ತೋರಿಸಬೇಕು !

ಆಗ್ರಾ (ಉತ್ತರ ಪ್ರದೇಶ) – ಇಲ್ಲಿನ ಪ್ರಸಿದ್ಧ ತಾಜಮಹಲ್ ಪ್ರದೇಶದಲ್ಲಿ ಹಿಂದೂ ಯುವಾ ವಾಹಿನಿಯ ಕಾರ್ಯಕರ್ತರು ಶಿವ ಚಾಲಿಸಾ ಪಠಿಸುತ್ತಾ ಕೇಸರಿ ಧ್ವಜವನ್ನು ಹಾರಿಸಿದರು. ಇಲ್ಲಿ ಕಟ್ಟೆಯ ಮೇಲೆ ಕುಳಿತು ತಮ್ಮ ಜೇಬಿನಿಂದ ಕೇಸರಿ ಧ್ವಜವನ್ನು ತೆಗೆದು ಅದನ್ನು ಹಾರಿಸಿ, ‘ಜೈ ಶ್ರೀರಾಮ’ನ ಘೋಷಣೆಯನ್ನೂ ಕೂಗಿದರು. ಈ ಸಮಯದಲ್ಲಿ ಇಲ್ಲಿ ನೇಮಿಸಿದ್ದ ಸಿ.ಐ.ಎಸ್.ಎಫ್.ನ ಸಿಬ್ಬಂದಿಗಳು ಅವರನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದರು. ಇದಕ್ಕೂ ಮೊದಲು ಈ ಕಾರ್ಯಕರ್ತರು ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದರು. ಸಿ.ಐ.ಎಸ್.ಎಫ್. ನಿಂದ ಸಿಕ್ಕಿದ ಮಾಹಿತಿಯ ಆಧಾರದ ಮೇಲೆ ತಾಜಗಂಜ್ ಪೊಲೀಸರು ಹಿಂದೂ ಯುವ ವಾಹಿನಿಯ ಜಿಲ್ಲಾಧ್ಯಕ್ಷ ಗೌರವ್ ಠಾಕೂರ್, ಸೋನು ಬಘೇಲ್, ವಿಶೇಷ ಕುಮಾರ್ ಮತ್ತು ಋಷಿ ಲವಾನಿಯಾ ವಿರುದ್ಧ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು ಮತ್ತು ಅಶಾಂತಿ ಹರಡಿಸಿರುವ ಅಪರಾಧವನ್ನು ನೋಂದಾಯಿಸಲಾಗಿದೆ. (ಇಲ್ಲಿ ಧಾರ್ಮಿ ಭಾವನೆಗಳು ನೋವುಂಟಾಗುವ ಪ್ರಶ್ನೆಯೇ ಇಲ್ಲ ! ತಾಜಮಹಲ್ ಇದು ಹಿಂದೂಗಳ ತೇಜೋಮಹಾಲಯವಾಗಿದ್ದು ಅದು ಹಿಂದೆ ಹಿಂದೂಗಳ ವಾಸ್ತು ಆಗಿತ್ತು. ಈ ಬಗ್ಗೆ ಐತಿಹಾಸಿಕ ಸಾಕ್ಷಿಗಳೂ ಲಭ್ಯವಿವೆ ! – ಸಂಪಾದಕ) ಗೌರವ ಠಾಕೂರ ಇವರು ಈ ಹಿಂದೆ ತಾಜಮಹಲನಲ್ಲಿ ಶಿವಚಾಲಿಸಾ ಪಠಿಸಿದ್ದ ವಿಡಿಯೋ ಪ್ರಸಾರ ಮಾಡಿದ್ದರು.