ನಾವೂ ಕೇರಳ ಮುಖ್ಯಮಂತ್ರಿಯ ಗುಲಾಮರಲ್ಲ ! – ಕೇರಳದ ಆರ್ಥೊಡಾಕ್ಸ್ ಚರ್ಚ್‌ನ ಎಚ್ಚರಿಕೆ

ಚರ್ಚ್‌ನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಕಿವಿಮಾತು

ಭಾರತದ ಯಾವುದೇ ಹಿಂದೂ ದೇವಾಲಯದ ಕಾರ್ಯದರ್ಶಿಗಳು ಆಡಳಿತಗಾರರಿಗೆ ಅಂತಹ ಎಚ್ಚರಿಕೆ ನೀಡಬಹುದೇ ?

ಆರ್ಥೊಡಾಕ್ಸ್ ಚರ್ಚ್‌

ತಿರುವನಂತಪುರಮ್ (ಕೇರಳ) – ನಾವು ಕೇರಳ ಮುಖ್ಯಮಂತ್ರಿಯ ಗುಲಾಮರಲ್ಲ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚರ್ಚ್‌ನೊಂದಿಗಿನ ವ್ಯವಹಾರದಲ್ಲಿ ಸಭ್ಯರಾಗಿರಬೇಕು ಎಂದು ರಾಜ್ಯದ ಆರ್ಥೊಡಾಕ್ಸ್ ಚರ್ಚ್ ಎಚ್ಚರಿಕೆ ನೀಡಿದೆ. ಆರ್ಥೊಡಾಕ್ಸ್ ಚರ್ಚ್ ಮತ್ತು ಜಾಕೋಬೈಟ್ ಚರ್ಚ್ ನಡುವಿನ ವಿವಾದದ ಬಗ್ಗೆ ಮುಖ್ಯಮಂತ್ರಿ ವಿಜಯನ್ ಒಬ್ಬ ಪಾದ್ರಿಯನ್ನು ಕೇಳಿದ್ದರು. ಅದಕ್ಕೆ ಆರ್ಥೊಡಾಕ್ಸ್ ಚರ್ಚಿನ ಪ್ರಸಾರ ಮಾಧ್ಯಮದ ಮುಖ್ಯಸ್ಥ ಡಾ. ವರ್ಗೀಸ್ ಈ ಎಚ್ಚರಿಕೆಯನ್ನು ನೀಡಿದರು ಮತ್ತು ವಿಜಯನ್ ಸುಳ್ಳು ಹೇಳಿದ್ದಾರೆ ಎಂದು ಟೀಕಿಸಿದರು.

ಆರ್ಥೊಡಾಕ್ಸ್ ಚರ್ಚಿನ ಪ್ರಸಾರ ಮಾಧ್ಯಮದ ಮುಖ್ಯಸ್ಥ ಡಾ. ವರ್ಗೀಸ್

ಡಾ. ವರ್ಗಿಸ್ ತಮ್ಮ ಮಾತನ್ನು ಮುಂದುವರೆಸುತ್ತಾ, ಕೇರಳದ ಕಮ್ಯುನಿಸ್ಟ್ ಪಕ್ಷದ ಫ್ಯಾಸಿಸ್ಟ್ ಸರಕಾರಕ್ಕೆ ಚರ್ಚ್‌ನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯ ರಾಜಕೀಯ ಆದೇಶವು ಅವರ ಪಕ್ಷದ ಕಾರ್ಯಕರ್ತರಿಗೆ ಇರಬೇಕು, ಆರ್ಥೊಡಾಕ್ಸ್ ಚರ್ಚ್‌ಗೆ ಅಲ್ಲ. ವಿಜಯನ್ ಮುಖ್ಯಮಂತ್ರಿ ಹುದ್ದೆಯನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.