ಅನುಮತಿಯಿಲ್ಲದೆ ಅಗತ್ಯ ಕ್ರಮ ಕೈಗೊಳ್ಳುವ ಆರೋಪ
ನಾಶಿಕ – ೨೦೦೮ ರಲ್ಲಿ ಮಾಲೆಗಾಂವ್ ಬಾಂಬ್ ಸ್ಫೋಟದ ಸಂಚಿನ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ನಾನು ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೆ, ಎಂಬ ವಾದವನ್ನು ಈ ಪ್ರಕರಣದ ಆರೋಪಿ ಲೆ. ಕರ್ನಲ ಪ್ರಸಾದ ಶ್ರೀಕಾಂತ ಪುರೋಹಿತ ಇವರ ವತಿಯಿಂದ ಉಚ್ಚ ನ್ಯಾಯಾಲಯದಲ್ಲಿ ಮಾಡಲಾಯಿತು. ನ್ಯಾಯಮೂರ್ತಿ ಎಸ್.ಎಸ್. ಶಿಂದೆ ಹಾಗೂ ನ್ಯಾಯಮೂರ್ತಿ ಮಕರಂದ ಕರ್ಣಿಕ ಅವರ ನ್ಯಾಯಪೀಠವು ಪುರೋಹಿತ ಇವರ ಮನವಿಯನ್ನು ಆಲಿಸಿತು.
ಈ ಸಮಯದಲ್ಲಿ, ಸೇನೆಯು ನೀಡಿದ್ದ ಕರ್ತವ್ಯದ ಭಾಗವಾಗಿ ಪೊರೋಹಿತ್ ಅವರು ಈ ಸಂಚಿನ ಸಭೆಯಲ್ಲಿ ಉಪಸ್ಥಿತರಿದ್ದರು. ಮಾಹಿತಿ ಸಂಗ್ರಹಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಗತ್ಯವಿರುವ ಅನುಮತಿ ಪಡೆಯಬೇಕಾಗಿತ್ತು ಎಂದು ಪುರೋಹಿತ್ ಅವರು ವಾದ ಮಂಡಿಸಿದರು. ‘ಅಗತ್ಯವಿರುವ ಅನುಮತಿಯಿಲ್ಲದೆ ತನ್ನ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ’, ಎಂದು ಆರೋಪಿಸುತ್ತಾ ತನ್ನನ್ನು ಈ ಪ್ರಕರಣದಿಂದ ಖುಲಾಸೆಗೊಳಿಸುವಂತೆ ಕೋರಿ ಪುರೋಹಿತ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ‘ಕರ್ತವ್ಯವೆಂದು ಸಭೆಯಲ್ಲಿ ಭಾಗವಹಿಸಿದ ನಂತರವೂ ನನ್ನನ್ನು ಜೈಲಿಗೆ ಹಾಕಲಾಯಿತು ಮತ್ತು ಭಯೋತ್ಪಾದಕ ಎಂದು ಕಿರುಕುಳ ನೀಡಲಾಯಿತು’ ಎಂದು ಪುರೋಹಿತ್ ಅವರು ಆರೋಪಿಸಿದರು.