ಭಾರತವು ಪಾಕಿಸ್ತಾನದ ಬಳಿ ಭಯೋತ್ಪಾದಕ ಹಾಫಿಜ್ ಸಯಿದ್ ಇವನನ್ನು ಭಾರತಕ್ಕೆ ಒಪ್ಪಿಸಲು ಒತ್ತಾಯ !

ಮುಂಬಯಿಯಲ್ಲಿ ನವಂಬರ್ ೨೬, ೨೦೦೮ ರಲ್ಲಿ ಜಿಹಾದಿ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರದಾರ ಮತ್ತು ಲಷ್ಕರ್-ಎ-ತೊಯ್ಬಾದ ಸಂಸ್ಥಾಪಕ ಭಯೋತ್ಪಾದಕ ಹಾಫಿಜ್ ಸಯಿದ್ ನನ್ನು ಭಾರತದ ವಶಕ್ಕೆ ಒಪ್ಪಿಸಲು ಭಾರತ ಆಗ್ರಹಿಸಿದೆ.

Hindu Woman Pakistan Election : ಪಾಕಿಸ್ತಾನದ ಸಂಸತ್ ಚುನಾವಣೆಯಲ್ಲಿ ಮೊದಲ ಬಾರಿಗೆ ಹಿಂದೂ ಮಹಿಳೆ ಸ್ಪರ್ಧಿಸಲಿದ್ದಾರೆ !

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸಂಸತ್ತಿನ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಉಮೇದುವಾರಿಕೆ ಸಲ್ಲಿಸಿದ್ದಾರೆ.

ನಮ್ಮ ನೆರೆಯ ದೇಶ ಚಂದ್ರನನ್ನು ತಲುಪಿದರೆ, ನಾವು ನೆಲದಿಂದ ಮೇಲೇಳಲು ಸಹ ಸಾಧ್ಯವಾಗಲಿಲ್ಲ ! – ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್

ನಮ್ಮ ಅವನತಿಗೆ ನಾವೇ ಕಾರಣ, ಇಲ್ಲದಿದ್ದರೆ ನಮ್ಮ ದೇಶ ಬೇರೆ ಹಂತಕ್ಕೆ ತಲುಪುತ್ತಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುವಾಗ ಹೇಳಿದರು.

ನರಮೇಧದ ವಿರುದ್ಧ ಬೀದಿಗಿಳಿದ ಸಾವಿರಾರು ಬಲೂಚಿ ನಾಗರಿಕರು !

ಪಾಕಿಸ್ತಾನದಲ್ಲಿ ಬಲೂಚ್ ನಾಗರಿಕರ ಹತ್ಯಾಕಾಂಡ ಮತ್ತು ನಾಪತ್ತೆಗಳ ವಿರುದ್ಧ ಸಾವಿರಾರು ಬಲೂಚ್ ನಾಗರಿಕರು ಬೀದಿಗಿಳಿದಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಆಂದೋಲನ ನಡೆಯುತ್ತಿದ್ದು, ಇದೀಗ ಆಂದೋಲನ ರಾಜಧಾನಿ ಇಸ್ಲಾಮಾಬಾದ್ ಕಡೆಗೆ ಸಾಗುತ್ತಿದೆ.

‘ದಕ್ಷಿಣ ಏಷ್ಯಾದ ಒಂದು ದೇಶಕ್ಕೆ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಬಹಳ ಸುಲಭವಾಗಿ ಪೂರೈಕೆ !’ (ಅಂತೆ)

ಪಾಕಿಸ್ತಾನ ಪ್ರಾಯೋಜಿತ ಜಿಹಾದಿ ಭಯೋತ್ಪಾದಕರೊಂದಿಗೆ ಹೋರಾಡಲು ಭಾರತವು ಆಕ್ರಮಣಕಾರಿ ರಕ್ಷಣಾ ಕಾರ್ಯತಂತ್ರವನ್ನು ಯೋಜಿಸಿದೆ. ಈಗ ಅದಕ್ಕೇ ಪಾಕಿಸ್ತಾನದ ಪಿತ್ತ ನೆತ್ತಿಗೇರಿದರೆ ಅದರಲ್ಲಿ ಅಚ್ಚರಿ ಏನಿದೆ !

‘ಕಾಶ್ಮೀರದಿಂದ ಭಾರತವು ಕಲಂ 370 ಅನ್ನು ತೆಗೆದುಹಾಕುವುದು ವಿಶ್ವಸಂಸ್ಥೆಯ ಪ್ರಸ್ತಾಪದ ವಿರುದ್ಧವಾಗಿದೆಯಂತೆ !’ – ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಮುನೀರ್‌

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದು, ಇತ್ತೀಚೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಭೇಟಿಯಾಗಿದ್ದಾರೆ.

‘ಜಮ್ಮು-ಕಾಶ್ಮೀರದ ಮೇಲೆ ಭಾರತೀಯ ಸಂವಿಧಾನದ ಪ್ರಾಬಲ್ಯವನ್ನು ಒಪ್ಪಿಕೊಳ್ಳುವುದಿಲ್ಲವಂತೆ !’ – ಪಾಕಿಸ್ತಾನ

ಪಾಕಿಸ್ತಾನ ಒಪ್ಪುತ್ತದೆಯೋ ಇಲ್ಲವೋ ಎಂಬುದು ಮಹತ್ವದ್ದಿಲ್ಲ; ಏಕೆಂದರೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನ ಎಷ್ಟೇ ಕೂಗಾಡಿದರೂ ಇದರಲ್ಲಿ ಬದಲಾವಣೆಯಾಗುವುದಿಲ್ಲ, ಎನ್ನುವುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು!

ಪಾಕಿಸ್ತಾನದಲ್ಲಿ ಪುಲ್ವಾಮಾ ದಾಳಿಯ ಸೂತ್ರಧಾರ ಆಲಂ ಗೀರ ಕಿಡ್ನ್ಯಾಪ್

ಪಾಕಿಸ್ತಾನದಲ್ಲಿ ಜೈಶ್-ಎ-ಮೊಹಮ್ಮದ್‌ನ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕ ಮೊಹಿಯುದ್ದೀನ ಔರಂಗಜೇಬ ಆಲಮಗೀರನನ್ನು ಹಫೀಜಾಬಾದ್‌ನಿಂದ ಅಪರಿಚಿತ ವ್ಯಕ್ತಿಗಳು ಅಪಹರಿಸಿರುವ ಸುದ್ದಿಯನ್ನು `ಟೈಮ್ಸ್ ಅಲ್ಜಿಬ್ರಾ’ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ಖಲಿಸ್ತಾನಿ ಭಯೋತ್ಪಾದಕ ಲಖಬೀರ ರೋಡೆ ಸಾವು

ಲಖಬೀರ ಸಿಂಹ ರೋಡೆನನ್ನು ಭಾರತ ಸರಕಾರ ಭಯೋತ್ಪಾದಕ ಎಂದು ಘೋಷಿಸಿದ ಬಳಿಕ ಅವನು ಪಾಕಿಸ್ತಾನಕ್ಕೆ ಓಡಿ ಹೋಗಿದ್ದನು. 2021ರಲ್ಲಿ ಪಂಜಾಬ್‌ನ ಲೂಧಿಯಾನ ಕೋರ್ಟ್‌ನಲ್ಲಿ ನಡೆದ ಸ್ಫೋಟದಲ್ಲಿ ರೋಡೆಯ ಹೆಸರು ಬೆಳಕಿಗೆ ಬಂದಿತ್ತು.

ಪಾಕಿಸ್ತಾನದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಶಾರದಾ ಪೀಠದ ದೇವಸ್ಥಾನಗಳ ಧ್ವಂಸ !

ಈ ವಿಷಯದಲ್ಲಿ ಕೇಂದ್ರ ಸರಕಾರವು 100 ಕೋಟಿ ಹಿಂದೂಗಳ ಪರವಾಗಿ ಪಾಕಿಸ್ತಾನವನ್ನು ಪ್ರಶ್ನಿಸಿ, ಆ ಭೂಮಿಯನ್ನು ರಕ್ಷಿಸಬೇಕು ಎಂದು ಹಿಂದೂಗಳು ನಿರೀಕ್ಷಿಸುತ್ತಾರೆ !