ಇಸ್ಲಾಮಾಬಾದ್ – ಪಾಕಿಸ್ತಾನಕ್ಕೆ ಮತ್ತೊಮ್ಮೆ ಚೀನಾದಿಂದ ಕೋಟ್ಯಂತರ ರೂಪಾಯಿ ವಂಚನೆಯಾಗಿದೆ. ಈ ಕಾರಣದಿಂದಾಗಿ, ಪಾಕಿಸ್ತಾನದ ವಾಯುಪಡೆಯು ಈ ವರ್ಷ ತನ್ನ ‘ಝೆಡಡಿಕೆ-03 ಕಾರಾಕೊರಂ ಈಗಲ್ ಏರ್‍ಬೊರ್ನ್ ಅರ್ಲೀ ವಾರ್ನಿಂಗ್ ಮತ್ತು ಕಂಟ್ರೋಲ್’ ಈ ಫೈಟರ್ ಜೆಟ್‌ಗಳನ್ನು ವಾಯುಪಡೆಯಿಂದ ನಿವೃತ್ತಿಗೊಳಿಸಲಿದೆ. ಇಸ್ರೇಲ್‌ನಿಂದ ಭಾರತ ಖರೀದಿಸಿದ್ದ ‘ಅವಾಕ್ಸ್’ ವಿಮಾನವನ್ನು ಎದುರಿಸಲು ಪಾಕಿಸ್ತಾನ ಕೋಟ್ಯಂತರ ರೂಪಾಯಿ ಮೌಲ್ಯದ ಚೀನಾದಿಂದ ನಾಲ್ಕು ‘ಝಡ್‌ಕೆ-03 ಕಾರಕೋರಂ’ ವಿಮಾನಗಳನ್ನು ಖರೀದಿಸಿದ್ದು, ಅದು ನಿರುಪಯುಕ್ತವಾಗಿದೆ. ಆದ್ದರಿಂದ, ಪಾಕಿಸ್ತಾನದ ವಾಯುಪಡೆಯು ಈಗ ವಾಯು ಕಣ್ಗಾವಲಿಗಾಗಿ ಸ್ವೀಡಿಷ್ ಕಂಪನಿ ‘ಸಾಬ್’ನ ‘2000 ಏರಿ ಅವಾಕ್ಸ್’ ವಿಮಾನವನ್ನು ಅವಲಂಬಿಸಿದೆ.
ತಜ್ಞರ ಪ್ರಕಾರ, ಪಾಕಿಸ್ತಾನದ ‘ಝಡ್‌ಕೆ-03 ಕಾರಕೋರಂ’ದ ರಚನೆಯನ್ನು ಚೀನಾದ ಶಾಂಕ್ಸಿ ವೈ 8′ ವಿಮಾನದಂತೆ ಮಾಡಲಾಗಿದೆ. ಈ ವಿಮಾನಗಳನ್ನು ಖರೀದಿಸಿದ ನಂತರ, ಈ ವಿಮಾನಗಳು ದೀರ್ಘ-ಶ್ರೇಣಿಯ ಕಣ್ಗಾವಲು ಸಾಧ್ಯವಾಗಿಸುತ್ತದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಈ ವಿಮಾನಗಳ ಮೂಲಕ ಪಾಕಿಸ್ತಾನವೂ ಭಾರತದೊಂದಿಗೆ ಅಫ್ಘಾನಿಸ್ತಾನದ ಚಲನವಲನಗಳ ಮೇಲೆ ನಿಗಾ ಇಡಲು ಹೊರಟಿತ್ತು.
2011ರಿಂದ 2015ರ ಅವಧಿಯಲ್ಲಿ ಚೀನಾ ಈ ವಿಮಾನಗಳನ್ನು ಪಾಕಿಸ್ತಾನಕ್ಕೆ ಪೂರೈಸಿತ್ತು. ಈ ವಿಮಾನಗಳನ್ನು ನಿವೃತ್ತಿಗೊಳಿಸುವ ಪಾಕಿಸ್ತಾನದ ಹಠಾತ್ ನಿರ್ಧಾರವು ಈ ಚೀನಾದ ವಿಮಾನಗಳ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಚೀನಾದ ವಿಮಾನಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿವೆ ಎಂದು ಹೇಳಲಾಗಿದೆ. ಸ್ವೀಡನ್‌ನ ‘2000 ಏರಿ ಅವಾಕ್ಸ್’ ವಿಮಾನವು ಪಾಕಿಸ್ತಾನದ ವಾಯುಪಡೆಯಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಪರಿಗಣಿಸಲಾಗಿದೆ. ಆದರೂ, ಅದರ ಸಂಖ್ಯೆ ತುಂಬಾ ಚಿಕ್ಕದಾಗಿದೆ. ಹಾಗಾಗಿಯೇ ಪಾಕಿಸ್ತಾನ ಸೇನೆ ಈಗ ದೊಡ್ಡ ಶಸ್ತ್ರಾಸ್ತ್ರಗಳಿಗಾಗಿ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳತ್ತ ಮುಖ ಮಾಡಿದೆ.
ಸಂಪಾದಕೀಯ ನಿಲುವುಪಾಕಿಸ್ತಾನದ ಆರ್ಥಿಕ ಸ್ಥಿತಿ ಈಗಾಗಲೇ ಹದಗೆಟ್ಟಿದೆ, ಅದರಲ್ಲಿ ಈಗ ಚೀನಾದ ಈ ವಂಚನೆ ಅದಕ್ಕೆ ಇನ್ನಷ್ಟು ಬರೆ ಬಿತ್ತು ! ಚೀನಾದ ಸಹವಾಸ ಮಾಡಿದರೇ ಇನ್ನೇನಾಗಬಹುದು ? |