ಸೌದಿ ರಾಜಕುಮಾರ ಮೇಲೆಯೇ ಟೀಕೆ !
ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತದ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಸೌದಿ ಅರೇಬಿಯಾದ ಪ್ರವಾಸ ಮಾಡಿದರು. ಈ ಸಮಯದಲ್ಲಿ ಅವರು ಮುಸ್ಲಿಮರಿಗೆ ಪವಿತ್ರವಾಗಿರುವ ಮದೀನಾಕ್ಕೆ ಹೋಗಿದ್ದರು. ಮದೀನಾಕ್ಕೆ ಭೇಟಿ ನೀಡುವಾಗ ಮಹಿಳೆಯರು ತಲೆಯನ್ನು ಮುಚ್ಚಿಕೊಳ್ಳಲು ಹಿಜಾಬ ಧರಿಸಬೇಕೆನ್ನುವುದು ಮುಸ್ಲಿಂ ಮತ್ತು ಸೌದಿ ಅರೇಬಿಯಾಗಳ ನಿಯಮವಾಗಿದೆ. ತಲೆಯನ್ನು ಮುಚ್ಚಿಕೊಳ್ಳದೇ ಬರುವ ಮಹಿಳೆಯರನ್ನು ಶಿಕ್ಷಿಸಲಾಗುತ್ತದೆ. ಸ್ಮೃತಿ ಇರಾನಿಯವರು ಸೀರೆಯನ್ನು ಧರಿಸಿದ್ದರು; ಆದರೆ ಅವರು ತಲೆಗೆ ಹಿಜಾಬ ಅಥವಾ ಇನ್ನಿತರ ಯಾವುದೇ ವಸ್ತ್ರದಿಂದ ಮುಚ್ಚಿರಲಿಲ್ಲ. ಈ ವಿಷಯದಲ್ಲಿ ಸೌದಿಯ ಸರಕಾರವು ಯಾವುದೇ ಅಡ್ಡಿಯನ್ನು ವ್ಯಕ್ತಪಡಿಸದಿದ್ದರೂ, ಪಾಕಿಸ್ತಾನಕ್ಕೆ ಇದರಿಂದ ಹೊಟ್ಟೆಯುರಿ ಆಗಿದೆ. ಅದು ಸೌದಿ ಅರೇಬಿಯಾ ದೇಶವನ್ನು ಟೀಕಿಸಿದೆ.
1. ಪಾಕಿಸ್ತಾನಿ ನಾಗರಿಕರು ಸೌದಿ ಅರೇಬಿಯಾದ ರಾಜಕುಮಾರ ಮಹಮ್ಮದ ಬಿನ್ ಸಲ್ಮಾನ ಅವರನ್ನು ಟೀಕಿಸುತ್ತಾ, ಅವರು ಕೇವಲ ಹಣವನ್ನು ನೋಡುತ್ತಿದ್ದಾರೆ. ಅವರು ಮಸೀದಿ ಮತ್ತು ಗೋರಿಗಳನ್ನು ಪ್ರವಾಸಿ ಸ್ಥಳಗಳನ್ನಾಗಿ ಮಾಡಿದ್ದಾರೆ. ಅವರಿಗೆ ಕೇವಲ ಹಣವೇ ಎಲ್ಲವೂ ಆಗಿದೆ. ಇದು ಒಳ್ಳೆಯದಲ್ಲ. ಅವರ ದೇಶದೊಂದಿಗೆ ಜಗತ್ತಿನಾದ್ಯಂತವಿರುವ ಮುಸಲ್ಮಾನರ ಶ್ರದ್ಧೆ ಜೋಡಿಸಲ್ಪಟ್ಟಿದೆ ಎನ್ನುವುದನ್ನು ಅವರು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.
2. ಇನ್ನೊಂದೆಡೆ ಕೆಲವು ಪಾಕಿಸ್ತಾನಿಗಳು ಈ ವಿಷಯದ ಬಗ್ಗೆ ಪಾಕಿಸ್ತಾನ ಮತ್ತು ಭಾರತದ ಹೋಲಿಕೆಯನ್ನು ಮಾಡುವಾಗ ಭಾರತದ ಅಭಿವೃದ್ಧಿಯನ್ನು ಶ್ಲಾಘಿಸಿದ್ದಾರೆ. ಪಾಕಿಸ್ತಾನಿಗಳು, ಜಗತ್ತು ಬದಲಾಗಿದೆ. ಸೌದಿ ಅರೇಬಿಯಾ ತನ್ನ ಲಾಭದ ವಿಚಾರವನ್ನು ಮಾಡುತ್ತಿದೆ. ಭಾರತವು ಒಂದು ದೊಡ್ಡ ಮಾರುಕಟ್ಟೆಯಾಗಿದೆ. ಇದರಿಂದ ಯಾರೂ ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಸೌದಿ ಅರೇಬಿಯಾ ತಮ್ಮ ಹಳೆಯ ಪರಂಪರೆಯಿಂದ ತನ್ನನ್ನು ಹೊರ ತರುತ್ತಿದೆ. ಅದು ತನ್ನ ದೇಶದ ಅರ್ಥವ್ಯವಸ್ಥೆಯನ್ನು ಹೆಚ್ಚಿಸುವ ವಿಚಾರ ಮಾಡುತ್ತಿದೆ. ಈ ಕಾರಣದೊಂದಿಗೆ ಸ್ಮೃತಿ ಇರಾನಿಯವರ ಪ್ರವಾಸದ ಕಡೆಗೆ ನೋಡಬೇಕು.
3. ಒಬ್ಬ ಪಾಕಿಸ್ತಾನಿಯು, ನಾವು ಇತರರ ತಪ್ಪುಗಳನ್ನು ಹುಡುಕುವದಕ್ಕಿಂತ ನಮ್ಮ ಕಡೆಗೆ ನೋಡಿಕೊಳ್ಳಬೇಕು. ಭಾರತವು ತನ್ನದೇ ಆದ ಸ್ಥಾನವನ್ನು ನಿರ್ಮಾಣ ಮಾಡಿಕೊಂಡಿದೆ. ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ ಎಮಿರಾಟ್ಸನಲ್ಲಿ ದೇವಸ್ಥಾನಗಳನ್ನು ಕಟ್ಟಲಾಗುತ್ತಿದೆ. ಅಲ್ಲಿಯ ರಾಜರು ಭಾರತದ ಪ್ರವಾಸ ಮಾಡುತ್ತಿದ್ದಾರೆ. ಪ್ರತಿಯೊಂದು ದೇಶವು ತನ್ನ ಲಾಭವನ್ನು ನೋಡುತ್ತಿದೆ. ಚೀನಾ ಕೂಡ ವ್ಯಾಪರದ ದೃಷ್ಟಿಯಿಂದ ಭಾರತದೊಂದಿಗೆ ಸಾಮೀಪ್ಯವನ್ನು ಸಾಧಿಸುತ್ತಿದೆ. ಯಾರೂ ಭಾರತದಂತಹ ಮಾರುಕಟ್ಟೆಯನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ, ಎಂದು ಹೇಳಿದರು.
#SmritiIrani leads rare non-Muslim delegation to #Medinah, #SaudiArabia, for Haj & Umrah Conference
🗞️ Catch the day’s latest news and updates ➠ https://t.co/KpPOXoSsop pic.twitter.com/byEjvUnWsw— Economic Times (@EconomicTimes) January 10, 2024