ಇಸ್ಲಾಮಾಬದ – ಪಾಕಿಸ್ತಾನದಲ್ಲಿ ೨೦೨೩ ರಲ್ಲಿ ಭಯೋತ್ಪಾದನೆಯಿಂದ ೧ ಸಾವಿರದ ೫೨೪ ಜನರು ಸಾವನ್ನಪ್ಪಿದ್ದು ಇದು ಕಳೆದ ೬ ವರ್ಷದಲ್ಲಿನ ಎಲ್ಲಕ್ಕಿಂತ ಹೆಚ್ಚಿನ ಸಂಖ್ಯೆಯಾಗಿದೆ. ಪಾಕಿಸ್ತಾನದಲ್ಲಿ ಸೆಂಟರ್ ಫಾರ್ ರಿಸರ್ಚ್ ಅಂಡ್ ಸೆಕ್ಯೂರಿಟಿ ಸ್ಟಡೀಸ್ ಈ ಸಂಸ್ಥೆಯಿಂದ ಅದರ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ.
Most deaths in Pakistan in 2023 linked to #terrorism
#Pakistan is reaping what it has sownGlobal Terrorism Index #MasoodAzhar Unknown Men pic.twitter.com/FUc43oMTEz
— Sanatan Prabhat (@SanatanPrabhat) January 1, 2024
ಈ ವರದಿಯ ಪ್ರಕಾರ ೨೦೨೩ ರಲ್ಲಿ ೭೮೯ ಭಯೋತ್ಪಾದಕ ದಾಳಿಗಳು ನಡೆದಿವೆ. ಸಾವನ್ನಪ್ಪಿರುವ ೧ ಸಾವಿರದ ೫೨೪ ಜನರಲ್ಲಿ ೧ ಸಾವಿರ ಸಾಮಾನ್ಯ ಜನರು ಹಾಗೂ ಉಳಿದಿರುವುದರಲ್ಲಿ ಸುರಕ್ಷಾ ವ್ಯವಸ್ಥೆಯ ಸೈನಿಕರ ಸಮಾವೇಶವಿದೆ. ಪಾಕಿಸ್ತಾನದಲ್ಲಿ ಈ ಹಿಂದೆ ೨೦೧೮ ರಲ್ಲಿ ಭಯೋತ್ಪಾದನೆಯಿಂದ ಈಗಿನಷ್ಟೆ ಜನರು ಹತರಾಗಿದ್ದರು. ಪಾಕಿಸ್ತಾನದಲ್ಲಿ ೨೦೨೧ ರಿಂದ ಭಯೋತ್ಪಾದಕ ಚಟುವಟಿಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿತ್ತು ಖೈಬರ್ ಪಖ್ತುನಖ್ವಾ ಮತ್ತು ಬಲೂಚಿಸ್ತಾನ್ ಈ ಪ್ರದೇಶ ಹಿಂಸಾಚಾರದ ಕೇಂದ್ರವಾಗಿದೆ. ಈ ಎರಡು ಭಾಗದಲ್ಲಿನ ಶೇಕಡ ೮೪ ರಷ್ಟು ಭಯೋತ್ಪಾದಕ ದಾಳಿಗಳು ನಡೆದಿವೆ.
ಸಂಪಾದಕೀಯ ನಿಲುವುಪಾಕಿಸ್ತಾನ ಏನು ಬಿತ್ತಿದೆ ಅದು ಈಗ ಬೆಳೆಯುತ್ತಿದೆ ! |