`ಭಾರತವು ಬಲೂಚಿ ಭಯೋತ್ಪಾದನೆಗೆ ಹಣ ಪೂರೈಸುತ್ತದೆ !’ (ಅಂತೆ) – ಪಾಕಿಸ್ತಾನದ ಹಂಗಾಮಿ ಪ್ರಧಾನ ಮಂತ್ರಿ ಅನ್ವರ್-ಅಲ್-ಹಕ್ ಕಾಕರ

ಪಾಕಿಸ್ತಾನದ ಹಂಗಾಮಿ ಪ್ರಧಾನ ಮಂತ್ರಿ ಅನ್ವರ್-ಅಲ್-ಹಕ್ ಕಾಕರರಿಂದ ಭಾರತದ ಮೇಲೆ ಸುಳ್ಳು ಆರೋಪ !

`ಬಲೂಚಿಸ್ಥಾನವನ್ನು ಬಾಂಗ್ಲಾದೇಶವಾಗಲು ಬಿಡುವುದಿಲ್ಲ’ ಎಂಬ ಹೇಳಿಕೆ ನೀಡಿದ ಕಾಕರ !

ಲಾಹೋರ (ಪಾಕಿಸ್ತಾನ) – ಬಲೂಚಿಸ್ತಾನದ ಸ್ವಾತಂತ್ರ್ಯದ ಬೇಡಿಕೆಯನ್ನಿಡುವ ಭಯೋತ್ಪಾದಕರಿಗೆ ಭಾರತ ಹಾಗೂ ಅದರ ಗುಪ್ತಚರ ಸಂಸ್ಥೆಯಾದ `ರಾ’ ದಿಂದ ನಿಧಿ ದೊರೆಯುತ್ತದೆ, ಎಂದು ಅವರು ಲಾಹೊರಿನಲ್ಲಿರುವ ಬಿಝೀನೆಸ್ ಫೆಸಿಲಿಟೇಶನ ಸೆಂಟರನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. `ಬಲೂಚಿಸ್ತಾನದ ಶೇ. 98 ರಷ್ಟು ಜನರು ಇಂದಿಗೂ ಪಾಕಿಸ್ತಾನದೊಂದಿಗೆ ಇದ್ದಾರೆ.ಇದು 1971 ಅಲ್ಲ. ಬಲೂಚಿಸ್ತಾನವು ಬೇರೆಯಾಗಲು ಬಾಂಗ್ಲಾದೇಶವಲ್ಲ, ಎಂಬ ಹೇಳಿಕೆಯನ್ನು ಭಾರತವನ್ನು ಉದ್ದೇಶಿಸಿ ಹೇಳಿದರು. ಸದ್ಯ ಪಾಕಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಬಲುಚಿ ಜನರಿಂದ ಆಂದೋಲನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕಾಕರ ರವರು ಈ ಹೇಳಿಕೆಯನ್ನು ನೀಡಿದ್ದಾರೆ.

1. ಪ್ರಧಾನಿ ಕಾಕರ ರವರು ಮುಂದುವರಿದು, ನಮ್ಮ ಹೋರಾಟವು ಬಲೂಚಿಸ್ತಾನದ ಸಶಸ್ತ್ರ ಸಂಘಟನೆಗಳ ವಿರುದ್ಧವಿದೆ. ಬಲೂಚಿ ಜನರ ವಿರುದ್ಧ ಅಲ್ಲ. ಆಂದೋಲನಕಾರರು ತಮ್ಮ ಕುಟುಂಬದವರು ದೇಶದ ವಿರುದ್ಧ ಕೆಲಸ ಮಾಡುತ್ತಿದ್ದರು ಎಂಬುದನ್ನು ತಿಳಿಯಬೇಕು. ಇದು ಪರಕೀಯರ ಸಹಾಯದಿಂದ ಮಾಡಿರುವ ಸಶಸ್ತ್ರ ಬಂಡಾಯವಾಗಿದೆ. ಭಾರತದಲ್ಲಿ ಯಾರಾದರೂ ಐ. ಎಸ್. ಐ. ನ ಹಣದಿಂದ ಹೊರಾಡಿದರೆ ಅದರ ಅವಸ್ಥೆ ಎನಾಗುವುದೆಂದು ನೋಡಿ, ಎಂದು ಹೇಳಿದರು.

2. ಬಲೂಚಿಸ್ತಾನದಲ್ಲಿ ನವೆಂಬರ್ 23, 2023 ರಂದು ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ವಿಭಾಗ ನಡೆಸಿದ್ದ ಕಾರ್ಯಾಚರಣೆಯಲ್ಲಿ 4 ಸಂಶಯಿತ ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಇದರಲ್ಲಿ ಮೌಲಾ ಬಕ್ಷ ಎಂಬ ಬಲೂಚಿ ಯುವಕನೂ ಸೇರಿದ್ದಾನೆ. ಇದರಿಂದಾಗಿ ಪಾಕಿಸ್ತಾನದಲ್ಲಿ ದೊಡ್ಡ ಆಂದೋಲನ ಆರಂಭವಾಗಿದೆ. ಜನರು ಬಲೂಚಿಸ್ತಾನದಿಂದ ಇಸ್ಲಾಮಾಬಾದಿನವರೆಗೆ 1600 ಕಿ. ಮಿ. ದೂರದ ವರೆಗೆ ಮೆರವಣಿಗೆ ನಡೆಸಿದರು. ಹಾಗೂ ಜನರು ಭಯೋತ್ಪಾದನಾ ವಿರೋಧಿ ವಿಭಾಗದಿಂದ ಶಸ್ತ್ರಗಳನ್ನು ಜಪ್ತು ಮಾಡಬೇಕು ಹಾಗೂ ಅವರ ವಶದಲ್ಲಿರುವ ಬಲೂಚಿ ಜನರನ್ನು ಬಿಡುಗಡೆ ಮಾಡಬೇಕು, ಎಂದು ಮನವಿ ಮಾಡಿದರು. ಕಾಕರರವರೂ ಬಲೂಚಿಸ್ತಾನದವರಾಗಿದ್ದಾರೆ. ಆದುದರಿಂದ ಅವರ ಮೇಲೆ ಟೀಕೆಗಳಾಗುತ್ತಿವೆ.

ಏನಿದು ಬಲೂಚಿಸ್ತಾನದ ಪ್ರಕರಣ ?

ಬಲೂಚಿಸ್ತಾನವು ಪಾಕಿಸ್ತಾನದ ಒಂದು ಪ್ರಾಂತ್ಯವಾಗಿದೆ. ಅದರ ರಾಜಧಾನಿ ಕ್ವೆಟಾ. ಇದರ ಗಡಿಯು ಇರಾನ್ ಹಾಗೂ ಅಫಘಾನಿಸ್ತಾನಕ್ಕೆ ತಾಗಿದೆ. ಈ ಪ್ರಾಂತ್ಯದಲ್ಲಿ ಚಿನ್ನ, ತಾಮ್ರ, ಹಾಗೆಯೇ ಇತರ ಖನಿಜಗಳ ಗಣಿಯಿದೆ. ಇದರಿಂದ ಪಾಕಿಸ್ತಾನಕ್ಕೆ ಅಪಾರ ಲಾಭವಾಗುತ್ತದೆ. ಬಲೂಚಿಸ್ತಾನದ ಜನರು ಈ ಪ್ರದೇಶದಿಂದ ಇಷ್ಟೊಂದು ಲಾಭ ಪಡೆದರೂ ಪಾಕಿಸ್ತಾನದ ಸರಕಾರವು ಇಲ್ಲಿನ ಜನರಿಗಾಗಿ ಏನೂ ಮಾಡುತ್ತಿಲ್ಲ. ಬಲೂಚಿಸ್ತಾನದ ಜನರು 1948 ರಿಂದ ಪಾಕಿಸ್ತಾನ ಸರಕಾರವನ್ನು ವಿರೋಧಿಸುತ್ತಿದೆ. ಅದು ಪಾಕಿಸ್ತಾನದಿಂದ ಸ್ವಾತಂತ್ರ್ಯ ಕೇಳುತ್ತಿದೆ. ಅದು `ಬಲೂಚ ನೇಶನಲ್ ಮೊವಮೆಂಟ್’ ಎಂಬ ಹೆಸರಿನ ಚಳುವಳಿಯನ್ನು ನಡೆಸುತ್ತಿದೆ. ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಮುಕ್ತಗೊಳಿಸುವುದೇ ಇದರ ಉದ್ದೇಶವಾಗಿದೆ. 1970 ರ ದಶಕದಲ್ಲಿ `ಬಲೂಚ ಲಿಬರೇಶನ ಆರ್ಮಿ’ಯ ಸ್ಥಾಪನೆಯಾಯಿತು. ಹಾಗೆಯೇ 2011 ರಲ್ಲಿ `ಮಾಜಿದ ಬ್ರಿಗೇಡ್’ ಅಸ್ತಿತ್ವಕ್ಕೆ ಬಂದಿತ್ತು. ಕರಾಚಿ ಸ್ಟಾಕ್ ಎಕ್ಸ್ಛೇಂಜ್ ಹಾಗೂ ಗ್ವಾದರದಲ್ಲಿನ ಆಕ್ರಮಣದಲ್ಲಿ ಮಾಜಿದ ಬ್ರಿಗೇಡ್ ನ ಹೆಸರು ಬೆಳಕಿಗೆ ಬಂದಿದೆ.

ಸಂಪಾದಕರ ನಿಲುವು 

ಪಾಕಿಸ್ತಾನದ ನಿರ್ಮಾಣವಾದಾಗ ಬಲೂಚಿಸ್ತಾನವು ಪಾಕಿಸ್ತಾನದ ಭಾಗವಾಗಿರಲಿಲ್ಲ. ಪಾಕಿಸ್ತಾನವು ಅದರ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಂಡಿತ್ತು. `ಅಲ್ಲಿನ ಜನರು ಸ್ವಾತಂತ್ರ್ಯಕ್ಕಾಗಿ ಕಳೆದ ೭೫ ವರ್ಷಗಳಿಂದ ಆಂದೋಲನಗಳನ್ನು ಮಾಡುತ್ತಿದ್ದಾರೆ’ ಎಂಬುದು ಜಗತ್ತಿಗೆ ತಿಳಿದಿದೆ. ಹೀಗಿರುವಾಗ ಆಂದೋಲನಕಾರರನ್ನು `ಭಯೋತ್ಪಾದಕರು’ ಎಂದು ಕರೆಯುವುದು ಹಾಗೂ ಅವರಿಗೆ ಸಹಾಯ ಮಾಡುತ್ತಿರುವುದಾಗಿ ಭಾರತದ ಮೇಲೆ ಆರೋಪ ಹೊರಿಸುವುದು ಪಾಕಿಸ್ತಾನದ ಭಾರತದ್ವೇಷವೇ ಆಗಿದೆ !

ಬಲೂಚಿಸ್ತಾನವು ಬಾಂಗ್ಲಾದೇಶವಲ್ಲ, ಮುಂದಿನ ೨-೩ ವರ್ಷಗಳಲ್ಲಿ ಪಾಕಿಸ್ತಾನವು ೪ ಭಾಗವಾಗಲಿದೆ, ಎಂಬುದು ಅಲ್ಲಿನ ನೇತಾರರಿಗೆ ತಿಳಿದಿದೆ. ಆದರೆ ತಮ್ಮ ಜನತೆಯನ್ನು ಕಗ್ಗತ್ತಲಿನಲ್ಲಿ ಇಡಲು ಪ್ರಯತ್ನಿಸುತ್ತಿದ್ದಾರೆ!