ಕರಾಚಿ (ಪಾಕಿಸ್ತಾನ) – ‘ನಮ್ಮ ರಾಜ ಶ್ರೀರಾಮನ ಭವ್ಯ ಮಂದಿರ ಕಟ್ಟಲಾಗಿದೆ, ಈಗ ಕೇವಲ ೮ ದಿನ ಬಾಕಿ ಉಳಿದಿದೆ, ಹೇಳಿ ಜಯ ಜಯ ಶ್ರೀ ರಾಮ’, ಎಂದು ಪಾಕಿಸ್ತಾನದ ಹಿಂದೂ ಧರ್ಮದ ಮಾಜಿ ಆಟಗಾರ ದಾನೀಶ ಕನೇರಿಯಾ ಇವರು ಅಯೋಧ್ಯೆಯಲ್ಲಿ ಕಟ್ಟಿರುವ ಶ್ರೀರಾಮ ಮಂದಿರದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಸಾರ ಮಾಡಿದ್ದಾರೆ. ಈ ಪೋಸ್ಟ್ ಜೊತೆಗೆ ತಮ್ಮ ಒಂದು ಛಾಯಾಚಿತ್ರ ಕೂಡ ಅವರು ಶೇರ ಮಾಡಿದ್ದಾರೆ. ಈ ಛಾಯಾ ಚಿತ್ರದಲ್ಲಿ ಅವರು ಕೇಸರಿ ಧ್ವಜ ಹಿಡಿದು ನಿಂತಿದ್ದಾರೆ. ಈ ದ್ವಜದ ಮೇಲೆ ಶ್ರೀ ರಾಮನ ಚಿತ್ರ ಮತ್ತು ದೇವಸ್ಥಾನ ಇದೆ.
हमारे राजा श्रीराम का भव्य मंदिर है तैयार,
अब सिर्फ 8 दिन का है इंतजार!बोलो जय जय श्री राम। pic.twitter.com/poojMBb7U4
— Danish Kaneria (@DanishKaneria61) January 14, 2024
Pakistan’s Hindu cricketer @DanishKaneria61 has also shared a post about the Shri Ram Temple with reference to #RamMandirPranPratishta
Karachi (#Pakistan) – “Our King, Prabhu Shriram’s magnificent temple is being constructed. Now, only 8 days are left. Chant ‘Jai Jai Shri Ram’!”… pic.twitter.com/8yKq8Ztx6N
— Sanatan Prabhat (@SanatanPrabhat) January 15, 2024
ದಾನೀಶ ಕನೇರಿಯಾ ಇವರು, ಅವರು ಪಾಕಿಸ್ತಾನ ಕ್ರಿಕೆಟ್ ಸಂಘದಲ್ಲಿ ಇರುವಾಗ ಅವರಿಗೆ ಇಸ್ಲಾಂ ಧರ್ಮ ಸ್ವೀಕರಿಸಲು ಮುಸಲ್ಮಾನ ಕ್ರಿಕೆಟ ಆಟಗಾರರು ಒತ್ತಡ ಹೇರುತ್ತಿದ್ದರು ಎಂದು ಹೇಳಿದ್ದರು. ಕನೇರಿಯಾ ಇವರು ಅನೇಕ ಸಲ ಭಾರತವನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡಿದ್ದಾರೆ. ಇತ್ತೀಚಿಗೆ ಮಾಲ್ಡಿವ್ಸ್ ಮತ್ತು ಭಾರತ ನಡುವಿನ ವಿವಾದದ ಬಗ್ಗೆ ಅವರು ಪೋಸ್ಟ್ ಪ್ರಸಾರ ಮಾಡಿದ್ದರು.