ISIS – ಇಸ್ಲಾಮಿಕ್ ಸ್ಟೇಟ್ ನಿಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುವ ಪ್ರಯತ್ನ !

ಪಾಕಿಸ್ತಾನದ ಗೃಹ ಸಚಿವಾಲಯದಿಂದ ಮಾಹಿತಿ !

ಇಸ್ಲಾಮಾಬಾದ – ಇಸ್ಲಾಮಿಕ ಸ್ಟೇಟ್ ಪಾಕಿಸ್ತಾನದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ಅದು ಧಾರ್ಮಿಕ ಅಲ್ಪಸಂಖ್ಯಾತರನ್ನು ಹಾಗೂ ಶಿಯಾ ಮುಸಲ್ಮಾನರನ್ನು ಗುರಿ ಮಾಡುವ ಪ್ರಯತ್ನ ಮಾಡುತ್ತಿದೆ, ಎಂದು ಪಾಕಿಸ್ತಾನದ ಗೃಹ ಸಚಿವಾಲಯವು ಇಲ್ಲಿಯ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು. ‘ಪಾಕಿಸ್ತಾನ್ ಇನ್ಸ್ಟಿಟ್ಯೂಟ್ ಫಾರ್ ಪ್ಲೀಸ್ ಸ್ಟಡೀಸ್’ ಈ ವರದಿಯ ಪ್ರಕಾರ ೨೦೨೩ ರಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯಲ್ಲಿ ಶೇಕಡ ೮೨ ರಷ್ಟು ಹತ್ಯೆಗಾಗಿ ತೆಹೇರಿಕ್ ಏ ತಾಲಿಬಾನ್ ಪಾಕಿಸ್ತಾನ, ಇಸ್ಲಾಮಿಕ್ ಸ್ಟೇಟ್ ಮತ್ತು ಬಲೂಜ್ ಲಿಬರೇಶನ್ ಆರ್ಮಿ ಹೊಣೆಗಾರರಾಗಿದ್ದಾರೆ ಎಂದು ಹೇಳಿದೆ.

ಅಮೇರಿಕಾವು ಅಪಘಾನಿಸ್ತಾನವನ್ನು ತೊರೆದ ನಂತರ ಅಪಘಾನಿಸ್ತಾನದಲ್ಲಿನ ‘ತೆಹರಿಕ್-ಏ’ತಾಲಿಬಾನ್ ಪಾಕಿಸ್ತಾನ’ ಈ ಭಯೋತ್ಪಾದಕ ಸಂಘಟನೆಯಿಂದ ಪಾಕಿಸ್ತಾನದಲ್ಲಿನ ಚಟುವಟಿಕೆ ಹೆಚ್ಚಾದವು. ಇದಕ್ಕಾಗಿ ಅದು ಇತರ ಸಂಘಟನೆಯ ಸಹಾಯ ಕೂಡ ಪಡೆಯುತ್ತಿದೆ. ಖೈಬರ್ ಪಾಖ್ಟುನಖ್ವ ಹಾಗೂ ಬಲೂಚಿಸ್ತಾನ್ ಈ ಪ್ರಾಂತದಲ್ಲಿ ಅದರ ಭಯೋತ್ಪಾದಕ ಚಟುವಟಿಕೆಯ ಪ್ರಮಾಣ ಹೆಚ್ಚಾಗಿದೆ..

ಸಂಪಾದಕೀಯ ನಿಲುವು

ಇದರಲ್ಲಿ ಸತ್ಯ ಇದ್ದರೂ ಕೂಡ, ಅಲ್ಲಿಯ ಮತಾಂಧ ಜನರು ಅಲ್ಪಸಂಖ್ಯಾತ ಹಿಂದೂಗಳ ಸರ್ವನಾಶ ಮಾಡುತ್ತಿದ್ದಾರೆ. ಅದರಿಂದ ಇಸ್ಲಾಮಿಕ್ ಸ್ಟೇಟ್ ಮಾಧ್ಯಮದಿಂದ ಅವರಿಗೆ ಇದಕ್ಕಾಗಿ ಸಹಾಯವೇ ಆಗುತ್ತಿರಬಹುದು, ಇದನ್ನು ತಿಳಿದುಕೊಳ್ಳಿ !