ಪಾಕಿಸ್ತಾನದಿಂದ ಭಯೋತ್ಪಾದಕ ಹಾಫೀಜ್ ಸಯಿದನನ್ನು ಭಾರತಕ್ಕೆ ಹಸ್ತಾಂತರಿಸಲು ನಿರಾಕರಣೆ 

ಎರಡು ದೇಶಗಳಲ್ಲಿ ಹಸ್ತಾಂತರದ ಒಪ್ಪಂದ ಇಲ್ಲದಿರುವ ಕಾರಣ ನೀಡಿದರು !

ಇಸ್ಲಾಮಾಬಾದ(ಪಾಕಿಸ್ತಾನ) – ಪಾಕಿಸ್ತಾನವು ಮುಂಬಯಿ ಮೇಲೆ ನಡೆಸಿರುವ ದಾಳಿಯ ಮುಖ್ಯ ಸೂತ್ರಧಾರ ಹಾಫಿಜ್ ಸಯಿದ್ ಇವನನ್ನು ಭಾರತಕ್ಕೆ ಹಸ್ತಾಂತರಿಸಲು ಸಲ್ಲಿಸಲಾದ ಬೇಡಿಕೆಯನ್ನು ತಿರಸ್ಕರಿಸಲಾಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿನ ‘ಡಾನ್’ ವೃತ್ತ ಪತ್ರದಲ್ಲಿ ವಾರ್ತೆ ಪ್ರಸಾರವಾಗಿದೆ. ಈ ವಾರ್ತೆಯಲ್ಲಿ, ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮುಮತಾಜ ಝಾರಾ ಬಲುಚ ಇವರು, ಪಾಕಿಸ್ತಾನಕ್ಕೆ ಭಾರತ ಸರಕಾರದಿಂದ ಆರ್ಥಿಕ ಹಗರಣದ ಪ್ರಕರಣದಲ್ಲಿ ಹಾಫೀಜ್ ಸಯೀದ್ ನನ್ನು ಹಸ್ತಾಂತರಿಸಲು ವಿನಂತಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಇವರಲ್ಲಿ ಆರೋಪಿಗಳ ಹಸ್ತಾಂತರದ ಸಂದರ್ಭದಲ್ಲಿ ಯಾವುದೇ ಒಪ್ಪಂದ ಅಸ್ತಿತ್ವದಲ್ಲಿ ಇಲ್ಲ. ಈ ಸಂದರ್ಭದಲ್ಲಿ ನಾವು ಇದನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ ಬಾಗಚಿ ಇವರು ಕೆಲವು ದಿನಗಳ ಹಿಂದೆ, ‘ಹಾಫಿಜ್ ಸಯಿದ್ ಇವನಿಗೆ ಭಾರತಕ್ಕೆ ಹಸ್ತಾಂತರಿಸಬೇಕು’, ಎಂದು ನಾವು ಪಾಕಿಸ್ತಾನ ಸರಕಾರಕ್ಕೆ ವಿನಂತಿಸಿದ್ದೇವೆ. ಅದಕ್ಕಾಗಿ ಸಂಬಂಧಪಟ್ಟ ಎಲ್ಲಾ ದಾಖಲೆಗಳು ಕೂಡ ನಾವು ನೀಡಿದ್ದೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನದಿಂದ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರದ ಅಪೇಕ್ಷೆ ಕೂಡ ಮಾಡಲಾಗದು. ಎಲ್ಲಿಯವರೆಗೆ ಭಾರತವು ಪಾಕಿಸ್ತಾನವನ್ನು ನಾಶ ಮಾಡುವುದಿಲ್ಲ, ಅಲ್ಲಿಯವರೆಗೆ ಪಾಕಿಸ್ತಾನದಲ್ಲಿ ಭಾರತ ವಿರೋಧಿ ಭಯೋತ್ಪಾದಕರಿಗೆ ಶಿಕ್ಷೆ ಆಗಲು ಸಾಧ್ಯವಿಲ್ಲ !