ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಕುರೈಶಿ ಇವರ ಬಿಡುಗಡೆ ಆದ ನಂತರ ಪಾಕಿಸ್ತಾನ ಮತ್ತೆ ಜೈಲಿಗಟ್ಟಿತು !

ಇಸ್ಲಾಮಬಾದ (ಪಾಕಿಸ್ತಾನ) – ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಶಾಹ ಮಹಮ್ಮದ ಕುರೈಶಿ ಇವರು ಜೈಲಿನಿಂದ ಬಿಡುಗಡೆ ಆದ ಕೂಡಲೇ ಪೊಲೀಸರು ಅವರಿಗೆ ಮತ್ತೊಮ್ಮೆ ಬಂಧಿಸಿ ರಾವಳಪಿಂಡಿಯಲ್ಲಿನ ಜೈಲಿಗೆ ಅಟ್ಟಿದರು. ಈ ಘಟನೆಯ ವಿಡಿಯೋ ಪ್ರಸಾರವಾಗಿದೆ. ಇದರಲ್ಲಿ ಪೊಲೀಸರು ಕುರೈಶಿ ಇವರನ್ನು ಎಳೆದುಕೊಂಡು ಕಾರಾಗೃಹಕ್ಕೆ ಹೋಗುತ್ತಿರುವುದು ಕಾಣುತ್ತಿದೆ. ಅವರಿಗೆ ಪಾಕಿಸ್ತಾನ ಮತ್ತು ಅಮೆರಿಕ ಇವರಲ್ಲಿನ ಒಂದು ಪ್ರಕರಣದ ಮಾಹಿತಿ ಬಹಿರಂಗಪಡಿಸಿರುವುದಕ್ಕಾಗಿ ಬಂಧಿಸಲಾಗಿತ್ತು. ಅವರಿಗೆ ಮತ್ತೊಮ್ಮೆ ಯಾವ ಅಪರಾಧದ ಅಡಿಯಲ್ಲಿ ಬಂದಿಸಲಾಗಿದೆ ? ಇದು ತಿಳಿದು ಬಂದಿಲ್ಲ. ಕುರೈಶಿ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಇವರ ತಹರಿಕ್-ಎ-ಇನ್ಸಾಫ ಈ ಪಕ್ಷದ ಉಪಾಧ್ಯಕ್ಷರು ಕೂಡ ಆಗಿದ್ದಾರೆ.

ಸೋಮನಾಥ ಮಂದಿರ ಮತ್ತೊಮ್ಮೆ ನೆಲೆಸಮಾಡುವೆವು ಎಂದು ಕುರೈಶಿಯು ಬೆದರಿಕೆ ನೀಡಿದ್ದರು !

ಶಹಾ ಮಹಮ್ಮದ್ ಕುರೈಶಿ ಇವರು ಭಾರತದಲ್ಲಿನ ಗುಜರಾತದ ಸೋಮನಾಥ ದೇವಸ್ಥಾನ ಮತ್ತೊಮ್ಮೆ ನೆಲಸಮ ಮಾಡುವ ಬೆದರಿಕೆ ನೀಡಿದ್ದರು. ಅವರು ತಮ್ಮನ್ನು ತಾವು ‘ಮಹಮ್ಮದ್ ಗಝನಿಯ ವಂಶಜ’ರೆಂದು ಹೇಳಿದ್ದರು. ಕುರೈಶಿ ಇವರು ಹಿಂದುತ್ವಕ್ಕೆ ‘ಅಪಾಯ’ ಎಂದು ಹೇಳಿದ್ದಾರೆ. ಅವರ ವಿವಿಧ ರಾಜಕೀಯ ಹೇಳಿಕೆಯಿಂದ ಪಾಕಿಸ್ತಾನದ ಸೌದಿ ಅರೇಬಿಯಾ ಮತ್ತು ಇತರ ಅರಭ ದೇಶಗಳ ಜೊತೆಗಿನ ಸಂಬಂಧ ಹದಗೆಟ್ಟಿದ್ದವು. ಕುರೈಶಿ ಇವರು ತಾಲಿಬಾನವನ್ನು ‘ಶಾಂತಿಯ ಸಂಘಟನೆ’ ಎಂದು ಹೇಳಿದ್ದರು. (ಭಾರತದ ವಿರೋಧದಲ್ಲಿ, ಹಿಂದುತ್ವದ ವಿರೋಧದಲ್ಲಿ ಪಾಕಿಸ್ತಾನದಲ್ಲಿ ಅಧಿಕಾರದಲ್ಲಿರುವ ರಾಜಕಾರಣಿಗಳಿಂದ ಎಷ್ಟೇ ಕಾರಸ್ಥಾನ ನಡೆಸಿದರೂ ಅಧಿಕಾರ ಹೋದ ತಕ್ಷಣ ಅವರು ರಾಜಕೀಯ ಕಿರುಕುಳ ಎದುರಿಸಬೇಕಾಗುತ್ತದೆ, ಇದೇ ಕುರೈಶಿ ಇವರ ಘಟನೆಯಿಂದ ಮತ್ತೊಮ್ಮೆ ಬೆಳಕಿಗೆ ಬಂದಿದೆ ! – ಸಂಪಾದಕರು)