|
ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಖೈಬರ್ ಪಾಖ್ಟುನಖ್ವ ಈ ಪ್ರಾಂತ್ಯದಲ್ಲಿನ ಬುನೆರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮೊಟ್ಟಮೊದಲು ಹಿಂದೂ ಮಹಿಳೆ ಡಾ. ಸವಿರಾ ಪ್ರಕಾಶ ಇವರ ಕುರಿತು ಪಾಕಿಸ್ತಾನದಲ್ಲಿ ಎಲ್ಲಾ ಕಡೆ ಚರ್ಚೆ ನಡೆಯುತ್ತಿದೆ. ಅವರು ತಮ್ಮನ್ನು ಓರ್ವ ‘ದೇಶಭಕ್ತ ಹಿಂದೂ’ ಎಂದು ಹೇಳಿದ್ದಾರೆ. ಡಾ. ಸವಿರಾ ಇವರು, ನಾನು ಏನಾದರೂ ಚುನಾವಣೆಯಲ್ಲಿ ಗೆದ್ದರೆ, ಭಾರತ ಮತ್ತು ಪಾಕಿಸ್ತಾನ ನಡುವೆ ಸೇತುವೆಯ ಕೆಲಸ ಮಾಡಿ ಪಾಕಿಸ್ತಾನದಲ್ಲಿನ ಹಿಂದುಗಳ ಸಮಸ್ಯೆ ಪರಿಹರಿಸಲು ಸಹಾಯ ಮಾಡುವೆ ಎಂದು ಹೇಳಿದರು.
ಡಾ. ಸವಿರಾ ಇವರು ಮಾತು ಮುಂದುವರಿಸಿ, ಚುನಾವಣಾ ಕ್ಷೇತ್ರದಲ್ಲಿನ ಮುಸಲ್ಮಾನರು ನನಗೆ ಮತ ನೀಡುವ ಆಶ್ವಾಸನೆ ನೀಡಿ ನನಗೆ ಬೆಂಬಲ ನೀಡಿದ್ದಾರೆ. ನನ್ನ ವಿಜಯದ ನಂತರ ಎರಡು ದೇಶದಲ್ಲಿನ ಹಿಂದೂಗಳು ನನ್ನ ಜೊತೆ ನಿರ್ಭಯತೆಯಿಂದ ಸಂಪರ್ಕಿಸಬಹುದು. ಎರಡೂ ದೇಶಗಳಲ್ಲಿನ ಸಂಬಂಧ ದೃಢಗೊಳಿಸುವುದಕ್ಕಾಗಿ ನಾನು ಸಕಾರಾತ್ಮಕ ನಿಲುವು ತಾಳಿ ಪ್ರಯತ್ನ ಮಾಡುವೆನು ಎಂದು ಹೇಳಿದರು.
Pakistan’s first Hindu female candidate for general elections, Dr. Saveera Parkash assures, ‘If elected, will work to tackle the difficulties of Hindus in #Pakistan‘
👉 Wishing success to @saveera_parkash, also expecting Pakistan’s politicians and the Mu$l!ms, to let Dr. Parkash… pic.twitter.com/1jH2zmoQSX
— Sanatan Prabhat (@SanatanPrabhat) January 3, 2024